Advertisement
ಬೆಳಗ್ಗೆ 11.30ಕ್ಕೆ ಗಂಟೆಗೆ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ಸುದೀಪ್ ಮುಂಚಿತವಾಗಿ 10 ಗಂಟೆಗೆ ಆಗಮಿಸಿದ್ದರು. ಹೆಲಿಪ್ಯಾಡ್ ಪಕ್ಕದಲ್ಲೇ ನಿರ್ಮಿಸಿದ್ದ ವೇದಿಕೆ ಬಳಿ ಸಹಸ್ರಾರು ಅಭಿಮಾನಿಗಳು ನೆರೆದಿದ್ದರು. ಅಭಿಮಾನಿಗಳತ್ತ ಕೈಬೀಸಿದ ಸುದೀಪ್ , ನನ್ನ ಪ್ರತಿಮೆ ಮಾಡುವಷ್ಟು ಪ್ರೀತಿ ಇರುವುದು ಕಂಡು ಖುಷಿಯಾಗಿದೆ. ನಿಮ್ಮ ಅಭಿಮಾನವೇ ನನಗೆ ಎಲ್ಲಕ್ಕಿಂತ ಮಿಗಿಲು ಎಂದರು.
Related Articles
Advertisement
ನಾನು ಸಾಧನೆ ಮಾಡಬೇಕಾದದ್ದು ತುಂಬಾ ಇದೆ ಮುಂದೆ ಅಂತ ದಿನ ಬಂದಾಗ ನನ್ನ ಮೂರ್ತಿ ಇಡಲಿ ನಾನೇ ಬರ್ತಿನಿ. ನನ್ನ ಮೂರ್ತಿ ನಿರ್ಮಾಣವಾದ ಮೇಲೆಯೇ ನನಗೆ ಗೊತ್ತಾಗಿದ್ದು. ಮೊದಲೇ ಗೊತ್ತಾಗಿದ್ದರೆ ಬೇಡ ಅನ್ನುತ್ತಿದ್ದೆ ಎಂದರು.
ಎಸ್ ಟಿ ಗೆ ಶೇ.7.5 ಮೀಸಲಾತಿಗಾಗಿ ವಾಲ್ಮೀಕಿ ಸಮಾಜ ಶ್ರೀಗಳ ಹೋರಾಟಕ್ಕೆ ನನ್ನ ಬೆಂಬಲವಿದೆ. ನಾನು ಹೋರಾಟದಲ್ಲಿ ನೇರವಾಗಿ ಭಾಗವಹಿಸಬೇಕು ಅಂತೇನಿಲ್ಲ. ಪ್ರಸನ್ನಾನಂದಪುರಿ ಸ್ವಾಮೀಜಿ ಇದರ ಬಗ್ಗೆ ಮಾತನಾಡಿಲ್ಲ. ಅವರು ಮಾತನಾಡಲಿ. ನಾನು ಅವರ ಜತೆ ನಿರಂತರ ಸಂಪರ್ಕದಲ್ಲಿದ್ದೇನೆ. ನಾನೇ ಅಲ್ಲಿ ಕೂಡಕಾಗಲ್ಲ. ನಾನು ಏನು ಮಾಡಬೇಕೋ ಅದನ್ನು ಮಾಡುವುದಾಗಿ ತಿಳಿಸಿದರು.
ಸಿನೆಮಾದಿಂದಲೇ ನಾನು ಇಷ್ಟೊಂದು ಸಂಪಾದನೆ ಮಾಡಿರುವುದು. ಅದರ ಬಗ್ಗೆ ಕಾಳಜಿಗಳು, ಜವಾಬ್ದಾರಿ ಇವೆ. ಅಪ್ಪು ಸಮಾಜ ಸೇವೆ ಬಗ್ಗೆ ನಾವು ಏನೆ ಮಾತನಾಡಿದರೂ ಅದು ಒಳ್ಳೆಯ ರೀತಿಯಲ್ಲೇ ಇರಬೇಕು ಎಂದರು.
ಹೆಚ್ಚು ಕಾಲ ಇರಲಿಲ್ಲ. ಆದರೆ, ಅಭಿಮಾನಿಗಳು ಅವರನ್ನು ಕಾಣಲು ಹೆಲಿಪ್ಯಾಡ್ ನುಗ್ಗಲೆತ್ನಿಸಿದರು. ಪೊಲೀಸರು ಅಭಿಮಾನಿಗಳು ಚದುರಿಸಲು ಪೊಲೀಸರು ಲಾಠಿ ಬೀಸಿದರು.
ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ನೂಕು ನುಗ್ಗಲು ಏರ್ಪಟ್ಟಿತ್ತು. ಇದರಿಂದ ಪೊಲೀಸರು ಹೈರಾಣಾದರು. ಕಾರ್ಯಕ್ರಮದ ಸಮಯ 11.30 ಕ್ಕೆ ನಿಗಿದಿಯಾಗಿದ್ದರಿಂದ ಇನ್ನೂ ಜಿಲ್ಲೆಯ ಮೂಲೆಮೂಲೆಗಳಿಂದ ಅಭಿಮಾನಿಗಳು ಆಗಮಿಸುತ್ತಿದ್ದರು. ಆದರೆ, 11 ಗಂಟೆಗೆಲ್ಲ ಸುದೀಪ್ ಮರಳಿ ಹೋದರು. ಸುದೀಪ್ ಕುರಕುಂದಕ್ಕೆ ಬರುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿಯಾಗಿತ್ತು.
ಸೊಂಟದ ಹಾಡು ಹಾಡಿ ರಂಜಿಸಿದ ಕಿಚ್ಚ:
ತಮ್ಮನ್ನು ಕಾಣಲು ದೂರದೂರುಗಳಿಂದ ಆಗಮಿಸಿದ್ದ ಅಭಿಮಾನಿಗಳನ್ಜು ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಸೊಂಟದ ಹಾಡು ಹೇಳಿ ರಂಜಿಸಿದರು.
ಸಿರವಾರ ಸಮೀಪದ ಕುರುಕಂದ ಗ್ರಾಮಕ್ಕೆ ಮಹರ್ಷಿ ವಾಲ್ಮೀಕಿ ಮೂರ್ತಿ ಅನಾವರಣ ಮಾಡಿದ ಬಳಿಕ ಮಾತನಾಡಿದರು. ಈ ವೇಳೆ ಚಂದು ಸಿನಿಮಾದ ಸೊಂಟದ ವಿಷಯ ಬ್ಯಾಡವೋ ಶಿಷ್ಯ, ಸೊಂಟಕ್ಕಿಂತ ಸೂಪರ್ರೋ ಗುಂಡಿನ ದಾಸ್ಯ ಹಾಡು ಹೇಳಿ ರಂಜಿಸಿದರು.
ಇದಕ್ಕೆ ಅಭಿಮಾನಿಗಳು ಕೂಡ ದನಿಗೂಡಿಸಿದರು. ಬಳಿಕ ವೀರಮದಕರಿ ನಾಯಕ ಸಿನಿಮಾದ ಡೈಲಾಗ್ ಹೊಡೆದರು. ಈ ವೇಳೆ ಅಭಿಮಾನಿಗಳು ಕಿಚ್ಚ ಕಿಚ್ಚ ಎಂದು ಕೂಗಿ ಅಭಿಮಾನ ಮೆರೆದರು.
ಜಿಲ್ಲೆಯ ಮೂಲೆಮೂಲೆಗಳಿಂದ ಬೈಕ್ ಗಳಲ್ಲೆ ಆಗಮಿಸಿದ್ದರು. ಕಿಚ್ಚ ಬಾಯ್ಸ್ ಹೆಸರಿನ ದೊಡ್ಡ ದೊಡ್ಡ ಬ್ಯಾನರ್ ಗಳನ್ನು ಹಿಡಿದು ಬೈಕ್ ರ್ಯಾಲಿ ನಡೆಸಿದರು. ನಿಗದಿತ ಅವಧಿಗಿಂತ ಮುಂಚೆಯೇ ಸುದೀಪ್ ಆಗಮಿಸಿದ್ದರಿಂದ ನಿರೀಕ್ಷೆಯಷ್ಟು ಜನ ಸೇರಿರಲಿಲ್ಲ.