Advertisement

Amazon ನಲ್ಲಿ ಗ್ರೇಟ್ ಸಮ್ಮರ್ ಸೇಲ್: ಗ್ರಾಹಕರಿಗೆ ದೊರಕುತ್ತಿದೆ ಭರ್ಜರಿ ಡಿಸ್ಕೌಂಟ್

11:24 PM May 06, 2023 | Team Udayavani |

ಬೆಂಗಳೂರು: ಗ್ರಾಹಕರ ವಿಶ್ವಾಸಾರ್ಹ ಆನ್ ಲೈನ್ ಮಾರಾಟ ತಾಣ ಅಮೆಜಾನ್.ಇನ್ ಮೇ 8ರವರೆಗೆ ಗ್ರೇಟ್ ಸಮ್ಮರ್ ಸೇಲ್ ಆಯೋಜಿಸಿದೆ.

Advertisement

ಈ ಮೇಳದಲ್ಲಿ ಸ್ಮಾರ್ಟ್ ಫೋನ್ ಗಳು, ಎಲೆಕ್ಟ್ರಾನಿಕ್ಸ್, ಫ್ಯಾಷನ್, ದಿನಸಿ ಪದಾರ್ಥಗಳು, ಗೃಹೋಪಯೋಗಿ ಉಪಕರಣಗಳು ಸೇರಿ ಎಲ್ಲ ಉತ್ಪನ್ನಗಳೂ ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ಲಭ್ಯವಾಗಲಿವೆ.

ಈ ಸಮ್ಮರ್ ಸೇಲ್ ನಲ್ಲಿ ಉತ್ಪನ್ನಗಳ ಮೂಲ ದರದಲ್ಲೇ ದರ ಕಡಿತ ಇರುತ್ತದೆ. ಮಾತ್ರವಲ್ಲ ಐಸಿಐಸಿಐ ಮತ್ತು ಕೊಟಾಕ್ ಬ್ಯಾಂಕ್ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಗಳ ಮೇಲೆ ಶೇ. 10ರಷ್ಟು ತಕ್ಷಣದ ರಿಯಾಯಿತಿ ದೊರಕುತ್ತದೆ. ಬಜಾಜ್ ಫಿನ್ ಸರ್ವ್ ಮತ್ತು ವಿವಿಧ ಕ್ರೆಡಿಟ್ , ಡೆಬಿಟ್ ಕಾರ್ಡ್ ಗಳ ಮೂಲಕ ಶೂನ್ ಬಡ್ಡಿ ದರದ (ನೋ ಕಾಸ್ಟ್ ) ಇಎಂಐ ಸೌಲಭ್ಯ ದೊರಕುತ್ತದೆ. ಅಮೆಜಾನ್ ಪೇ ಲೇಟರ್ ಮೂಲಕ 60 ಸಾವಿರ ರೂ.ಗಳವರೆಗೆ ಸಾಲ ದೊರಕುತ್ತದೆ.

ಸ್ಯಾಮ್ ಸಂಗ್ ಎಸ್ 20 ಎಫ್ ಇ ಫೋನ್ ಗೆ ಶೇ. 60ರಷ್ಟು ರಿಯಾಯಿತಿ ದೊರಕುತ್ತದೆ. ಒನ್ ಪ್ಲಸ್ ಫೋನ್ ಗಳು ವಿಶೇಷ ರಿಯಾಯಿತಿ ದರದಲ್ಲಿ ದೊರಕುತ್ತದೆ. ಅಮೆಜಾನ್ ಎಕೋ ಡಾಟ್ (ಅಲೆಕ್ಸಾ) 4,449ಕ್ಕೆ ದೊರಕುತ್ತದೆ ಎಂದು ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next