ಬೆಂಗಳೂರು: ಡಿ.ಕೆ. ಸಹೋ ದರರ ಭದ್ರಕೋಟೆಯಾದ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮೂಲಕವೇ ಲೋಕಸಭಾ ಸಮರದ ಪ್ರಚಾರ ಪ್ರಾರಂಭಿಸಲು ಬಿಜೆಪಿ ನಿರ್ಧರಿಸಿದೆ. ಎ. 2ರಂದು ಕೇಂದ್ರ ಗೃಹಸಚಿವ ಅಮಿತ್ ಶಾ ಚನ್ನಪಟ್ಟಣದಲ್ಲಿ ಭರ್ಜರಿ ರೋಡ್ ಶೋ ನಡೆಸುವ ಮೂಲಕ ಕೇಸರಿ ಕಹಳೆ ಮೊಳಗಿಸಲಿದ್ದಾರೆ.
ಶಾ ಅವರ ರೋಡ್ ಶೋ ಹಾಗೂ ಇತರ ಸಂಘಟನಾತ್ಮಕ ಚಟುವಟಿಕೆಗಳ ಬಗ್ಗೆ ಬಿಜೆಪಿ ಚುನಾವಣ ನಿರ್ವಹಣ ಸಮಿತಿಯ ರಾಜ್ಯ ಸಂಚಾಲಕ ಸುನಿಲ್ ಕುಮಾರ್ ಶನಿವಾರ ಪತ್ರಿಕಾಗೋಷ್ಠಿ ಯಲ್ಲಿ ಮಾಹಿತಿ ನೀಡಿದ್ದಾರೆ. “ರಾಜ್ಯದ ಚುನಾವಣ ಪ್ರಚಾರವನ್ನು ಅಮಿತ್ ಶಾ ಪ್ರಾರಂಭಿಸಲಿದ್ದಾರೆ. ದೇಶ ವಿಭಜನೆಯ ಮಾತನಾಡಿದವರ ವಿರುದ್ಧ ನಿಜಾರ್ಥದಲ್ಲಿ ಭಾರತ್ ಜೋಡೋ ಕಾರ್ಯಕ್ರಮಕ್ಕೆ ಅಮಿತ್ ಶಾ ಚಾಲನೆ ನೀಡಲಿದ್ದಾರೆ’ ಎಂದು ವಿವರಿಸಿದರು.
ಎ. 2ರಂದು ಇಡೀ ದಿನ ಅಮಿತ್ ಶಾ ಬೆಂಗಳೂ ರಿನಲ್ಲಿ ಇರಲಿದ್ದಾರೆ. ರಾಜ್ಯ ದಲ್ಲಿ ಬೇರೆಬೇರೆ ಕಾರ್ಯಕ್ರಮ ಗಳಲ್ಲಿ ಭಾಗವಹಿಸಲಿದ್ದಾರೆ. ಜಮ್ಮು-ಕಾಶ್ಮೀರಕ್ಕಿದ್ದ ಪ್ರತ್ಯೇಕ ಸ್ಥಾನಮಾನ ವನ್ನು ರದ್ದು ಮಾಡುವ ಮೂಲಕ ದೇಶ ಒಂದು ಎಂಬ ಸಂದೇಶ ನೀಡುವ ಗಟ್ಟಿ ನಿರ್ಧಾರ ಪ್ರಕಟಿಸಿದ್ದ ಶಾ ಆಗಮನದಿಂದ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಲಿದ್ದು, ಅಂದು ಸಂಜೆ 6 ಗಂಟೆಗೆ ನಡೆಯುವ ರೋಡ್ ಶೋದಲ್ಲಿ ಬಿಜೆಪಿ, ಜೆಡಿಎಸ್‌ನ ಪ್ರಮುಖ ನಾಯಕರು ಭಾಗಿಯಾಗುತ್ತಾರೆ ಎಂದು ತಿಳಿಸಿದರು.
ದೇಶ ಒಡೆಯುವ ಹೇಳಿಕೆ ನೀಡಿದ ಸಂಸದ ಡಿ.ಕೆ. ಸುರೇಶ್ ನಮ್ಮ ಕಣ್ಮುಂದೆ ಇ¨ªಾರೆ. ದೇಶ ವಿಭಜನೆ ಕಾಂಗ್ರೆಸ್ ಮಾನಸಿಕತೆ. ಆದರೆ ನಮ್ಮ ಮಾನಸಿಕತೆ ದೇಶ ಜೋಡಿಸುವುದು. ದೇಶ ಒಡೆಯುವವರು ಬೇಕೇ ಅಥವಾ ದೇಶ ಒಂದು ಮಾಡು ವವರು ಬೇಕೇ ಎಂಬ ಪ್ರಶ್ನೆಯÇÉೇ ಈ ಚುನಾವಣೆ ನಡೆಯಲಿದೆ ಎಂದರು.
ಕಾರ್ಯಕರ್ತರ ಸಭೆ: ಅಮಿತ್ ಶಾ ಎ.2ರಂದು ಬೆಳಗ್ಗೆ 9 ಗಂಟೆಗೆ ಎರಡೂ ಪಕ್ಷಗಳ ಪ್ರಮುಖ ನಾಯಕರ ಜತೆ ಉಪಾಹಾರ ಸಭೆ ನಡೆಸುತ್ತಾರೆ. ಬೆಳಗ್ಗೆ 11 ಗಂಟೆಗೆ ಅರಮನೆ ಮೈದಾನದಲ್ಲಿ ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳ ಶಕ್ತಿಕೇಂದ್ರಗಳ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಲಿದ್ದಾರೆ. ಸುಮಾರು 5 ಸಾವಿರ ಕಾರ್ಯಕರ್ತರು ಭಾಗಿಯಾಗುತ್ತಾರೆ ಎಂದು ತಿಳಿಸಿದರು. ಅಪರಾಹ್ನ 2ರಿಂದ 5ರ ವರೆಗೆ ಬೆಂಗಳೂರಿನಲ್ಲಿ ಚಿಕ್ಕಬಳ್ಳಾಪುರ, ತುಮಕೂರು, ದಾವಣಗೆರೆ, ಚಿತ್ರದುರ್ಗ ಕ್ಷೇತ್ರಗಳ ಪ್ರಮುಖರ ಜತೆ ಪ್ರತ್ಯೇಕ ಸಭೆ ನಡೆಯಲಿದೆ. ಕ್ಷೇತ್ರದಲ್ಲಿ ನಡೆಸಬೇಕಾದ ತಂತ್ರಗಾರಿಕೆಯ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಯುತ್ತದೆ. ಪ್ರಚಾರಕ್ಕೆ ಈ ಕಾರ್ಯಕ್ರಮಗಳಿಂದ ಹೆಚ್ಚಿನ ವೇಗ ಲಭಿಸಲಿದೆ ಎಂದರು.