Advertisement

ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ 

12:26 AM Dec 24, 2024 | Team Udayavani |

ಪುಣೆ: ಭಾರತದಲ್ಲಿ ವಾಯು ಗುಣಮಟ್ಟ ಕುಸಿಯುವಲ್ಲಿ ನಗರ ಪ್ರದೇಶಗಳ ಮನೆಗಳೇ ಪ್ರಮುಖ ಕಾರಣ! ಹೌದು, ಒಡಿಶಾದ ಬರ್ಹಾಂಪುರ ವಿವಿ, ಬೆಂಗಳೂರಿನ ಐಐಎಸ್‌ಸಿ, ಪುಣೆಯ ಐಐಟಿಎಂ ಮತ್ತು ಐಐಟಿ ರೂರ್ಕಿ ಮಾಡಿರುವ ಪ್ರತ್ಯೇಕ 2 ಅಧ್ಯಯನ ವರದಿಗಳೇ ಈ ಅಂಶವನ್ನು ಬಹಿರಂಗಪಡಿಸಿವೆ.

Advertisement

ಇಂಗಾಲ ಹೊರಸೂಸುವಿಕೆಗೆ ಅತೀ ಹೆಚ್ಚು ಕೊಡುಗೆ ನೀಡುತ್ತಿರುವುದು ವಸತಿ ಮತ್ತು ಸಾರಿಗೆ ವಲಯ ಎಂದು ಈ ವರದಿಗಳು ಹೇಳಿವೆ. ದಕ್ಷಿಣ ಮತ್ತು ಪಶ್ಚಿಮ ಭಾರತದಲ್ಲಿ ವಸತಿ ಕ್ಷೇತ್ರವು ಮಾಲಿನ್ಯಕ್ಕೆ ಅತೀ ಹೆಚ್ಚು ಕೊಡುಗೆಯನ್ನು ನೀಡುತ್ತಿದೆ. ಅಂದರೆ 13 ನಗರಗಳಲ್ಲಿ ಮನೆಗಳಿಂದಲೇ ಅತೀ ಹೆಚ್ಚು ಮಾಲಿನ್ಯ ಉಂಟಾಗುತ್ತಿದ್ದರೆ, 8 ನಗರಗಳಲ್ಲಿ ಕೈಗಾರಿಕೆಗಳಿಂದ ಮತ್ತು 4 ನಗರಗಳಲ್ಲಿ ಇಂಧನ ಕ್ಷೇತ್ರದಿಂದ ಮಾಲಿನ್ಯ ಹೆಚ್ಚುತ್ತಿದೆ ಎಂದು ವರದಿ ಹೇಳಿದೆ.

ಇದೇ ವೇಳೆ, ನೈಟ್ರೋಜನ್‌ ಆಕ್ಸೆಡ್‌ ಹೊರಸೂಸುವಿಕೆ ಪ್ರಮಾಣ ಗಮನಿಸಿದರೆ, ಶೇ.40ರಷ್ಟನ್ನು ದೇಶದ ಟಾಪ್‌ 5 ರಾಜ್ಯಗಳೇ ಹೊರಸೂಸುತ್ತವೆ. ಉತ್ತರಪ್ರದೇಶವು ಅತೀ ಹೆಚ್ಚು(ಶೇ.10.5) ನೈಟ್ರೋಜನ್‌ ಆಕ್ಸೆ„ಡ್‌ ಹೊರಸೂಸಿದರೆ, ಅನಂತರದ ಸ್ಥಾನಗಳಲ್ಲಿ ಮಹಾರಾಷ್ಟ್ರ(ಶೇ.9.7) ಮತ್ತು ತಮಿಳುನಾಡು (ಶೇ.7.2) ಇವೆ ಎಂದು ವರದಿ ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next