Advertisement

Uppinangady: ಸಮಯಪ್ರಜ್ಞೆ ಮೆರೆದ ನಿರ್ವಾಹಕ; ತಪ್ಪಿದ ಸಂಭಾವ್ಯ ಅನಾಹುತ

11:38 PM Dec 06, 2024 | Team Udayavani |

ಉಪ್ಪಿನಂಗಡಿ: ಚಾಲನೆಯಲ್ಲಿರುವಾಗಲೇ ಸರಕಾರಿ ಬಸ್ಸಿನ ಚಾಲಕನಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಘಟನೆ ಅರಿವಿಗೆ ಬಂದ ತತ್‌ಕ್ಷಣ ನಿರ್ವಾಹಕನೇ ಬಸ್ಸನ್ನು ಚಲಾಯಿಸಿ ಸಂಭಾವ್ಯ ಅನಾಹುತವನ್ನು ತಪ್ಪಿಸಿ ಸಮಯಪ್ರಜ್ಞೆ ಮೆರೆದಿದ್ದಾರೆ.

Advertisement

ಮಂಗಳೂರು ಡಿಪೋಗೆ ಸೇರಿದ ಸುಬ್ರಹ್ಮಣ್ಯ-ಮಂಗಳೂರು ರೂಟ್‌ನ ಬಸ್ಸು ಸಾಗುತ್ತಿತ್ತು. ಅದರಲ್ಲಿ ಸುಮಾರು ಮೂವತ್ತು ಪ್ರಯಾಣಿಕರಿದ್ದರು. ಕಡಬ ತಾಲೂಕಿನ ಆತೂರು ಸಮೀಪಿಸುತ್ತಿದ್ದಂತೆಯೇ ಬಸ್ಸಿನ ಚಾಲಕ ಗಣಪತಿ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ತತ್‌ಕ್ಷಣ ಅವರು ಬಸ್ಸಿನ ವೇಗವನ್ನು ತಗ್ಗಿಸಿದ್ದಾರೆ.

ಬಸ್ಸಿನ ವೇಗ ಕಡಿಮೆಯಾಗುತ್ತಿದ್ದುದನ್ನು ಕಂಡ ನಿರ್ವಾಹಕ ವಿಷ್ಣು ಅವರು ಅನುಮಾನಗೊಂಡು ಚಾಲಕನ ಬಳಿಗೆ ತೆರಳಿದ್ದಾರೆ. ಈ ವೇಳೆ ಅವರು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಬಸ್ಸನ್ನು ನಿಲ್ಲಿಸುವ ಸ್ಥಿತಿಯಲ್ಲೂ ಅವರು ಇರಲಿಲ್ಲ. ಕೂಡಲೇ ನಿರ್ವಾಹಕ ವಿಷ್ಣು ಅವರು ಚಾಲಕ ಗಣಪತಿ ಅವರನ್ನು ಸೀಟಿನಿಂದ ಪಕ್ಕಕ್ಕೆ ಸರಿಸಿದರು. ತಾವೇ ಸ್ಟಿಯರಿಂಗ್‌ ಅನ್ನು ಹಿಡಿದರು. ಮಾತ್ರವಲ್ಲದೆ ಬಸ್ಸನ್ನು ತನ್ನ ಹತೋಟಿಗೆ ತೆಗೆದುಕೊಂಡ ನಿರ್ವಾಹಕ ಸುಮಾರು 7 ಕಿಲೋ ಮೀಟರ್‌ ದೂರದಲ್ಲಿದ್ದ ಉಪ್ಪಿನಂಗಡಿ ಬಸ್ಸು ನಿಲ್ದಾಣದವರೆಗೆ ಚಲಾಯಿಸಿಕೊಂಡು ಹೋಗಿ ನಿಲ್ಲಿಸಿದ್ದರು.

ಅನಂತರ ತಡಮಾಡದೆ ಚಾಲಕ ಗಣಪತಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದರು. ಪ್ರಯಾಣಿಕರಿಗೆ ಬದಲಿ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಯಿತು. ನಿರ್ವಾಹಕನ ಸಮಯಪ್ರಜ್ಞೆಯನ್ನು ಪ್ರಯಾಣಿಕರು ಶ್ಲಾ ಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next