Advertisement

Melborne: ಆಸೀಸ್‌ ಟೆನಿಸ್‌ ದೈತ್ಯ ನೀಲ್‌ ಫ್ರೇಸರ್‌ ನಿಧನ

01:28 AM Dec 04, 2024 | Team Udayavani |

ಮೆಲ್ಬರ್ನ್: ಆಸ್ಟ್ರೇಲಿಯದ “ಟೆನಿಸ್‌ ಗ್ರೇಟ್‌’ ಖ್ಯಾತಿಯ ನೀಲ್‌ ಫ್ರೇಸರ್‌ ಮಂಗಳವಾರ ತಮ್ಮ 91ನೇ ವರ್ಷದಲ್ಲಿ ನಿಧನ ಹೊಂದಿದರು.

Advertisement

ತಮ್ಮ 24 ವರ್ಷಗಳ ಟೆನಿಸ್‌ ಬಾಳ್ವೆಯಲ್ಲಿ ಆಸ್ಟ್ರೇಲಿಯವನ್ನುಸತತ 4 ಸಲ ಡೇವಿಸ್‌ ಕಪ್‌ ಪಟ್ಟಕ್ಕೇರಿಸಿದ ನಾಯಕನೆಂಬ ಹಿರಿಮೆ ನೀಲ್‌ ಫ್ರೇಸರ್‌ ಅವರದಾಗಿದೆ.

ನೀಲ್‌ ಫ್ರೇಸರ್‌ 19 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳ ಸರದಾರ. ಇದರಲ್ಲಿ 3 ಗ್ರ್ಯಾನ್‌ಸ್ಲಾಮ್‌ ಸಿಂಗಲ್ಸ್‌ ಪ್ರಶಸ್ತಿಗಳಿವೆ. 1960ರ ವಿಂಬಲ್ಡನ್‌ ಪಂದ್ಯಾವಳಿಯಲ್ಲಿ ತಮ್ಮದೇ ನಾಡಿದ ಟೆನಿಸ್‌ ದೈತ್ಯ ರಾಡ್‌ ಲೇವರ್‌ ಅವರನ್ನು ಸೋಲಿಸಿ ಪ್ರಶಸ್ತಿಯನ್ನೆತ್ತಿದ ಹೆಗ್ಗಳಿಗೆ ಇವರದು. 1959 ಮತ್ತು 1960ರ ಯುಎಸ್‌ ಓಪನ್‌ ಪ್ರಶಸ್ತಿ ಕೂಡ ಫ್ರೇಸರ್‌ ಪಾಲಾಗಿತ್ತು. ಇಲ್ಲಿ ಕ್ರಮವಾಗಿ ಅಲೆಕ್ಸ್‌ ಒಲ್ಮೆಡೊ ಮತ್ತು ರಾಡ್‌ ಲೇವರ್‌ ಅವರನ್ನು ಫೈನಲ್‌ನಲ್ಲಿ ಮಣಿಸಿದ್ದರು.

ಗ್ರ್ಯಾನ್‌ಸ್ಲಾಮ್‌ ಡಬಲ್ಸ್‌ನಲ್ಲಿ ನೀಲ್‌ ಫ್ರೇಸರ್‌ ಅವರದು ಅಮೋಘ ಸಾಧನೆ. ಪುರುಷರ ಡಬಲ್ಸ್‌ನಲ್ಲಿ 11, ಮಿಶ್ರ ಡಬಲ್ಸ್‌ನಲ್ಲಿ 5 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯನ್ನು ಇವರು ಗೆದ್ದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next