ಮುಂಬಯಿ: ಪ್ರೀತಿಗೆ ವಯಸ್ಸುಗಳ ಹಂಗಿಲ್ಲ. ಎರಡು ಮನಸ್ಸುಗಳು ಸಮ್ಮಿಲನವಾದರೆ ಅಲ್ಲಿ ಪ್ರೀತಿ ಬಂಧ ಮೂಡುತ್ತದೆ. ಸೆಲೆಬ್ರಿಟಿಗಳ ಪ್ರೇಮಾ ಬಂಧದ ವಿಚಾರಕ್ಕೆ ಈ ಮಾತು ಸೂಕ್ತವಾಗುತ್ತದೆ. ಕೆಲ ಸೆಲೆಬ್ರಿಟಿಗಳ ತಮ್ಮಗಿಂತ ವಯಸ್ಸಿನಲ್ಲಿ ದೊಡ್ಡವರು ಹಾಗೂ ಕಿರಿಯರನ್ನು ಪ್ರೀತಿಸಿ ಮದುವೆ ಆಗಿರುವ ಉದಾಹರಣೆಗಳಿವೆ.
ಇತ್ತೀಚೆಗೆ ಹಿಂದಿ ಕಿರುತೆರೆ ಜನಪ್ರಿಯ ನಟಿ ಶಿವಾಂಗಿ ವರ್ಮಾ (Shivangi Verma) ಹಿರಿಯ ನಟರೊಬ್ಬರ ಜತೆ ಫೋಟೋವನ್ನು ಹಂಚಿಕೊಂಡಿದ್ದರು. ಈ ಫೋಟೋ ಕೆಳಗೆ ʼಪ್ರೀತಿಗೆ ವಯಸ್ಸಿಲ್ಲ, ಮಿತಿಯಿಲ್ಲ….ʼ ಎನ್ನುವ ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಈ ಫೋಟೋಗೆ ಸಾವಿರಾರು ಲೈಕ್ಸ್ ಗಳ ಹಲವು ಕಮೆಂಟ್ ಗಳು ಬಂದಿದೆ.
ಇದನ್ನೂ ಓದಿ: Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಹಿರಿಯ ನಟ ಗೋವಿಂದ್ ನಾಮ್ದೇವ್ (Govind Namdev) ಅವರೊಂದಿಗೆ ಶಿವಾಂಗಿ ಫೋಟೋ ಹಂಚಿಕೊಂಡಿದ್ದಾರೆ. ಅಸಲಿಗೆ ಹತ್ತಾರು ವರ್ಷದಿಂದ ಧಾರಾವಾಹಿಗಳಲ್ಲಿ ನಟಿಸಿರುವ ಶಿವಾಂಗಿ ಇದೇ ಮೊದಲ ಬಾರಿಗೆ ಬೆಳ್ಳಿತೆರೆಗೆ ಕಾಲಿಡುತ್ತಿದ್ದಾರೆ. ಕಾಮಿಡಿ ಕಥಾಹಂದರ ಚಿತ್ರವೊಂದರಲ್ಲಿ ಶಿವಾಂಗಿ ನಟಿಸಲಿದ್ದು, ಗೋವಿಂದ್ ಅವರು ಸಿನಿಮಾದಲ್ಲಿರಲಿದ್ದಾರೆ. ಜೊತೆಯಲ್ಲಿ ತೆರೆಹಂಚಿಕೊಳ್ಳುತ್ತಿರುವ ಶಿವಾಂಗಿ ಅವರ ಗೋವಿಂದ್ ಅವರೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ.
ಆದರೆ ಕೆಲವರು ಈ ಫೋಟೋ ಕೆಳಗೆ ಶಿವಾಂಗಿ ಹಾಕಿರುವ ಕ್ಯಾಪ್ಷನ್ ಇಟ್ಟುಕೊಂಡು 31ರ ವಯಸ್ಸಿನ ಶಿವಾಂಗಿ 71ರ ವಯಸ್ಸಿನ ನಟನೊಂದಿಗೆ ಪ್ರೀತಿಯಲ್ಲಿದ್ದಾರೆ. ಹಣಕ್ಕಾಗಿ ಶಿವಾಂಗಿ ಈ ರೀತಿ ಮಾಡುತ್ತಿದ್ದಾರೆ. ಗೋವಿಂದ್ ಅವರ ಆಸ್ತಿಗಾಗಿ ಶಿವಾಂಗಿ ಪ್ರೀತಿಯ ನಾಟಕ ಮಾಡುತ್ತಿದ್ದಾರೆ ಎನ್ನುವ ಕಮೆಂಟ್ ಮಾಡುತ್ತಿದ್ದಾರೆ.
ಗೋವಿಂದ್ ಹಾಗೂ ಶಿವಾಂಗಿ ನಡುವೆ ನಟ – ನಟಿಯ ಸಂಬಂಧ ಮಾತ್ರ. ಆದರೆ ಕೆಲವರು ಫೋಟೋವನ್ನು ಬಳಸಿಕೊಂಡು ಪ್ರೀತಿಯ ಸಂಬಂಧ ಕಲ್ಪಿಸಿ ಮಾತನಾಡಿಕೊಳ್ಳುತ್ತಿದ್ದಾರೆ.
ಬಾಲಿವುಡ್ನ ಹಿರಿಯ ನಟ ಗೋವಿಂದ್ ನಾಮ್ದೇವ್ – ಸುಧಾ ದಂಪತಿಗೆ ಪಲ್ಲವಿ, ಮೇಘಾ ಮತ್ತು ಪ್ರಗತಿ ಎಂಬ ಮೂವರು ಹೆಣ್ಣು ಮಕ್ಕಳಿದ್ದಾರೆ. ಇನ್ನು ಶಿವಾಂಗಿ ಅವರು ರಿಪುದಮನ್ ಹಂಡ ಎಂಬುವರನ್ನು ಪ್ರೀತಿಸುತ್ತಿದ್ದಾರೆ.
ಸದ್ಯ ಶಿವಾಂಗಿ ಹಂಚಿಕೊಂಡಿರುವ ಪೋಟೋ ವೈರಲ್ ಆಗುವುದರ ಜತೆ ನೆಟ್ಟಿಗರ ಗಮನ ಸೆಳೆದಿದೆ.