ಅಯೋಧ್ಯಾ: ಅಯೋಧ್ಯಾ ಶ್ರೀರಾಮನ ಪ್ರಾಣ ಪ್ರತಿಷ್ಠೆಗೆ ಇನ್ನು ಕೇವಲ ಒಂದೇ ದಿನ ಬಾಕಿ ಉಳಿದಿದ್ದು ಎಲ್ಲಾ ತಯಾರಿಗಳು ಭರದಿಂದ ಸಾಗುತ್ತಿದೆ. ರಾಮ ಮಂದಿರ ವಿದ್ಯುತ್ ದೀಪಾಲಂಕಾರದ ಜೊತೆಗೆ ವಿವಿಧ ಹೂವುಗಳಿಂದ ಸಿಂಗಾರಗೊಂಡಿದ್ದು ಮದುವನಗಿತ್ತಿಯಂತೆ ಕಾಣುತ್ತಿದೆ.
ರಾಮ ಮಂದಿರದ ಉದ್ಘಾಟನೆಗೆ ಇಡೀ ಅಯೋಧ್ಯಾ ನಗರಿಯೇ ಸಿಂಗಾರಗೊಂಡಿದೆ. ಇದರೊಂದಿಗೆ ಅದೆಷ್ಟೋ ವರ್ಷಗಳ ಕನಸು ನನಸಾಗುವ ಕಾಲ ಬಂದೊದಗಿದೆ, ರಾಮ ಮಂದಿರದ ಉದ್ಘಾಟನೆಗೆ ಕೇವಲ ಅಯೋಧ್ಯೆ ಮಾತ್ರವಲ್ಲದೆ ಇಡೀ ದೇಶ, ವಿದೇಶಗಳಲ್ಲೂ ಸಂಭ್ರಮ ಮನೆಮಾಡಿದೆ.
ಸಾಧುಗಳು, ಸಂತರು ಸೇರಿದಂತೆ ವಿವಿಧ ರಾಜ್ಯಗಳಿಂದ ಸಾವಿರಾರು ಗಣ್ಯರು ಈ ಒಂದು ಶುಭ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಮಾತನಾಡಿ, ಜನವರಿ 23 ರಿಂದ ರಾಮಮಂದಿರವನ್ನು ಸಾರ್ವಜನಿಕರಿಗೆ ‘ದರ್ಶನ’ಕ್ಕಾಗಿ ತೆರೆಯಲಾಗುವುದು ಎಂದು ಹೇಳಿದ್ದಾರೆ.
ರಾಮ ಮಂದಿದರ ಉದ್ಘಾಟನೆ ಹಿನ್ನೆಲೆಯಲ್ಲಿ ಈಗಾಗಲೇ ವಿಮಾನ ಸೇವೆ, ರೈಲು ಸೇವೆಗಳು ಆರಂಭವಾಗಿದ್ದು ರಾಜ್ಯದ ವಿವಿಧ ಕಡೆಗಳಿಂದ ಮಠಾಧೀಶರು ಅಯೋಧ್ಯೆಯತ್ತ ಹೆಜ್ಜೆ ಹಾಕುತ್ತಿದ್ದಾರೆ.
ರಾಮ ಮಂದಿರಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿದ್ದು, ನಾಳಿನ ದಿನ ಇಡೀ ವಿಶ್ವವೇ ರಾಮಮಯವಾಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ…
ಇದನ್ನೂ ಓದಿ: Daily Horoscope: ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ, ಮಹಿಳೆಯರಿಂದ ವಸ್ತ್ರಾ ಭರಣ ಖರೀದಿ