Advertisement
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಚಿಗರಿ ಬಸ್‌ನ ಚಾಲಕರು ಪ್ರಯಾಣಿಕರೊಂದಿಗೆ ಸೌಜನ್ಯಯುತವಾದ ವರ್ತನೆ, ಸಂಚಾರ ನಿಯಮಗಳ ಪಾಲನೆ, ಬಿಆರ್‌ಟಿಎಸ್ ಕಾರಿಡಾರ್ ನಲ್ಲಿ ಶಿಸ್ತುಬದ್ಧವಾದ ಸುರಕ್ಷಿತ ಚಾಲನೆಯನ್ನು ತಮ್ಮ ದಿನನಿತ್ಯದ ಕರ್ತವ್ಯದಲ್ಲಿ ಅಳವಡಿಸಿಕೊಂಡಲ್ಲಿ ಬಿಆರ್‌ಟಿಎಸ್ ಕಾರಿಡಾರ್‌ನಲ್ಲಿ ಆಗುತ್ತಿರುವ ಸಂಚಾರ ನಿಯಮಗಳ ಉಲ್ಲಂಘನೆ ತಗ್ಗಿಸಲು ಸಹಕಾರಿಯಾಗಲಿದೆ. ಜತೆಗೆ ಸಾರ್ವಜನಿಕ ಪ್ರಯಾಣಿಕರಲ್ಲೂ ತಮ್ಮ ಬಿಆರ್‌ಟಿಎಸ್ ಚಿಗರಿ ಬಸ್ ಗಳ ಸೇವೆಗಳ ಬಗ್ಗೆ ವಿಶ್ವಾಸ ಹೆಚ್ಚಾಗಲಿದೆ ಎಂದರು.
Related Articles
Advertisement
ಬುಧವಾರ ನಡೆದ 2ನೇ ದಿನದ ಕಾರ್ಯಾಗಾರದಲ್ಲಿ ದಕ್ಷಿಣ ಸಂಚಾರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸುರೇಶ ಕುಂಬಾರ ಮಾತನಾಡಿ, ರಸ್ತೆಗಳ ಮೇಲಾಗುತ್ತಿರುವ ಅಪಘಾತಗಳು ಮತ್ತು ಕಾರಣಗಳ ಬಗ್ಗೆ ಸಾಕ್ಷéಚಿತ್ರಗಳ ಮೂಲಕ ಚಾಲಕರಿಗೆ ಜಾಗೃತಿ ಮೂಡಿಸಿದರು. ಪ್ರತಿಯೊಬ್ಬ ವಾಹನ ಸವಾರರು ಪರವಾನಗಿ ಲೈಸನ್ಸ್ ಹೊಂದುವುದು ಮಹತ್ವದಾಗಿದೆ. ಪ್ರಯಾಣಿಕರ ವಾಹನ ಚಾಲನೆ ಮಾಡುವ ಚಾಲಕರು ದೈಹಿಕವಾಗಿ, ಮಾನಸಿಕವಾಗಿ ಸದೃಢತೆ ಹೊಂದಿದ್ದಲ್ಲಿ ಅಪಘಾತಗಳಾಗುವ ಸಂಭವ ಹೆಚ್ಚಾಗುವುದಲ್ಲದೆ, ಪ್ರಯಾಣಿಕರ ಪ್ರಾಣಹಾನಿ ಹಾಗೂ ಗಾಯಗಳಾಗುವುದು ನಿಶ್ಚಿತ. ಕಾರಣ ಸುರಕ್ಷಿತ ಚಾಲನೆಗೆ ದೈಹಿಕ-ಮಾನಸಿಕ ಆರೋಗ್ಯ ಮುಖ್ಯ. ಜತೆಗೆ ಸಂಚಾರ ನಿಯಮಗಳ ಜ್ಞಾನ, ಪಾಲನೆ ಅವಶ್ಯವಾಗಿದೆ ಎಂದರು.
ನಗರ ಸಾರಿಗೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ವಿಶ್ವಜ್ಞ, ವಿಭಾಗೀಯ ಸಾರಿಗೆ ಅಧಿಕಾರಿ ಕೆಂಪಣ್ಣ ಗುಡೇನವರ, ಬಿಆರ್‌ಟಿಎಸ್ ಘಟಕ ವ್ಯವಸ್ಥಾಪಕರಾದ ಸಂತೋಷ ಕಾಮತ, ದೀಪಕ ಜಾಧವ, ರವಿ ಅಂಚಗಾವಿ ಮಾತನಾಡಿದರು.
ಬಿಆರ್‌ಟಿಎಸ್ ಪಿಆರ್‌ಒ ಮಂಜುನಾಥ ಜಡೇನವರ ನಿರೂಪಿಸಿದರು. ಕಾರ್ಯಾಗಾರದಲ್ಲಿ ಒಟ್ಟು 150 ಚಾಲಕರು ಭಾಗವಹಿಸಿದ್ದರು.