Advertisement

Puttur: ಸಂಶಯಾಸ್ಪದ ಲೈನ್‌ಸೇಲ್‌: ಇಬ್ಬರು ಪೊಲೀಸ್‌ ವಶ

12:22 AM Dec 12, 2024 | Team Udayavani |

ಪುತ್ತೂರು: ಛತ್ತೀಸ್‌ಗಢ ನೋಂದಣಿಯ ಕಾರೊಂದರಲ್ಲಿ ಅಪರಿಚಿತ ಇಬ್ಬರು ಬೆಟ್ಟಂಪಾಡಿ ಪರಿಸರದಲ್ಲಿ ಮನೆ ಮನೆಗೆ ಹೋಗಿ “ಸ್ಕ್ರಾಚ್ ವಿನ್‌’ ರೀತಿಯ ಲೈನ್‌ಸೇಲ್‌ನಲ್ಲಿ ತೊಡಗಿಸಿಕೊಂಡಿದ್ದು, ಇವರ ಬಗ್ಗೆ ಅನುಮಾನಪಟ್ಟ ಸ್ಥಳೀಯರು ಬೆಟ್ಟಂಪಾಡಿ ಗ್ರಾ.ಪಂ.ಗೆ ಅವರನ್ನು ಕರೆದೊಯ್ದ ಬಳಿಕ ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ.

Advertisement

ಬಾಲಾಜಿ ಮಾರ್ಕೆಟಿಂಗ್‌ ಸೇಲ್ಸ್‌ ಎಂದು ಕೂಪನ್‌ ಹೊಂದಿದ್ದು ಟಿವಿ, ಫ್ರಿಡ್ಜ್ ಸೇರಿದಂತೆ ಗೃಹೋಪಯೋಗಿ ಉಪಕರಣಗಳನ್ನು ರಿಯಾಯಿತಿ ದರದಲ್ಲಿ ಮತ್ತು ಕೂಪನ್‌ ಕೊಟ್ಟು ಅದನ್ನು ಸಾðಚ್‌ ಮಾಡಿದ್ದಲ್ಲಿ ಅದರಲ್ಲಿ ಬಂದ ವಸ್ತುಗಳನ್ನು ಕೊಡುವುದಾಗಿ ಜನರನ್ನು ನಂಬಿಸುತ್ತಿದ್ದರು ಎನ್ನಲಾಗಿದೆ. ಇದರಿಂದ ಅನುಮಾನಗೊಂಡ ಸ್ಥಳೀಯರು ಬೆಟ್ಟಂಪಾಡಿ ಪಂಚಾಯತ್‌ಗೆ ವಿಷಯ ತಿಳಿಸಿ ಅಲ್ಲಿಗೆ ಕರೆತಂದಿದ್ದರು. ಅದಾದ ಬಳಿಕ ಪೊಲೀಸರು ಪುತ್ತೂರು ಗ್ರಾಮಾಂತರ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.

ಮಾರ್ಕೆಂಟಿಂಗ್‌ ಕಚೇರಿ ಕೊಲ್ಹಾಪುರ ಗಾಂಧಿನಗರ ಎಂದಿದ್ದು, ಮಂಗಳೂರು ಸಹಿತ 10 ಕಡೆ ಶಾಖೆ ಹೊಂದಿರುವುದಾಗಿ ನಮೂದಿ ಸಲಾಗಿದೆ. ಆದರೆ ಜಿಲ್ಲಾಡಳಿತ ಅಥವಾ ಇತರರಿಂದ ಯಾವುದೇ ಅನುಮತಿ ಇಲ್ಲದೇ ಇವರು ಮನೆ ಮನೆಗೆ ತೆರಳುತ್ತಿದ್ದ ಅಂಶ ಬೆಳಕಿಗೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next