Advertisement
ಚಿಕ್ಕಬಳ್ಳಾಪುರ: ಶಾಸಕ ಡಾ.ಕೆ.ಸುಧಾಕರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್, ಜೆಡಿಎಸ್‌ನ 14 ತಿಂಗಳ ಮೈತ್ರಿ ಸರ್ಕಾರ ಪತನದ ಬಳಿಕ ಎದುರಾದ ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಸುಧಾಕರ್ ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ.
Related Articles
Advertisement
ಅಭ್ಯರ್ಥಿಗಳು ಮತ ಪಡೆದ ವಿವರಅಭ್ಯರ್ಥಿ ಪಕ್ಷ ಪಡೆದ ಮತ
ಡಾ.ಕೆ.ಸುಧಾಕರ್ ಬಿಜೆಪಿ 84,389
ಎಂ.ಅಂಜನಪ್ಪ ಕಾಂಗ್ರೆಸ್ 49.588
ಎನ್.ರಾಧಕೃಷ್ಣ ಜೆಡಿಎಸ್ 35,869
ಡಿ.ಆರ್.ನಾರಾಯಣಸ್ವಾಮಿ ಬಿಎಸ್ಪಿ 1,319
ಎಸ್.ವಿ.ಫಣೀರಾಜ್ ಉತ್ತಮ ಪ್ರಜಾಕೀಯ ಪಕ್ಷ 619
ದಿಲ್‌ಶಾದ್ ಬೇಗಂ ಪಕ್ಷೇತರ 175
ಡಾ.ಎಂ.ಎಂ.ಬಾಷಾ ನಂದಿ ಪಕ್ಷೇತರ 533
ಅರಿಕರೆ ಮುನಿರಾಜು ಪಕ್ಷೇತರ 166
ಸೈಯದ್ ಆಸೀಫ್ ಪಕ್ಷೇತರ 244 2018ರ ವಿಧಾನಸಭಾ ಚುನಾವಣೆ ಮತ ಗಳಿಕೆ
ಅಭ್ಯರ್ಥಿ ಪಕ್ಷ ಪಡೆದ ಮತ ವ್ಯತ್ಯಾಸ
ಡಾ.ಕೆ.ಸುಧಾಕರ್ ಕಾಂಗ್ರೆಸ್ 82,002 -32414
ಕೆ.ಪಿ.ಬಚ್ಚೇಗೌಡ ಜೆಡಿಎಸ್ 51,575 -15,706
ಡಾ.ಜಿ.ವಿ.ಮಂಜುನಾಥ ಬಿಜೆಪಿ 5,576 +78,813 ಅಂಚೆ ಮತ ಗಳಿಕೆಯಲ್ಲಿ ಸುಧಾಕರ್ ಮೊದಲು: ಉಪ ಚುನಾವಣೆಯಲ್ಲಿ ಅಂಚೆ ಮತಗಳು ಕೇವಲ 10 ಮಾತ್ರ ಚಲಾವಣೆಗೊಂಡಿದ್ದು, ಆ ಪೈಕಿ ಬಿಜೆಪಿ ಅಭ್ಯರ್ಥಿ ಸುಧಾಕರ್ 8 ಮತಗಳನ್ನು ಪಡೆದು ಮೊದಲ ಸ್ಥಾನ ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ನಂದಿ ಅಂಜನಪ್ಪಗೆ ಕೇವಲ 1 ಅಂಚೆ ಮತ ಬಿದ್ದರೆ, ಜೆಡಿಎಸ್ ಅಭ್ಯರ್ಥಿ ಎನ್.ರಾಧಾಕೃಷ್ಣಗೆ ಅಂಚೆ ಮತದಾರರ ಒಲವು ಸಿಕ್ಕಿಲ್ಲ. ಆ ಪೈಕಿ 10 ಅಂಚೆ ಮತಗಳು ಸಲ್ಲಿಕೆಯಾದರೆ 9 ಮಾತ್ರ ಊರ್ಜಿತಗೊಂಡಿದ್ದು 1 ತಿರಸ್ಕೃತಗೊಂಡಿದೆ. ಕಳೆದ ಬಾರಿ ಸುಧಾಕರ್‌ಗೆ 478, ಬಚ್ಚೇಗೌಡರಿಗೆ 313, ಡಾ.ಜಿ.ವಿ.ಮಂಜುನಾಥಗೆ 48 ಅಂಚೆ ಮತ ಬಂದಿದ್ದವು. 973 ನೋಟಾ ಮತದಾನ: ಉಪ ಚುನಾವಣೆಯಲ್ಲಿ ನೋಟಾಗೆ ಒಟ್ಟು 973 ಮತಗಳು ಬಿದ್ದಿವೆ. ರಾಜಕೀಯ ಪಕ್ಷಗಳ ಅಭ್ಯರ್ಥಿಗಳನ್ನು ತಿರಸ್ಕರಿಸುವ ನೋಟಾಗೆ ಹೆಚ್ಚು ಮತದಾನ ಆಗಿಲ್ಲ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ನೋಟಾ ಮತದಾನ ಕಡಿಮೆ ಆಗಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಒಟ್ಟು 714 ನೋಟಾ ಮತದಾನ ಆಗಿತ್ತು. ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದರಿಂದ ಮತದಾರರು ನೋಟಾ ಬಗ್ಗೆ ಹೆಚ್ಚು ಆಸಕ್ತಿ ವಹಿಸಿಲ್ಲ. ಕೈ, ದಳ ನಾಯಕರಿಗೆ ತೀವ್ರ ಮುಖಭಂಗ: ಉಪ ಚುನಾವಣೆ ಫಲಿತಾಂಶ ಕ್ಷೇತ್ರದ ದಳಪತಿಗಳಿಗಿಂತ ಜಿಲ್ಲೆಯ ಕೈ ನಾಯಕರಿಗೆ ತೀವ್ರ ಮುಖಭಂಗ ಉಂಟು ಮಾಡಿದೆ. ಸುಧಾಕರ್ ಪಕ್ಷಾಂತರ, ಅನರ್ಹತೆಯ ಅಸ್ತ್ರ ಮುಂದಿಟ್ಟುಕೊಂಡು ಸುಧಾಕರ್ ವಿರುದ್ಧ ರಾಜಕೀಯ ಹೋರಾಟ ನಡೆಸಿದ ಜಿಲ್ಲೆಯ ಕಾಂಗ್ರೆಸ್ ನಾಯಕರಾದ ಗೌರಿಬಿದನೂರು ಶಾಸಕ ಎನ್.ಹೆಚ್.ಶಿವಶಂಕರರೆಡ್ಡಿ, ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮತ್ತಿತರ ನಾಯಕರಿಗೆ ಫಲಿತಾಂಶ ಸಾಕಷ್ಟು ಇರುಸು ಮುರುಸು ಮಾಡಿದೆ. ಅಖಾಡಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮತ್ತಿತರ ಘಟಾನುಘಟಿ ನಾಯಕರು ಬಂದು ಪ್ರಚಾರ ಮಾಡಿದರೂ ಕಾಂಗ್ರೆಸ್ ತನ್ನ ಕೋಟೆ ಉಳಿಸುವಲ್ಲಿ ವಿಫಲವಾಗಿದೆ. ಇದರ ನಡುವೆ ಸುಧಾಕರ್ ಪರ ಪರೋಕ್ಷವಾಗಿ ಬ್ಯಾಟಿಂಗ್ ನಡೆಸಿದ್ದ ಮಾಜಿ ಕೇಂದ್ರ ಸಚಿವರಾದ ಕೆ.ಎಚ್.ಮುನಿಯಪ್ಪ ಈ ಭಾಗದಲ್ಲಿ ಕಾಂಗ್ರೆಸ್ ಪರ ಪ್ರಚಾರಕ್ಕೆ ಬಾರದೇ ಹೋಗಿದ್ದು ಕೈ ಹಿನ್ನಡೆಗೆ ಕಾರಣ ಎಂಬುದನ್ನು ವಿಶ್ಲೇಷಿಸಲಾಗುತ್ತಿದೆ. ಇನ್ನೂ ಜೆಡಿಎಸ್ ಅಭ್ಯರ್ಥಿ ರಾಧಾಕೃಷ್ಣ ಪರ ಖುದ್ದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಎರಡು, ಮೂರು ಬಾರಿ ಕ್ಷೇತ್ರಕ್ಕೆ ಆಗಮಿಸಿ ಪ್ರಚಾರ ನಡೆಸಿದರೂ ಮತದಾರರು ಒಲವು ತೋರದಿರುವುದು ಎರಡು ಪಕ್ಷಗಳ ನಾಯಕರಿಗೆ ಉಪ ಚುನಾವಣೆ ತೀವ್ರ ಮುಖಭಂಗ ಉಂಟು ಮಾಡಿದೆ. * ಕಾಗತಿ ನಾಗರಾಜಪ್ಪ, ಚಿಕ್ಕಬಳ್ಳಾಪುರ