ಬೆಂಗಳೂರು: ವಾರದ ಟಾಸ್ಕ್ ಮುಗಿದ ಬಳಿಕ ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆದಿದೆ.
ಅತಿಥಿಗಳು ಹಾಗೂ ಸಿಬ್ಬಂದಿಗಳಾಗಿ ಈ ವಾರ ಬಿಗ್ ಬಾಸ್ ಮನೆ ರೆಸಾರ್ಟ್ ಆಗಿ ಬದಲಾಗಿತ್ತು. ಎರಡು ತಂಡಗಳಾಗಿ ಟಾಸ್ಕ್ ನಡೆದಿತ್ತು.
ವಾರದ ಟಾಸ್ಕ್ ಗಳು ಮುಕ್ತಾಯವಾದ ಬಳಿಕ ತಲೆಗೆ ಬಾಟಲಿ ಹೊಡೆಯುವ ಮೂಲಕ ನಾಮಿನೇಷನ್ ಪ್ರಕ್ರಿಯೆ ನಡೆದಿದೆ.
ಚೈತ್ರಾ, ಗೌತಮಿ, ಧನರಾಜ್, ಮೋಕ್ಷಿತಾ, ತ್ರಿವಿಕ್ರಮ್ , ಹನುಮಂತ, ಮಂಜು ಹಾಗೂ ಐಶ್ವರ್ಯಾ ಅವರು ಈ ವಾರ ನಾಮಿನೇಟ್ ಆಗಿದ್ದಾರೆ.
ಆಟದ ವಿಚಾರದಲ್ಲಿ ಯಾರು ಕಳಪೆ ಯಾರು ಉತ್ತಮ ಎನ್ನುವ ಅಭಿಪ್ರಾಯವನ್ನು ಆಯಾ ಸ್ಪರ್ಧಿಗಳು ನೀಡಿದ್ದಾರೆ.
ಮೋಕ್ಷಿತಾ, ರಜತ್, ಗೌತಮಿ, ಧನರಾಜ್, ಮಂಜು ಹಾಗೂ ಚೈತ್ರಾ ಅವರು ಹನುಮಂತು ಅವರಿಗೆ ಕಳಪೆ ಪಟ್ಟಿಯನ್ನು ನೀಡಿದ್ದಾರೆ.
ತುಂಬಾ ತಪ್ಪು ಅಂಥ ಅನ್ನಿಸಿದ್ದು ಹನುಮಂತು ಎಂದು ಧನರಾಜ್ ಅವರು ಹೇಳಿದ್ದಾರೆ. ಸಿಬ್ಬಂದಿ ಶುಚಿತ್ವ ಕಾಪಾಡಿಕೊಳ್ಳಬೇಕಿತ್ತು. ಬಹುಶಃ ಅದೆಲ್ಲೋ ಹೊಡೆತ ಬಿತ್ತು ಅಂಥ ಚೈತ್ರಾ ಹೇಳಿದ್ದಾರೆ. ನನಗೆ ಅವರು ಕೆಲಸ ಕೊಡುವುದರ ಜತೆ ನೀವೂ ಕೊಡ್ತಾ ಇದ್ರಿ ಎಂದು ಗೌತಮಿ ಹೇಳಿದ್ದಾರೆ. ಮಂಜು ಅವರು ನಮಗೆಲ್ಲ ಇದು ಒಂದು ರೀತಿ ಕಿರಿಕಿರಿ ಅನ್ನಿಸುತ್ತದೆ ಎಂದು ಹೇಳಿದ್ದಾರೆ.
ಥ್ಯಾಂಕ್ಯೂ, ಧನ್ಯವಾದಗಳು ನೀವು ಕಳಪೆ ಕೊಟ್ರು ಅಂಥ ನಾನು ಕುಗ್ಗುವುದಿಲ್ಲ, ಬಗ್ಗೋದು ಇಲ್ಲವೆಂದು ಕಳಪೆಯಾಗಿ ಹನುಮಂತು ಅವರು ಜೈಲು ಸೇರಿದ್ದಾರೆ.
ಇನ್ನೊಂದು ಕಡೆ 9 ಸ್ಪರ್ಧಿಗಳಿಗೆ ಕ್ಯಾಪ್ಟನ್ಸಿ ಟಾಸ್ಕ್ ನೀಡಲಾಗಿದೆ. ತಮಗೆ ಕೊಟ್ಟಿರುವ ಬಾಸ್ಕೆಟ್ ನಲ್ಲಿ ಚೆಂಡನ್ನು ಹಾಕಬೇಕು. ಬಿಗ್ ಬಾಸ್ ಹೇಳಿದ ನಂಬರ್ ಯಿಂದ ಚೆಂಡು ಬೀಳಿಲ್ಲವೆಂದು ಮಂಜು ಹಾಗೂ ಮೋಕ್ಷಿತಾ ಮಾತನಾಡಿದ್ದಾರೆ. ಬಿಗ್ ಬಾಸ್ ಹೇಳಿದ ನಂಬರ್ ಯಿಂದ ಚೆಂಡು ಬಿದ್ದಿರುವುದನ್ನು ನಾನು ನೋಡಿಲ್ಲವೆಂದು ಮೋಕ್ಷಿತಾ ಹೇಳಿದ್ದಾರೆ.
ರಜತ್ ಅವರು ಎಲ್ಲಿಂದ ಬಿತ್ತು ಭವ್ಯ ಎಂದು ಕೇಳಿದ್ದು, ದೇವ್ರಾಣೆ ನನಗೆ ಗೊತ್ತಿಲ್ಲವೆಂದು ಭವ್ಯ ಉತ್ತರಿಸಿದ್ದಾರೆ. ನಾನು ನೋಡಿದೆ ಆದ್ರೆ ಭವ್ಯ ಸುಮ್ಮನೆ ಇರಿ ಅಂಥ ಹೇಳಿದ್ರು ಅದಕ್ಕೆ ನಾನು ಸುಮ್ಮನಾದೆ ಎಂದು ರಜತ್ ತ್ರಿವಿಕ್ರಮ್ ಬಳಿ ಹೇಳಿದ್ದಾರೆ.