Advertisement

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

06:27 PM Jan 03, 2025 | Team Udayavani |

ಹೊಸದಿಲ್ಲಿ: ಚೀನಾ ಲಡಾಕ್ ನಲ್ಲಿ ಮತ್ತೆ ಕಿರಿಕ್ ಆರಂಭಿಸಿದ್ದು ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳ ನಿರ್ಮಾಣ ಮಾಡಿದ್ದು, ವಿದೇಶಾಂಗ ಇಲಾಖೆ ಈ ಕ್ರಮವನ್ನು ಬಲವಾಗಿ ಖಂಡಿಸಿದೆ.

Advertisement

ಎರಡು ಕೌಂಟಿಗಳನ್ನು ಮಾಡುವ ಮೂಲಕ ಭಾರತದ ಭೂಭಾಗವನ್ನು ಆಳಿತಾತ್ಮಕ ಪ್ರಕ್ರಿಯೆಗೆ ಬಳಸಿಕೊಳ್ಳುವ ಕ್ರಮದ ಘೋಷಣೆಯನ್ನು ಇತ್ತೀಚೆಗೆ ಚೀನಾ ಮಾಡಿದೆ.

ಈ ಬಗ್ಗೆ ಶುಕ್ರವಾರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಇಲಾಖೆ ವಕ್ತಾರ ರಣಧೀರ್ ಜೈಸ್ವಾಲ್ ” “ಚೀನಾದ ಹೋಟಾನ್ ಪ್ರಿಫೆಕ್ಚರ್‌ನಲ್ಲಿ ಎರಡು ಹೊಸ ಕೌಂಟಿಗಳ ಸ್ಥಾಪನೆಗೆ ಸಂಬಂಧಿಸಿದ ಪ್ರಕಟಣೆಯನ್ನು ನಾವು ನೋಡಿದ್ದೇವೆ. ಈ ಕೌಂಟಿಗಳೆಂದು ಕರೆಯಲ್ಪಡುವ ಅಧಿಕಾರ ವ್ಯಾಪ್ತಿಯ ಭಾಗಗಳು ಭಾರತದ ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿ ಬರುತ್ತವೆ.” ಎಂದಿದ್ದಾರೆ.

ಲಡಾಖ್‌ನ ಭಾಗವಾಗಿರುವ ಚೀನಾದ ಹೊಟಾನ್ ಪ್ರಿಫೆಕ್ಚರ್‌ನಲ್ಲಿ ಎರಡು ಹೊಸ ಕೌಂಟಿಗಳ ಘೋಷಣೆಯ ಕುರಿತು ಭಾರತವು ಚೀನಾದೊಂದಿಗೆ “ತೀವ್ರ ಪ್ರತಿಭಟನೆ” ಸಲ್ಲಿಸಿದೆ. ಲಡಾಖ್‌ನಲ್ಲಿ ಚೀನಾದ ಅಕ್ರಮ ಆಕ್ರಮಣವನ್ನು ಎಂದಿಗೂ ಭಾರತ ಒಪ್ಪಿಕೊಂಡಿಲ್ಲ ಎಂದು ಹೇಳಿದ್ದಾರೆ.

ಟಿಬೆಟ್‌ನ ಯಾರ್ಲುಂಗ್ ತ್ಸಾಂಗ್ಪೋ ನದಿಯಲ್ಲಿ ಚೀನಾ ಜಲವಿದ್ಯುತ್ ಯೋಜನೆಯನ್ನು ಆರಂಭಿಸಿರುವ ಬಗ್ಗೆಯೂ ಕೇಂದ್ರ ಸರಕಾರಕ್ಕೆ ತಿಳಿದಿದೆ ಎಂದು ಜೈಸ್ವಾಲ್ ಹೇಳಿದ್ದಾರೆ.

Advertisement

“ನದಿಯ ನೀರಿಗೆ ಸ್ಥಾಪಿತ ಬಳಕೆದಾರರ ಹಕ್ಕುಗಳನ್ನು ಹೊಂದಿರುವ ಉಪ ನದಿಯ ರಾಜ್ಯವಾಗಿ, ನಾವು ತಜ್ಞರ, ರಾಜತಾಂತ್ರಿಕ ಮಾರ್ಗಗಳ ಮೂಲಕ, ಚೀನಾದಿಂದ ನಮ್ಮ ಪ್ರದೇಶದಲ್ಲಿನ ನದಿಗಳ ಮೇಲೆ ಮೆಗಾ ಯೋಜನೆಗಳ ಬಗ್ಗೆ ನಮ್ಮ ಅಭಿಪ್ರಾಯಗಳು ಮತ್ತು ಕಾಳಜಿಗಳನ್ನು ನಿರಂತರವಾಗಿ ವ್ಯಕ್ತಪಡಿಸಿದ್ದೇವೆ” ಎಂದು ಹೇಳಿದರು.

ಕೌಂಟಿ (ಲ್ಯಾಟಿನ್) ಎಂಬುದು ಕೆಲವು ರಾಷ್ಟ್ರಗಳಲ್ಲಿ ಆಡಳಿತಾತ್ಮಕ ಅಥವಾ ಇತರ ಉದ್ದೇಶಗಳಿಗಾಗಿ ಬಳಸಲಾಗುವ ದೇಶದ ಭೌಗೋಳಿಕ ಪ್ರದೇಶ.

Advertisement

Udayavani is now on Telegram. Click here to join our channel and stay updated with the latest news.

Next