Advertisement

ಆದಿಪುರುಷ ಆದಾಯ ಇಳಿಕೆಯತ್ತ! 

09:29 PM Jun 21, 2023 | Team Udayavani |

ನವದೆಹಲಿ: ಶುರುವಿನಿಂದಲೂ ಒಂದಿಲ್ಲೊಂದು ವಿವಾದಕ್ಕೆ ಗುರಿಯಾಗುತ್ತಿರುವ ಆದಿಪುರುಷ ಸಿನಿಮಾ ಇದೀಗ ಬಾಕ್ಸ್‌ ಆಫೀಸ್‌ನಲ್ಲೂ ಸವಾಲು ಎದುರಿಸುವಂತಾಗುತ್ತಿದ್ದು, ಸಿನಿಮಾದ ಕಲೆಕ್ಷನ್‌ ದಿನದಿಂದ ದಿನಕ್ಕೆ ಗಣೀಯವಾಗಿ ಇಳಿಕೆಯಾಗುತ್ತಿದೆ ಎಂದು ಬಾಕ್ಸ್‌ ಆಫೀಸ್‌ ಇಂಡಿಯಾ ತಿಳಿಸಿದೆ. ಸಿನಿಮಾದ ಸಂಭಾಷಣೆಗಳು ಜನರ ಧಾರ್ಮಿಕ ಭಾವೆನೆಗೆ ಧಕ್ಕೆ ತಂದಿರುವುದೇ ಇದಕ್ಕೆ ಕಾರಣವೆನ್ನುವ ಮಾತು ಕೇಳಿಬಂದಿದೆ. ಹೌದು, ಸಿನಿಮಾದ ವಿರುದ್ಧ ಪ್ರತಿಭಟನೆಗಳು, ಕೇಸುಗಳು ದಾಖಲಾಗುತ್ತಿದ್ದಂತೆ ಪ್ರೇಕ್ಷಕರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಇದರ ಪರಿಣಾಮ ಭಾನುವಾರದ ಟಿಕೆಟ್‌ ಮಾರಾಟಕ್ಕೆ ಹೋಲಿಸಿದರೆ ಸೋಮವಾರ ಶೇ.78ರಷ್ಟು ಮಾತ್ರ ಟಿಕೆಟ್‌ ಮಾರಾಟವಾಗಿತ್ತು. ಬುಧವಾರ ಈ ಪ್ರಮಾಣ ಶೇ.33ಕ್ಕೆ ಕುಸಿದಿದೆ. ಬಿಡುಗಡೆಗೊಂಡ 5ನೇ ದಿನದ ವೇಳೆಗೆ ಸಿನಿಮಾದ ಒಟ್ಟು ಗಳಿಕೆ 395 ಕೋಟಿ ರೂ. ದಾಟಿದೆ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next