Advertisement
ಭಾರತೀಯ ಕೋಸ್ಟ್ ಗಾರ್ಡ್ ಸೋಮವಾರ(ನ.25) ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಬಳಿ ಬಂಗಾಳ ಕೊಲ್ಲಿಯಲ್ಲಿ ಮೀನುಗಾರಿಕಾ ದೋಣಿಯಿಂದ ಆರು ಟನ್ ಡ್ರಗ್ಸ್ ವಶಪಡಿಸಿಕೊಂಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದು. ಮಾದಕ ದ್ರವ್ಯ ಕಳ್ಳಸಾಗಣಿಕೆಯನ್ನು ಗುರಿಯಾಗಿಸಿಕೊಂಡು ಎನ್ಸಿಬಿ, ನೌಕಾಪಡೆ ಮತ್ತು ಗುಜರಾತ್ ಪೊಲೀಸ್ ಭಯೋತ್ಪಾದನಾ ನಿಗ್ರಹ ದಳ ಜಂಟಿಯಾಗಿ ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ದೊಡ್ಡ ಕುಳ ಬಲೆಗೆ ಬಿದ್ದಿದೆ.
ಕಾರ್ಯಾಚರಣೆ ನಡೆದಿದ್ದು ಹೇಗೆ?:
ಪೋರ್ಟ್ಬ್ಲೇರ್ನಿಂದ 150 ಕಿ.ಮೀ. ದೂರದಲ್ಲಿ ಮೀನುಗಾರಿಕಾ ಬೋಟ್ವೊಂದು ನಿಧಾನವಾಗಿ ಚಲಿಸುತ್ತಿದ್ದನ್ನು ಕರಾವಳಿ ಕಾವಲು ಪಡೆಯ ಡಾರ್ನಿ ಯರ್ ವಿಮಾನ ಶನಿವಾರ ಗುರುತಿ ಸಿತ್ತು. ಒಂದು ದಿನ ಕಳೆದರೂ ಬೋಟ್ ಸಾಗರದಲ್ಲೇ ಇದ್ದದ್ದನ್ನು ಗಮನಿಸಿದ ಅಧಿಕಾರಿಗಳು ಅನುಮಾನಗೊಂಡು ದಾಳಿ ನಡೆಸಿದ್ದಾರೆ. ಈ ವೇಳೆ 2 ಕೆ.ಜಿ. ಯಂತೆ ಪ್ಯಾಕ್ ಮಾಡಲಾಗಿದ್ದ 3,000 ಪ್ಯಾಕೇಟನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನು ಪೋರ್ಟ್ಬ್ಲೇರ್ ಸಾಗಿಸಲು ಪ್ಲಾನ್ ಮಾಡಲಾಗಿತ್ತು ಎಂದಿದ್ದಾ ರೆ.