ಬೆಂಗಳೂರು: ಬಿಗ್ ಬಾಸ್ (Bigg Boss Kannada-11) ಮನೆ ರೆಸಾರ್ಟ್ ಆಗಿ ಬದಲಾಗಿದೆ. ಅತಿಥಿಗಳು ಹಾಗೂ ಸಿಬ್ಬಂದಿಗಳಾಗಿ ಸ್ಪರ್ಧಿಗಳು ವಿಂಗಡಣೆಗೊಂಡಿದ್ದಾರೆ.
ಚೈತ್ರಾ – ಭವ್ಯ ಅವರ ತಂಡವನ್ನು ಅತಿಥಿ ಹಾಗೂ ಸಿಬ್ಬಂದಿಗಳ ತಂಡವಾಗಿ ವಿಂಗಡಣೆ ಮಾಡಲಾಗಿದೆ. ಮೊದಲ ದಿನ ಅತಿಥಿಗಳಾಗಿ ಚೈತ್ರಾ ಅವರ ತಂಡ ರೆಸಾರ್ಟ್ ಸಿಬ್ಬಂದಿಗಳ ಬಳಿ ತಮಗೆ ಏನು ಬೇಕೋ ಅದನ್ನೆಲ್ಲವನ್ನು ಮಾಡಿಸಿಕೊಂಡು ಸಿಬ್ಬಂದಿಗಳ ತಂಡದ ಪ್ರಾಣ ತಿಂದಿದ್ದಾರೆ.
ಮಧ್ಯರಾತ್ರಿ ಚೈತ್ರಾ ಅವರ ನೇತೃತ್ವದ ಅತಿಥಿಗಳ ತಂಡ ರೆಸಾರ್ಟ್ ಸಿಬ್ಬಂದಿಗಳ ಬಳಿ ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಸಿಬ್ಬಂದಿಗಳು ಸಮಾಧಾನದಿಂದಲೇ ರಿಯಾಕ್ಟ್ ಮಾಡಿದ್ದಾರೆ.
ಮಧ್ಯರಾತ್ರಿ ಬಂದು ಏನೇ ಕೇಳಿದ್ರು ಮಾಡಿಕೊಡಬೇಕು. ನಮಗೆ ಲೈಟ್ಸ್ ಆಫ್ ಆದ್ಮೇಲೂ ಸರ್ವೀಸ್ ಕೊಡಬೇಕು. ಕಪ್ಸ್ ಎಲ್ಲಾ ಕ್ಲೀನ್ ಮಾಡಬೇಕು. ನಮಗೆ ಮ್ಯೂಸಿಕಲ್ ನೈಟ್ ಬೇಕು ಇವತ್ತುಎಂದು ಅತಿಥಿಗಳು ಬೇಡಿಕೆ ಇಟ್ಟಿದ್ದಾರೆ.
ಸೋ ಸ್ಸಾರಿ ಬಿಗ್ ಬಾಸ್ ನಿಮಗೆ ಈ ಟಾಸ್ಕ್ ಕೊಟ್ಟಿದ್ದಕ್ಕೆ ಎಂದು ಐಶ್ವರ್ಯಾ ಅವರು ಹೇಳಿದ್ದಾರೆ ಇದಕ್ಕೆ ರಜತ್ ಅವರು ನಮ್ಗೂ ಬರುತ್ತದೆ ಅಲ್ವಾ ಟಾಸ್ಕ್ ಹಣ್ಣುಗಾಯಿ – ನೀರುಗಾಯಿ ಮಾಡಿಲ್ಲ ಅಂದ್ರೆ ನನ್ನ ಹೆಸರು ಬುಜ್ಜಿ ಅಲ್ಲ ಎಂದು ರಜತ್ ವಾರ್ನ್ ಮಾಡಿದ್ದಾರೆ.
ಇದಾದ ನಂತರ ಅತಿಥಿಗಳು ಸಿಬ್ಬಂದಿಗಳು, ಸಿಬ್ಬಂದಿಗಳು ಅತಿಥಿಗಳಾಗಿ ಬದಲಾಗುವ ಟಾಸ್ಕ್ ಬಂದಿದೆ. ಈ ವೇಳೆ ಭವ್ಯ ಅವರ ತಂಡ ಅತಿಥಿಗಳಾಗಿ ಬದಲಾಗಿದೆ.
ಶಿಳ್ಳೆ ಹೊಡೆಯುತ್ತಲೇ ರಜತ್ ಅವರು ಟಾಸ್ಕ್ ಆರಂಭಿಸಿದ್ದಾರೆ. ಮನೆಯಲ್ಲಿನ ದಿಂಬು, ಸೋಫಾ , ಸೂಟ್ ಕೇಸ್ ಎಲ್ಲವನ್ನೂ ಆಚೀಚೆ ಮಾಡಿ ಅತಿಥಿಯಾಗಿ ತಮ್ಮ ಟಾಸ್ಕ್ ನ್ನು ರಜತ್ ಆಡಿದ್ದಾರೆ. ರಜತ್ ಅವರು ಬೇಕಾಬಿಟ್ಟಿಯಾಗಿ ತಮಗೆ ಹೇಗೋ ಬೇಕೋ ಹಾಗೆ ವರ್ತಿಸಿದ್ದಾರೆ.
ಮೋಕ್ಷಿತಾ ಅವರ ತೊಡೆ ಮೇಲೆ ಕೂತಿದ್ದಾರೆ. ಇದಕ್ಕೆ ಮೋಕ್ಷಿತಾ ಅವರು ಗರಂ ಆಗಿ ಯಾಕೆ ತೊಡೆ ಮೇಲೆ ಕೂತಿದ್ದೀರಿ ಎಂದಿದ್ದಾರೆ. ಇದಕ್ಕೆ ರಜತ್ ಸಖತ್ ಆಗಿದ್ದೀಯಾ ಎಂದು ವ್ಯಂಗ್ಯವಾಗಿ ಹೇಳಿದ್ದು, ಚೈತ್ರಾ ಅವರು ರೆಸಾರ್ಟ್ ಸಿಬ್ಬಂದಿಯಾಗಿ ರಜತ್ ಅವರನ್ನು ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ.
ಇನ್ನೊಂದು ಕಡೆ ಧನರಾಜ್ ಅವರು ಬೆಡ್ ಶೀಟ್ ಎಲ್ಲವನ್ನು ಎಸೆದಿದ್ದಾರೆ. ಇನ್ಮೇಲೆ ನೀನ್ ಜೀವನದಲ್ಲಿ ಪಾಸಿಟಿವ್ ಇರಬಾರದು ಓನ್ಲಿ ನೆಗೆಟಿವ್ ಬಾಯಿಮುಚ್ಚು ಎಂದು ರಜತ್ ಗೌತಮಿಗೆ ಹೇಳಿದ್ದಾರೆ. ವಾಶ್ ರೂಮ್‌ನಲ್ಲಿ ಟಿಶ್ಯು ಪೇಪರ್‌ಗಳನ್ನು ಹರಿದು ಬೀಸಾಕಿದ್ದಾರೆ. ಇದನ್ನು ಕ್ಲೀನ್ ಮಾಡಿದ್ದಷ್ಟು ಅತಿಥಿಗಳು ಮತ್ತಷ್ಟು ಗಲೀಜು ಮಾಡಿ ಕಸ ಹಾಕಿದ್ದಾರೆ.