Advertisement

E-Commerce: ಆಹಾರ ಪದಾರ್ಥ ಪ್ರತ್ಯೇಕ ಪ್ಯಾಕ್‌ ಕಡ್ಡಾಯ: ಪ್ರಾಧಿಕಾರ

03:34 AM Dec 05, 2024 | Team Udayavani |

ಹೊಸದಿಲ್ಲಿ: ಆಹಾರ ಪದಾರ್ಥಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಗ್ರಾಹಕರಿಗೆ ಮನೆ ಬಾಗಿಲಿಗೆ ತಲುಪಿಸುವ ಇ-ಕಾಮರ್ಸ್‌ ವೇದಿಕೆಗಳು ಇನ್ನು ಮುಂದೆ ಆಹಾರ ಮತ್ತು ಆಹಾರೇತರ ವಸ್ತುಗಳನ್ನು ಒಟ್ಟಿಗೆ ನೀಡುವಂತಿಲ್ಲ. ಬದಲಿಗೆ ಅವುಗಳನ್ನು ಪ್ರತ್ಯೇಕವಾಗಿಯೇ ಗ್ರಾಹಕರಿಗೆ ತಲುಪಿಸಬೇಕು’ ಎಂದು ಭಾರತೀಯ ಆಹಾರ ಸುರಕ್ಷತ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್‌ಎಸ್‌ಎಐ) ಹೇಳಿದೆ.

Advertisement

ಗ್ರಾಹಕರ ಸುರಕ್ಷತೆ ಹಾಗೂ ಆರೋಗ್ಯ ಖಾತರಿಗಾಗಿ ಇ-ಕಾಮರ್ಸ್‌, ಆಹಾರ ವ್ಯಾಪಾರ ನಿರ್ವಾಹಕ ಸಂಸ್ಥೆಗಳಿಗೆ ಪ್ರಾಧಿಕಾರ ಹೊಸ ಸಲಹೆಗಳನ್ನು ನೀಡಿದೆ. ಜತೆಗೆ ಆಹಾರ ಪದಾರ್ಥ ವಿತರಿಸುವ ಸಿಬಂದಿಗೆ ಆಹಾರ ಸುರಕ್ಷತೆ, ನೈರ್ಮಲ್ಯ ಅಭ್ಯಾಸಗಳ ಬಗ್ಗೆ ತರಬೇತಿ ನೀಡಬೇಕು ಎಂದು ಹೇಳಿದೆ.

ನಿಯಮವೇನು?
* ಆಹಾರ ವಸ್ತುಗಳು ಇತರ ವಸ್ತುಗಳು ಒಟ್ಟಿಗೆ ಪ್ಯಾಕಿಂಗ್‌ ಸಲ್ಲದು, ಪದಾರ್ಥದ ಅವಧಿ ಮೀರುವ ಮುನ್ನ ವಿತರಣೆ

* ಪ್ಯಾಕ್‌ಗಳ ಮೇಲೆ ಸುರಕ್ಷತಾ ನಿಯಮಗಳು ಇರಬೇಕು

* ವಿತರಣ ಸಿಬಂದಿಗೆ ಆಹಾರ ಸುರಕ್ಷತೆ, ನೈರ್ಮಲ್ಯ ಕುರಿತ ತರಬೇತಿ ನೀಡಬೇಕು

Advertisement
Advertisement

Udayavani is now on Telegram. Click here to join our channel and stay updated with the latest news.

Next