Advertisement
ಆದರೆ ಮಧುಮೇಹ ತಲೆದೋರಿದರೆ ಗುಣ ಎಂಬುದೇ ಇಲ್ಲ; ನಿಯಂತ್ರಣ ಇರಿಸಿಕೊಳ್ಳಬಹುದು ಅಷ್ಟೇ! ಹೀಗಾಗಿಯೇ ಮಧುಮೇಹ ಉಂಟಾಗದಂತೆ ತಡೆಯುವುದು ಹೇಗೆ ಮತ್ತು ಅದು ತಲೆದೋರಿದರೆ ಅದನ್ನು ಸಮರ್ಪಕವಾಗಿ ನಿರ್ವಹಿಸುವುದು ಹೇಗೆ ಎಂಬುದು ಬಹಳ ಪ್ರಾಮುಖ್ಯವಾಗಿದೆ. ಸಾಮಾನ್ಯವಾಗಿ ಕಂಡುಬರುವ ಮಧುಮೇಹ -ಟೈಪ್ 1, ಮಧುಮೇಹ- ಟೈಪ್2, ಗರ್ಭಧಾರಣೆಯ ಸಮಯದಲ್ಲಿ ಕಾಣಿಸಿಕೊಳ್ಳುವಂಥದ್ದು ಆಗಿರಲಿ ಅಥವಾ ಯಾವುದೇ ವಿಧವಾದ ಮಧುಮೇಹವಾಗಿರಲಿ; ಸಮರ್ಪಕ ನಿಯಂತ್ರಣ ಮತ್ತು ಚಿಕಿತ್ಸೆಯ ಹೂರಣ ಎಂದರೆ “ಆಹಾರಕ್ರಮವನ್ನು ಸರಿಪಡಿಸಿಕೊಳ್ಳುವುದು.’
Related Articles
Advertisement
ಸಂಪೂರ್ಣವಾಗಿ ಹೊಸ ಪಥ್ಯಾಹಾರ ಕ್ರಮವನ್ನು ಅಳವಡಿಸಿಕೊಳ್ಳುವುದಕ್ಕಿಂತ ಈಗ ಇರುವ ಆಹಾರ ಕ್ರಮವನ್ನು ಸಮರ್ಪಕವಾಗಿ ಬದಲಾಯಿಸಿಕೊಂಡು ಅನುಸರಿಸುವುದು ಪ್ರಾಯೋಗಿಕವಾಗಿ ಹೆಚ್ಚು ಸುಲಭ, ಯೋಗ್ಯ.
ಮಾದರಿ ದೇಹತೂಕವನ್ನು ಸಾಧಿಸಿ, ಮುಂದುವ ರಿಸುವುದು ಪ್ರಾಮುಖ್ಯ.
ಸಂಸ್ಕರಿತ ಆಹಾರಗಳು ಕಡಿಮೆ ಇರುವ ಪೌಷ್ಟಿಕಾಂಶಗಳು, ಸಂಕೀರ್ಣ ಕಾರ್ಬೋಹೈಡ್ರೇಟ್ ಗಳು, ಉತ್ತಮ ಗುಣಮಟ್ಟದ ಪ್ರೊಟೀನ್ ಸಮೃದ್ಧವಾಗಿರುವ, ಸ್ಯಾಚುರೇಟೆಡ್ ಕೊಬ್ಬುಗಳು ಕಡಿಮೆ ಇರುವ ಹಾಗೂ ಕರಗಬಲ್ಲ ನಾರಿನಂಶ ಹೆಚ್ಚಿರುವ ಸಮತೋಲಿತ ಆಹಾರ ಕ್ರಮವನ್ನು ಅನುಸರಿಸಬೇಕು.
ಮಧುಮೇಹಿ ಆಹಾರ ಕ್ರಮ ಹೇಗೆ?
- ಸರಳ ವಿಧಾನವೆಂದರೆ ಒಂದು ಬಟ್ಟಲು ವಿಧಾನವನ್ನು ಅನುಸರಿಸುವುದು
- ಆಗಾಗ ಸಣ್ಣ ಪ್ರಮಾಣದಲ್ಲಿ ಆಹಾರ ಸೇವಿಸಿ: ಬೆಳಗಿನ ಉಪಾಹಾರ, ಪೂರ್ವಾಹ್ನದ ತಿನಿಸು, ಮಧ್ಯಾಹ್ನದ ಊಟ, ಸಂಜೆಯ ಉಪಾಹಾರ ಮತ್ತು ರಾತ್ರಿಯೂಟ.
- ಪ್ರತೀ ಬಾರಿಯ ಆಹಾರದಲ್ಲಿಯೂ ತರಕಾರಿಗಳನ್ನು ಪಲ್ಯ/ ಸಬ್ಜಿ ಅಥವಾ ಸಲಾಡ್ ರೂಪದಲ್ಲಿ ಉಪಯೋಗಿಸಿ. ತರಕಾರಿಗಳಲ್ಲಿ ಇರುವ ನಾರಿನಂಶವು ರಕ್ತದಲ್ಲಿ ಗ್ಲುಕೋಸ್ ಮಟ್ಟವನ್ನು, ಕೊಲೆಸ್ಟರಾಲ್ ಮಟ್ಟವನ್ನು ಮತ್ತು ಬಿಎಂಐ ತಗ್ಗಿಸಲು ಸಹಾಯ ಮಾಡುತ್ತದೆ.
- ನಿಮ್ಮ ದೈಹಿಕ ಚಟುವಟಿಕೆಯ ಮಟ್ಟಕೆ ಅನುಗುಣವಾಗಿ ಆಹಾರ ಸೇವಿಸಿ. ಅಂದರೆ, ಬೆಳಗಿನ ಉಪಾಹಾರ ಹೊಟ್ಟೆ ತುಂಬ ಸೇವಿಸಿ (ಧಾನ್ಯಗಳು-ಬೇಳೆಕಾಳುಗಳು ಸಂಯೋಜಿತವಾಗಿರಲಿ), ಮಧ್ಯಾಹ್ನದ ಊಟ ಮಿತವಾಗಿರಲಿ ಮತ್ತು ರಾತ್ರಿಯೂಟ ಲಘುವಾಗಿರಲಿ.
- ಊಟ-ಉಪಾಹಾರಗಳ ಪ್ರಮಾಣವನ್ನು ಕಡಿಮೆ ಮಾಡಿ. ಅಂದರೆ, ಬೆಳಗಿನ ಉಪಾಹಾರಕ್ಕೆ 2 ದೋಸೆಗಳು, ಮಧ್ಯಾಹ್ನದ ಊಟಕ್ಕೆ 1 ಕಪ್ ಅನ್ನ, ರಾತ್ರಿಯೂಟಕ್ಕೆ ಅರ್ಧ ಕಪ್ ಅನ್ನ ಮತ್ತು 1 ರೋಟಿ.
- ಸ್ಥಳೀಯವಾಗಿ ದೊರಕುವ ರಾಗಿ, ಹರಿವೆ ಸೊಪ್ಪು, ನುಗ್ಗೆಸೊಪ್ಪು, ಬಸಳೆ, ನೆಲ್ಲಿಕಾಯಿ, ಪಪ್ಪಾಯಿ, ಬೆಂಡೆ, ಕರಿಬೇವು, ಪೇರಳೆ ಇತ್ಯಾದಿ ಹಣ್ಣು ತರಕಾರಿಗಳನ್ನು ಬಳಸಿ. ಇತರ ಪ್ರದೇಶಗಳಿಂದ ಆವಕವಾದ ಹಣ್ಣು ತರಕಾರಿಗಳಿಗಿಂತ ನಮ್ಮ ಪ್ರದೇಶದಲ್ಲಿಯೇ ಬೆಳೆದವು ಹೆಚ್ಚು ಪೌಷ್ಟಿಕಾಂಶ ಹೊಂದಿರುತ್ತವೆ, ನಮ್ಮ ದೇಹಪ್ರಕೃತಿಗೆ ಹೆಚ್ಚು ಒಗ್ಗುತ್ತವೆ.
- ಪೇರಳೆ, ಕಿತ್ತಳೆ, ಮೂಸಂಬಿ, ಪಪ್ಪಾಯಿ, ಕಲ್ಲಂಗಡಿ, ಮಸ್ಕ್ ಮೆಲನ್ ಇತ್ಯಾದಿ ಹಣ್ಣುಗಳನ್ನು ಸೇವಿಸಿ (ದಿನಕ್ಕೆ 50 ಗ್ರಾಂ ಅಥವಾ ಮಧ್ಯಮ ಗಾತ್ರದ ಸೇಬು). ಬಾಳೆಹಣ್ಣು, ಚಿಕ್ಕು, ದ್ರಾಕ್ಷಿ, ಸೀತಾಫಲದಂತಹ ಹಣ್ಣುಗಳಲ್ಲಿ ಹೆಚ್ಚು ಸಕ್ಕರೆಯಂಶ ಇರುವ ಕಾರಣ ಇವು ಬೇಡ.
- ಆಳವಾಗಿ ಕರಿದ/ ಪೊಟ್ಟಣಗಳಲ್ಲಿ ಸಿಗುವ ಆಹಾರವಸ್ತುಗಳನ್ನು ಸೇವಿಸಬೇಡಿ. ಅವುಗಳಲ್ಲಿ ಟ್ರಾನ್ಸ್ ಫ್ಯಾಟ್, ಕೇವಲ ಕ್ಯಾಲೊರಿಗಳು ಹೆಚ್ಚಿರುತ್ತವೆ. ಆಹಾರವಸ್ತುಗಳನ್ನು ಹಬೆಯಲ್ಲಿ ಬೇಯಿಸುವುದು, ಕುದಿಸಿ ಉಪಯೋಗಿಸುವುದು ಉತ್ತಮ.
- ನೆಲಗಡಲೆ, ಟೊಮೇಟೊ, ಹುರಿಗಡಲೆ ಇತ್ಯಾದಿಗಳನ್ನು ಚಟ್ನಿ, ಪದಾರ್ಥಗಳ ರಸ ತಯಾರಿಸಲು ಉಪಯೋಗಿಸಿ, ತೆಂಗಿನಕಾಯಿ ಉಪಯೋಗವನ್ನು ಕಡಿಮೆ ಮಾಡಿ. ತೆಂಗಿನಕಾಯಿಯಲ್ಲಿ ಸ್ಯಾಚುರೇಟೆಡ್ ಕೊಬ್ಬು ಹೆಚ್ಚಿರುತ್ತದೆ, ದೈಹಿಕವಾಗಿ ಹೆಚ್ಚು ಸಕ್ರಿಯರಲ್ಲದ ಜನರು ತೆಂಗಿನಕಾಯಿ ಉಪಯೋಗವನ್ನು ಕಡಿಮೆ ಮಾಡಬೇಕು. ಹುರಿದ ನೆಲಗಡಲೆ, ಹುರಿಗಡಲೆ, ಮಖಾನಾ (ತಾವರೆ ಬೀಜ)ಗಳನ್ನು ಉಪಾಹಾರವಾಗಿ ಸೇವಿಸಬಹುದು.
- ದಿನಕ್ಕೆ 2-3 ಲೀಟರ್ ನೀರು/ ದ್ರವಾಹಾರ ಸೇವಿಸಿ. ಎಳನೀರು, ಗಂಜಿ/ ದಪ್ಪ ಅಂಬಲಿ ಸೇವನೆ ಬೇಡ. ತೆಳುವಾದ ಓಟ್ಸ್ ಮತ್ತು ರಾಗಿ ಅಂಬಲಿಯನ್ನು ಬಳಸಬಹುದು.
- ಖಾದ್ಯ ಎಣ್ಣೆಯ ಬಳಕೆ ಪ್ರತೀ ವ್ಯಕ್ತಿಗೆ ತಿಂಗಳಿಗೆ 500 ಮಿ.ಲೀ.ಗಳಷ್ಟು ಮಿತವಾಗಿರಬೇಕು. ಉದಾಹರಣೆಗೆ, ನಾಲ್ಕು ಮಂದಿಯ ಒಂದು ಕುಟುಂಬಕ್ಕೆ ತಿಂಗಳಿಗೆ 2 ಲೀಟರ್ ಎಣ್ಣೆ. ಖಾದ್ಯ ಎಣ್ಣೆ, ಭತ್ತದ ತೌಡಿನ ಎಣ್ಣೆ (ರೈಸ್ ಬ್ರ್ಯಾನ್ ಆಯಿಲ್)ಗಳನ್ನು ಸಂಯೋಜಿತವಾಗಿ ಉಪಯೋಗಿಸುವುದರಿಂದ ರಕ್ತದಲ್ಲಿ ಕೊಲೆಸ್ಟರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯವಾಗುತ್ತದೆ.
- ಆಹಾರ ವಸ್ತುಗಳ ಪೊಟ್ಟಣಗಳ ಮೇಲಿರುವ ಲೇಬಲ್ಗಳನ್ನು ಎಚ್ಚರಿಕೆಯಿಂದ ಓದಿ. ಸಕ್ಕರೆ ರಹಿತ, ಕೊಬ್ಬು ರಹಿತ ಅಥವಾ ಹೆಚ್ಚು ನಾರಿನಂಶ ಹೊಂದಿರುವ ಆಹಾರವಸ್ತುಗಳಲ್ಲಿ ಕ್ಯಾಲೊರಿಗಳು ಮತ್ತು ಕಾರ್ಬೋಹೈಡ್ರೇಟ್ ಕಡಿಮೆ ಇರುತ್ತದೆ.
- ದೈಹಿಕವಾಗಿ ಚಟುವಟಿಕೆಯಿಂದ ಇರಿ. ಪ್ರತೀದಿನ ಕನಿಷ್ಠ 45 ನಿಮಿಷ ಬಿರುಸಾದ ನಡಿಗೆ ಇರಲಿ. ಪ್ರತೀದಿನ ಯೋಗ, ಪ್ರಾಣಾಯಾಮ, ವಿವಿಧ ಹವ್ಯಾಸಗಳಲ್ಲಿ ತೊಡಗಿಕೊಳ್ಳುವ ಮೂಲಕ ಒತ್ತಡವನ್ನು ನಿಭಾಯಿಸಿ.
- ಉಪವಾಸ ಮಾಡಬೇಡಿ, ಅದರಿಂದ ಹೈಪೊಗ್ಲೈಸೇಮಿಯಾ (ರಕ್ತದಲ್ಲಿ ಗುÉಕೋಸ್ ಅಂಶ ಹಠಾತ್ ಕುಸಿಯುವುದು) ಉಂಟಾಗಬಹುದು. ಹಾಗೆಯೇ ಹೊಟ್ಟೆ ಬಿರಿಯೆ ಆಹಾರ ಸೇವಿಸುವುದು ಕೂಡ ಸಲ್ಲದು.
- ಮದ್ಯಪಾನ, ಧೂಮಪಾನ ಮತ್ತು ತಂಬಾಕು ಬಳಕೆಯನ್ನು ನಿಲ್ಲಿಸಿ. ಮದ್ಯಪಾನದಿಂದ ಹೈಪೊಗ್ಲೈಸೇಮಿಯಾ, ದೇಹತೂಕ ಹೆಚ್ಚಳ ಮತ್ತು ಹೈಪರ್ ಗ್ಲೆ„ಸೇಮಿಯಾ ಉಂಟಾಗಬಹುದು.
- ಸುಳ್ಳು: ಮಧುಮೇಹಿಗಳು ಸಕ್ಕರೆ ಉಪಯೋಗಿಸಬಾರದು; ಬೆಲ್ಲ ಬಳಸಬಹುದು. ಸತ್ಯ: ಸಕ್ಕರೆ, ಬೆಲ್ಲ ಮತ್ತು ಜೇನುತುಪ್ಪ ಇವೆಲ್ಲವೂ ಸಕ್ಕರೆ ವಸ್ತುಗಳಾಗಿದ್ದು, ರಕ್ತದಲ್ಲಿ ಗ್ಲುಕೋಸ್ ಅಂಶವನ್ನು ನೇರವಾಗಿ ಹೆಚ್ಚಿಸುತ್ತವೆ. ಈ ಎಲ್ಲವುಗಳ ಬಳಕೆಯನ್ನೂ ವರ್ಜಿಸಬೇಕು.
- ಸುಳ್ಳು: ಅನ್ನ/ಗೋಧಿ ಉಪಯೋಗಿಸಬಾರದು. ಸತ್ಯ: ಅನ್ನ ಅಥವಾ ಗೋಧಿಯನ್ನು ಮಿತಪ್ರಮಾಣದಲ್ಲಿ ಸಮ ಪ್ರಮಾಣದಲ್ಲಿ ಹೆಚ್ಚು ನಾರಿನಂಶವಿರುವ ತರಕಾರಿಗಳ ಜತೆಗೆ ಸೇವಿಸಬಹುದು. ಗ್ಲುಟೆನ್ಗೆ ಪ್ರತಿಸಂವೇದನೆ/ ಅಲರ್ಜಿ ಇದ್ದಾಗ ಮಾತ್ರ ಗೋಧಿ ಬಳಕೆ ನಿಲ್ಲಿಸಬೇಕು.
- ಸುಳ್ಳು: ಹಾಲು/ ಮೊಸರು ಸೇವಿಸಬಾರದು. ಸತ್ಯ: ಹಾಲು ಮತ್ತು ಮೊಸರು ಕ್ಯಾಲ್ಸಿಯಂ ಮತ್ತು ಪ್ರೊಟೀನ್ನ ಉತ್ತಮ ಮೂಲಗಳಾಗಿವೆ. ಕೆನೆಯನ್ನು ತೆಗೆದು ಇವುಗಳನ್ನು ಮಿತಪ್ರಮಾಣದಲ್ಲಿ ಸೇವಿಸಬಹುದು.
- ಸುಳ್ಳು: ಎಲ್ಲ ಕಾಯಿ/ಬೀಜಗಳನ್ನು ಸೇವಿಸಬಹುದು. ಸತ್ಯ: ಬಾದಾಮಿ, ವಾಲ್ನಟ್, ಪಿಸ್ತಾ, ನೆಲಗಡಲೆಗಳನ್ನು ಮಿತಪ್ರಮಾಣದಲ್ಲಿ ಸೇವಿಸಬಹುದು. ಗೇರುಬೀಜ, ಒಣದ್ರಾಕ್ಷಿ, ಅಂಜೂರ ಮತ್ತು ಖರ್ಜೂರ ಸೇವನೆ ಬೇಡ.
- ಸುಳ್ಳು: ಕಹಿ ರುಚಿಯ ಎಲ್ಲ ಆಹಾರವಸ್ತುಗಳು ರಕ್ತದ ಗ್ಲುಕೋಸ್ ಮಟ್ಟ ನಿಯಂತ್ರಣಕ್ಕೆ ಸಹಕಾರಿ. ಸತ್ಯ: ಮೆಂತೆಸೊಪ್ಪು/ ಮೆಂತೆ ಮಾತ್ರ ಪ್ರಯೋಜನಕಾರಿ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಅರಶಿನ, ದಾಲಿcನ್ನಿಯಂತಹ ಸಂಬಾರವಸ್ತುಗಳನ್ನು ಮಿತಪ್ರಮಾಣದಲ್ಲಿ ಉಪಯೋಗಿಸಬಹುದು. “ಮಧುಮೇಹವನ್ನು ಅದು ನಿಮ್ಮನ್ನು ನಿಯಂತ್ರಿಸುವುದಕ್ಕೆ ಮುನ್ನ ಹಿಡಿತಕ್ಕೆ ತಂದುಕೊಳ್ಳಿ!’