Advertisement

ಗಂಡ ಊಟ ತಡವಾಯ್ತು ಅಂದ್ರೆ ಸೌಟಲ್ಲಿ ಹೊಡೀರಿ..!:ಮಹಿಳೆಯರಿಗೆ ಬಿಎಸ್‌ವೈ

04:20 PM Mar 31, 2017 | Team Udayavani |

ಗುಂಡ್ಲುಪೇಟೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಗುಂಡ್ಲುಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಶುಕ್ರವಾರ ಬಿರುಸಿನ ಪ್ರಚಾರ ನಡೆಸಿದರು. 

Advertisement

ಪಕ್ಷದ ವತಿಯಿಂದ ನಡೆದ ಮಹಿಳಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ತಮ್ಮ ಅವಧಿಯಲ್ಲಿ ಮಹಿಳೆಯರು, ಮಕ್ಕಳ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಮತ ನೀಡಲು ಮನವಿ ಮಾಡಿದರು. 

‘ಇಲ್ಲಿ ನೀವೆಲ್ಲಾ ಸೇರಿದ್ದೀರಿ, ಊಟ ಕೊಡಬೇಕಿತ್ತು ಆದರೆ ನೀತಿ ಸಂಹಿತೆ ಇರುವ ಕಾರಣ ಕೊಡಲು ಸಾಧ್ಯವಾಗುವುದಿಲ್ಲ. ಮನೆಗೆ ಹೋಗಿ ನೀವು ಅಡುಗೆ ಸಿದ್ಧ ಮಾಡಬೇಕಾಗಿದೆ. ಎಲ್ಲಿಯಾದರು ಗಂಡ ಅಡುಗೆ ಲೇಟಾಯ್ತು ಅಂದ್ರೆ ಸೌಟಲ್ಲಿ ಹೊಡೆದು ಹೇಳಿ.. ನಾನು ಯಡಿಯೂರಪ್ಪನ ಭಾಷಣ ಕೇಳಲು ಹೋಗಿದ್ದೆ ಅಂತ. ಅಷ್ಟೂ ಸ್ವಾತಂತ್ರ್ಯಇಲ್ವಾ ನಿಮಗೆ.365 ದಿನವೂ ಗಂಡನಿಗಾಗಿ ಅಡುಗೆ ಸಿದ್ಧ ಪಡಿಸಿ ಅವರು ಊಟ ಮಾಡಿದ ಮೇಲೆ ಊಟ ಮಾಡುತ್ತೀರಿ. ಒಂದು ದಿನ ತಡವಾದರೇನು..’ ಎಂದರು. 

ಕೊನೆಯಲ್ಲಿ ಹಾಗೆ ಮಾಡಬೇಡಿ.ನಾನು ಸುಮ್ಮನೆ ಹೇಳಿದೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next