Advertisement

ಉಕ್ರೇನ್ ವಿರುದ್ಧ ಸೇಡು ; ತನ್ನದೇ ನಗರದ ಮೇಲೆ ಬಾಂಬ್ ಪ್ರಯೋಗಿಸಿದ ರಷ್ಯಾ !

09:01 PM Apr 21, 2023 | Team Udayavani |

ಮಾಸ್ಕೋ : ರಷ್ಯಾದ ಯುದ್ಧವಿಮಾನವೊಂದು ಉದ್ದೇಶಪೂರ್ವಕವಾಗಿ ಹಾಕಿದ ಬಾಂಬ್ ಉಕ್ರೇನ್‌ನ ಗಡಿಯ ಸಮೀಪವಿರುವ ನಗರದಲ್ಲಿ ಪ್ರಬಲ ಸ್ಫೋಟಕ್ಕೆ ಕಾರಣವಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಘಟನೆ ಸ್ಥಳೀಯರನ್ನು ಭಯಭೀತಗೊಳಿಸಿದೆ ಎಂದು ರಷ್ಯಾದ ಮಿಲಿಟರಿ ಒಪ್ಪಿಕೊಂಡಿದೆ ಎಂದು ಸುದ್ದಿ ಸಂಸ್ಥೆ ಎಪಿ ವರದಿ ಮಾಡಿದೆ.

Advertisement

ಉಕ್ರೇನ್‌ನಲ್ಲಿ ರಷ್ಯಾದ ಪ್ರಸ್ತುತ ಮಿಲಿಟರಿ ಕಾರ್ಯಾಚರಣೆಯ ಸಮಯದಲ್ಲಿ, ರಷ್ಯಾ-ಉಕ್ರೇನ್ ಗಡಿಯ ಪೂರ್ವಕ್ಕೆ ಸುಮಾರು 40 ಕಿಲೋಮೀಟರ್ ದೂರದಲ್ಲಿರುವ 340,000 ಜನರು ವಾಸಿಸುವ ನಗರವಾದ ಬೆಲ್ಗೊರೊಡ್ ನಿಯಮಿತ ಡ್ರೋನ್ ದಾಳಿಗೆ ಒಳಗಾಗಿದೆ.

ಹಿಂದಿನ ದಾಳಿಗಳ ಕುರಿತು ಉಕ್ರೇನಿಯನ್ ಮಿಲಿಟರಿಯ ಮೇಲೆ ದೂಷಿಸಲಾಗಿತ್ತು, ಆದರೆ ಈ ದಾಳಿಯ ಹೊಣೆಗಾರಿಕೆಯನ್ನು ನೇರವಾಗಿ ಹೇಳಿಕೊಳ್ಳಲಿಲ್ಲ. ತಡರಾತ್ರಿಯ ಸ್ಫೋಟವು ಬೆಲ್ಗೊರೊಡ್ ನಿವಾಸಿಗಳು ಹಿಂದೆಂದೂ ಕಂಡಿರುವುದಕ್ಕಿಂತ ಹೆಚ್ಚು ಶಕ್ತಿಶಾಲಿಯಾಗಿತ್ತು. ಪ್ರತ್ಯಕ್ಷದರ್ಶಿಗಳು ಸ್ಪೋಟದ ಶಬ್ದವನ್ನು ಕೇಳಿದರು. ಸ್ಫೋಟವು ಹತ್ತಿರದ ಅಪಾರ್ಟ್ಮೆಂಟ್ ಕಟ್ಟಡಗಳನ್ನು ನಡುಗಿಸಿತು ಮತ್ತು ಅವುಗಳ ಕಿಟಕಿಗಳ ಗಾಜುಗಳು ಒಡೆಯಲು ಕಾರಣವಾಯಿತು.

ರಷ್ಯಾದ ರಕ್ಷಣಾ ಸಚಿವಾಲಯವು ಆಕಸ್ಮಿಕವಾಗಿ ತನ್ನದೇ ಶಸ್ತ್ರಾಸ್ತ್ರವನ್ನು ಪ್ರಯೋಗ ಮಾಡಲಾಗಿದೆ ಎಂದು ಒಪ್ಪಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next