Advertisement

ವಿಮಾನದಲ್ಲಿ ತಾಂತ್ರಿಕ ದೋಷ: ಅನ್ನ ಆಹಾರವಿಲ್ಲದೆ 13 ಗಂಟೆ ಕುವೈತ್‌ನಲ್ಲೇ ಪ್ರಯಾಣಿಕರು ಬಾಕಿ

09:13 AM Dec 02, 2024 | Team Udayavani |

ಕುವೈತ್: ಮುಂಬೈನಿಂದ ಮ್ಯಾಂಚೆಸ್ಟರ್‌ಗೆ ತೆರಳುತ್ತಿದ್ದ ವಿಮಾನವೊಂದು ತಾಂತ್ರಿಕ ದೋಷದಿಂದ ಕುವೈತ್ ಏರ್ ಪೋರ್ಟ್ ನಲ್ಲಿ ತುರ್ತು ಭೂಸ್ಪರ್ಶ ಮಾಡಿದ ಪರಿಣಾಮ ಭಾರತೀಯ ಪ್ರಯಾಣಿಕರು ಅನ್ನ ಆಹಾರ ಇಲ್ಲದೆ ಹದಿಮೂರು ಗಂಟೆಗಳ ಕಾಲ ಬಳಲುವಂತಾಗಿದೆ.

Advertisement

60 ಭಾರತೀಯ ಪ್ರಯಾಣಿಕರಿದ್ದ ಗಲ್ಫ್ ಏರ್ ವಿಮಾನ ಮುಂಬೈನಿಂದ ಮ್ಯಾಂಚೆಸ್ಟರ್‌ಗೆ ಹೊರಟಿತ್ತು ಈ ನಡುವೆ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಪರಿಣಾಮ ವಿಮಾನವನ್ನು ಕುವೈಟ್ ಇಂಟರ್ ನ್ಯಾಷನಲ್ ಏರ್ ಪೋರ್ಟ್ ನಲ್ಲಿ ತುರ್ತಾಗಿ ಇಳಿಸಲಾಯಿತು. ಅಲ್ಲದೆ ಈ ವೇಳೆ ವಿಮಾನದಲ್ಲಿದ್ದ ಭಾರತೀಯ ಪ್ರಯಾಣಿಕರಿಗೆ ಉಳಿದುಕೊಳ್ಳಲು ಯಾವುದೇ ವ್ಯವಸ್ಥೆಯನ್ನೂ ಮಾಡಿಲ್ಲ ಎಂದು ಪ್ರಯಾಣಿಕರು ಆಕ್ರೋಶ ಹೊರ ಹಾಕಿದ್ದಾರೆ ಅಲ್ಲದೆ ವಿಮಾನ ತಪಾಸಣೆ ನಡೆಸುವ ಸಮಯ ಸುಮಾರು ಹದಿಮೂರು ಗಂಟೆಗಳ ಕಾಲ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಅನ್ನ ಆಹಾರವಿಲ್ಲದೆ ಕಾಲ ಕಳೆಯಬೇಕಾಗಿ ಬಂತು ಎಂದು ವಿಮಾನ ಸಂಸ್ಥೆಯ ವಿರುದ್ಧ ಭಾರತೀಯ ಪ್ರಯಾಣಿಕರು ಕಿಡಿಕಾರಿದ್ದಾರೆ.

ಇದಾದ ಬಳಿಕ ಮುಂಜಾನೆ ಸುಮಾರು ೪.೩೦ ನಿಮಿಷಕ್ಕೆ ವಿಮಾನ ಮ್ಯಾಂಚೆಸ್ಟರ್‌ಗೆ ಪ್ರಯಾಣವನ್ನು ಮುಂದುವರೆಸಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Survival: ಜನಸಂಖ್ಯೆ ಕುಸಿತ ತಡೆಗೆ ಮೂರು ಮಕ್ಕಳನ್ನು ಪಡೆಯಿರಿ: ಮೋಹನ್‌ ಭಾಗವತ್‌

Advertisement

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪ್ರಯಾಣಿಕರು ಕುವೈತ್ ವಿಮಾನ ನಿಲ್ದಾಣದ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸುತ್ತಿರುವುದು ಕಂಡು ಬಂದಿದೆ. ಭಾರತೀಯ ಪ್ರಯಾಣಿಕರನ್ನು ಉದ್ದೇಶಪೂರ್ವಕವಾಗಿ ನಿಂದಿಸಲಾಗುತ್ತಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಆದರೆ ಭಾರತೀಯ ಪ್ರಯಾಣಿಕರ ದೂರಿಗೆ ಗಲ್ಫ್ ಏರ್ ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next