Advertisement

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

09:15 PM Nov 24, 2024 | Team Udayavani |

ಲಕ್ನೋ: ಇನ್ನು ಮುಂದೆ ದೇಶದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಬಿಎಸ್ಪಿ ಸ್ಪರ್ಧಿಸುವುದಿಲ್ಲ ಎಂದು ಪಕ್ಷದ ಮುಖ್ಯಸ್ಥೆ ಮಾಯಾವತಿ ಘೋಷಿಸಿದ್ದಾರೆ.

Advertisement

ಲಕ್ನೋದಲ್ಲಿ ಭಾನುವಾರ ಮಾತನಾಡಿದ ಅವರು, ನಕಲಿ ಮತದಾನ, ಸರ್ಕಾರಿ ವ್ಯವಸ್ಥೆಯ ದುರುಪಯೋಗ ಆಗುವುದರ ಬಗ್ಗೆ ಚುನಾವಣಾ ಆಯೋಗ ಸ್ಪಷ್ಟ ಭರವಸೆ ನೀಡುವ ವರೆಗೆ ಪಕ್ಷ ತೀರ್ಮಾನ ಮುಂದುವರಿಸಲಿದೆ ಎಂದು ಹೇಳಿದ್ದಾರೆ.

ಚುನಾವಣೆ ವೇಳೆ ಸರ್ಕಾರ ತನ್ನ ಅಧಿಕಾರ ದುರ್ಬಳಕೆ ಮಾಡುತ್ತಿದ್ದು, ಚುನಾವಣೆ ಆಯೋಗ ಈ ಕುರಿತು ಕಠಿಣ ಕ್ರಮ ಕೈಗೊಳ್ಳುಬೇಕು. ಮತಪತ್ರಗಳು ಇದ್ದ ಅಧಿಕಾರ ದುರ್ಬಳಕೆ ಪರಿಸ್ಥಿತಿಯೇ ವಿದ್ಯುನ್ಮಾನ ಮತಯಂತ್ರಗಳ ಬಳಕೆ ವೇಳೆ ಮುಂದುವರಿದಿದೆ ಎಂದು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next