ಉಡುಪಿ ಉದ್ಯಾವರ ಸಂಪಿಗೆನಗರದ ದೇವರಾಜ್(37), ಕಿನ್ನಿಮೂಲ್ಕಿ ರಾಮಚಂದ್ರ ಲೇನ್‌ನ ಮೊಹಮ್ಮದ್ ಫರ್ವೆಜ್ ಉಮರ್ (25) ಮತ್ತು ಉಡುಪಿ ಬ್ರಹ್ಮಗಿರಿಯ ಶೇಖ್ ತಹೀಂ (20) ಬಂಧಿತರು.
Advertisement
ಆರೋಪಿಗಳು ಕೂಳೂರು ನದಿ ದಂಡೆಯಲ್ಲಿ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಮಾರಾಟಕ್ಕೆಂದು ತಂದಿದ್ದ 5 ಕೆ.ಜಿ ಗಾಂಜಾ, 100 ಗ್ರಾಂ ಎಂಡಿಎಂಎ, 7 ಗ್ರಾಂ ಕೊಕೇನ್, 17 ಗ್ರಾಂ ತೂಕದ 35 ಎಂಡಿಎಂಎ ಪಿಲ್ಸ್, 100 ಗ್ರಾಂ ಚರಸ್, 8 ಗ್ರಾಂ ಹೈಡ್ರೋವಿಡ್ ಗಾಂಜಾ, 3 ಎಲ್‌ಎಸ್‌ಡಿ ಸ್ಟ್ರಿಪ್‌ಗ್ಳು ಸಹಿತ ಒಟ್ಟು 9 ಲ. ರೂ. ಮೌಲ್ಯದ ಡ್ರಗ್ಸ್ ಹಾಗೂ ಹ್ಯುಂಡೈ ಐ 10 ಕಾರು ಮತ್ತು ಸ್ಕೂಟರ್‌ನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.ಆರೋಪಿಗಳ ಪೈಕಿ ಪರ್ವೇಜ್ ಉಡುಪಿ ಜಿಲ್ಲೆಯಲ್ಲಿ ಒಟ್ಟು 3 ಗಾಂಜಾ ಪ್ರಕರಣಗಳಲ್ಲಿ ಭಾಗಿಯಾಗಿದ್ದ.