ಬದಿಯಡ್ಕ: ಬದಿಯಡ್ಕ ಹಳೆ ಪೊಲೀಸ್ ಠಾಣೆ ಸಮೀಪ ಬೈಕ್ ತಡೆದು ನಿಲ್ಲಿಸಿ ಬಿಜೆಪಿ ಕಾರ್ಯಕರ್ತ ಬದಿಯಡ್ಕ ನಿವಾಸಿ ರಂಜಿತ್ (30) ಅವರಿಗೆ ಇಬ್ಬರು ಇರಿದು ಗಾಯಗೊಳಿಸಲಾಗಿದೆ. ಈ ಬಗ್ಗೆ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
Advertisement
ಜೂಜಾಟ: ಇಬ್ಬರ ಬಂಧನ, 40,555 ರೂ. ವಶಕ್ಕೆಕುಂಬಳೆ: ಬಂಬ್ರಾಣ, ಕಿದೂರು ಕ್ಷೇತ್ರ ಸಮೀಪದ ಬಯಲಿನಲ್ಲಿ ನಡೆಯುತ್ತಿದ್ದ ಜೂಜಾಟ ಕೇಂದ್ರಕ್ಕೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಕರ್ನಾಟಕ ಬಂಟ್ವಾಳದ ಅಸೀಸ್ (38) ಮತ್ತು ಪೆರುಂಬಳ ಕೋಳಿಯಡ್ಕದ ಜಿ.ಕವಿಲಾಲ್ (42) ಬಂಧಿತರು. ಸ್ಥಳದಿಂದ 40,500 ರೂ. ವಶಪಡಿಸಿಕೊಂಡಿದ್ದಾರೆ. ಮೂವರು ಪರಾರಿಯಾಗಿದ್ದಾರೆ.
ಕಾಸರಗೋಡು: ಬೈಕ್‌ನಲ್ಲಿ ಬಂದ ಇಬ್ಬರು ಚಂದೇರ ಏಚಿಕೊವ್ವಲ್‌ನ ಕೆ.ರಾಮಚಂದ್ರನ್ ಅವರ ಪತ್ನಿ ಪಿ.ಶಾರದಾ ಅವರ ಕುತ್ತಿಗೆಯಿಂದ ಒಂದೂಮುಕ್ಕಾಲು ಪವನ್ ತೂಕದ ಚಿನ್ನದ ಸರವನ್ನು ಲಪಟಾಯಿಸಲಾಗಿದೆ. ಚಂದೇರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೊಬೈಲ್ ಫೋನ್ ನೀಡದ ದ್ವೇಷ
ತಾಯಿಗೆ ಇರಿದ ಬಾಲಕ
ಕಾಸರಗೋಡು: ಗೇಮಿಂಗ್‌ಗಾಗಿ ಮೊಬೈಲ್ ಫೋನ್ ನೀಡದ ದ್ವೇಷದಿಂದ 14 ರ ಬಾಲಕನೊಬ್ಬನು ತನ್ನ ತಾಯಿಗೆ ಇರಿದು ಗಾಯಗೊಳಿಸಿದ ಘಟದೆ ಕಲ್ಲಿಕೋಟೆಯಲ್ಲಿ ನಡೆದಿದೆ. ಕಲ್ಲಕೋಟೆ ತಿಕ್ಕೋಡಿ ಕಾರೆಕ್ಕೋಡ್ ಮನೆಯಲ್ಲಿ ನಿದ್ದೆ ಮಾಡಿದ್ದ ತಾಯಿಗೆ ಇರಿದು ಗಾಯಗೊಳಿಸಿದ್ದು, ಗಾಯಾಳನ್ನು ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಪಯ್ಯೋಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Related Articles
ಅಡೂರು: ಅರಣ್ಯ ಇಲಾಖೆ ಸಿಬಂದಿ, ದೇಲಂಪಾಡಿ ಮುದಿಯೂರು ನಿವಾಸಿ ಸದಾಶಿವ ಗೌಡ(55) ಅವರು ಜಾಲ್ಸೂರು ಫಾರೆಸ್ಟ್ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಕುಸಿದು ಬಿದ್ದು ಸಾವಿಗೀಡಾದರು. ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ.
Advertisement
ನಗರಸಭಾ ಕಾರ್ಯದರ್ಶಿಗೆ ಹಲ್ಲೆ : ಪ್ರತಿಭಟನೆಕಾಸರಗೋಡು: ಕಾಸರಗೋಡು ನಗರಸಭಾ ಕಚೇರಿಯಲ್ಲಿ ನಗರಸಭಾ ಕಾರ್ಯದರ್ಶಿ ಪಿ.ವಿ.ಜಸ್ಟಿನ್‌ಗೆ ಇಬ್ಬರು ಸೇರಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ವರಿಷ್ಠ ಪೊಲೀಸಧಿಕಾರಿಗೆ ದೂರು ನೀಡಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ತಳಂಗರೆಯ ಕಟ್ಟಡವೊಂದಕ್ಕೆ ನಕಲಿ ಸಹಿ ಹಾಕಿ ಅದಕ್ಕೆ ಕಟ್ಟಡ ನಂಬ್ರ ಪಡೆದಿರುವುದನ್ನು ನಗರಸಭಾ ಕಾರ್ಯದರ್ಶಿ ಪತ್ತೆಹಚ್ಚಿ ರದ್ದುಗೊಳಿಸಿದ್ದರು. ಅದನ್ನು ಪ್ರಶ್ನಿಸಿ ಇಬ್ಬರು ಬಂದು ಕಾರ್ಯದರ್ಶಿಗೆ ಹಲ್ಲೆ ಮಾಡಿದ್ದಾಗಿ ಪೊಲೀಸರಿಗೆ ದೂರು ನೀಡಲಾಗಿದೆ. ಹಲ್ಲೆ ದೃಶ್ಯ ಸಿಸಿ ಟಿವಿ ಕೆಮರಾದಲ್ಲಿ ದಾಖಲಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದು, ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಕಾರ್ಯದರ್ಶಿ ಮೇಲಿನ ಹಲ್ಲೆಯನ್ನು ಪ್ರತಿಭಟಿಸಿ ನಗರಸಭಾ ಸಿಬಂದಿ ನಗರಸಭಾ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಹಲ್ಲೆ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.