ಬೆಂಗಳೂರು: ಬಿಗ್ ಬಾಸ್ (Bigg Boss Kannada-11) ಮನೆಯಲ್ಲಿ ರೆಸಾರ್ಟ್ ಟಾಸ್ಕ್ ಮುಗಿದ ಬಳಿಕ ವಾರದ ನಾಮಿನೇಷನ್ ಪ್ರಕ್ರಿಯೆ ನಡೆದಿದೆ.
ಈ ವಾರ ಬಿಗ್ ಬಾಸ್ ಮನೆ ರೆಸಾರ್ಟ್ ಆಗಿ ಬದಲಾಗಿದೆ. ಚೈತ್ರ ಹಾಗೂ ಭವ್ಯ ಅವರ ತಂಡ ಅತಿಥಿ – ಸಿಬ್ಬಂದಿಗಳಾಗಿ ಟಾಸ್ಕ್ ಆಡಿದ್ದಾರೆ. ಮೊದಲ ದಿನ ಚೈತ್ರಾ ಅವರ ತಂಡ ಅತಿಥಿಗಳಾಗಿದ್ದು, ಎರಡನೇ ದಿನ ಭವ್ಯ ಅವರ ತಂಡ ಅತಿಥಿಗಳಾಗಿ ಸಿಬ್ಬಂದಿಗಳಿಂದ ತಮಗೆ ಬೇಕಾದ ಸೌಲಭ್ಯ ಹಾಗೂ ಸೇವೆಯನ್ನು ಪಡೆದಿದ್ದಾರೆ.
ಈ ನಡುವೆ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಸ್ಪರ್ಧಿಗಳು ತಾವು ನಾಮಿನೇಟ್ ಮಾಡುವ ಸ್ಪರ್ಧಿಗಳ ಹೆಸರು ಹೇಳಿ ಅವರ ತಲೆಗೆ ಬಾಟಲಿಯಿಂದ ಹೊಡೆಯಬೇಕು. ಈ ಪ್ರಕ್ರಿಯೆಯಲ್ಲಿ ಭವ್ಯ ಅವರು ಐಶ್ವರ್ಯಾ ಅವರನ್ನು ನಾಮಿನೇಟ್ ಮಾಡಿದ್ದು, ಹನುಮಂತು ಅವರು ಚೈತ್ರಾ ಅವರನ್ನು ನಾಮಿನೇಟ್ ಮಾಡಿದ್ದಾರೆ. ಗೌತಮಿ ಅವರು ತ್ರಿವಿಕ್ರಮ್ ಅವರನ್ನು ನಾಮಿನೇಟ್ ಮಾಡಿದ್ದಾರೆ.
ಮೋಕ್ಷಿತಾ ಅವರು ಮಂಜು ಅವರ ತಲೆಗೆ ಬಾಟಲಿ ಹೊಡೆದು ನಾಮಿನೇಟ್ ಮಾಡಿದ್ದು, ನನಗೆ ಅಷ್ಟಾಗಿ ಕಾಣಿಸಿಲ್ಲ ಎಂದಿದ್ದಾರೆ. ಇದಕ್ಕೆ ಮಂಜು ಅವರು, ಹೇಗೆ ಕಾಣಿಸಿಕೊಳ್ಳಬೇಕು ಅಂಥ ನಾಳೆಯಿಂದ ಟ್ಯೂಷನ್‌ಗೆ ಬರ್ತಿನಿ ನಿಮ್ಮ ಹತ್ರ. ಕಾಣಿಸಿಕೊಳ್ಳುವುದರಗೋಸ್ಕರ ನಿಮಗೆ ಏನಾದರೂ ತಂದು ಕೊಡಬೇಕಾ ಎಂದಿದ್ದಾರೆ. ಈ ಮಾತಿಗೆ ಗರಂ ಆದ ಮೋಕ್ಷಿತಾ ಮನೆಗೆ ಯಾರಿಗಾದರೂ ಏನಾದರೂ ತಂದುಕೊಟ್ಟಾಗಲೇ ಕಾಣಿಸಿಕೊಳ್ಳುತ್ತೀರಿ ಅಂಥನಾ. ನೀವು ವಾಯ್ಸ್ ಏರಿಸಿದರೆ ನನಗೂ ವಾಯ್ಸ್ ರೈಸ್ ಮಾಡೋಕೆ ಬರುತ್ತದೆ. ನನ್ನಿಷ್ಟ ನನ್ನ ನಾಮಿನೇಷನ್ ಎಂದು ಬಾಟಲಿಯಲ್ಲಿ ಹೊಡೆದಿದ್ದಾರೆ. ಇದಕ್ಕೆ ಮಂಜು ಕ್ಷುಲಕ ಕಾರಣಗಳಿಗೆ ನಾಮಿನೇಷನ್ ನಾನು ಆಗಲ್ಲವೆಂದು ಹೇಳಿದ್ದಾರೆ.
ರಜತ್ ಅವರರು ಚೈತ್ರಾ ಅವರನ್ನು ನಾಮಿನೇಟ್ ಮಾಡಿದ್ದಾರೆ. ಬೇರೆ ಬೇರೆ ಟಾಸ್ಕ್ ಅಲ್ಲಿ ಕಾಣಿಸಿಲ್ಲ. ಸೀರೆ ಒಗೆಯುವುದರಲ್ಲೂ ಕಾಣಿಸಿಲ್ಲ ನಿನ್ನ ಟ್ಯಾಲೆಂಟ್ ಮತ್ತೆ ಯಾಕೆ ಬಿಗ್ ಬಾಸ್ ಮನೆಯಲ್ಲಿದ್ದೀಯಾ. ನಿನ್ನ ದಮ್ಮಯಾ ಅಮ್ಮ ಮನೆಗೆ ಹೋಗು ಅಂಥ ರಜತ್ ಚೈತ್ರಾಗೆ ಕೈ ಮುಗಿದಿದ್ದಾರೆ. ಇದಕ್ಕೆ ಚೈತ್ರಾ ಅವರು ಒಂದು ಕಿವಿಯಲ್ಲಿ ಕೇಳು ಮತ್ತೊಂದು ಕಿವಿಯಲ್ಲಿ ಬಿಡುವೆಂದು ಸಂಜ್ಞೆಯಲ್ಲೇ ಉತ್ತರಿಸಿದ್ದಾರೆ.
ಇನ್ನೊಂದು ಕಡೆ ಮಂಜು ಅವರು ತ್ರಿವಿಕ್ರಮ್ ಅವರನ್ನು ನಾಮಿನೇಟ್ ಮಾಡಿದ್ದಾರೆ. ಈ ನಡುವೆ ಇಬ್ಬರ ನಡುವೆ ಕ್ಯಾರೆಕ್ಟರ್ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ.