ಕಾಲೇಜು ಲೈಫ್ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಕಾಲೇಜು ಲೈಫ್ ಇಸ್ ಗೋಲ್ಡನ್ ಲೈಫ್ ಎಂಬ ಮಾತೇ ಇದೆ. ಕಾಲೇಜು ಮೆಟ್ಟಿಲು ಹತ್ತಿದ್ದ ಹಾಗೆ ಎಲ್ಲರಲ್ಲೂ ಒಂದು ರೀತಿಯ ವಿಶೇಷ ಭಾವನೆ. ಅಲ್ಲಿ ಸಿಗುವಂತಹ ಗೆಳೆಯ-ಗೆಳತಿಯರು, ಟೀಚರ್ಸ್ ಎಲ್ಲರೂ ತುಂಬಾ ವಿಶೇಷ. ಕಾಲೇಜಿಗೆ ಸೇರಿದಾಗ ಕ್ಲಾಸ್ ನಲ್ಲಿರುವುದಕ್ಕಿಂತ ಹೆಚ್ಚಾಗಿ ಎಲ್ಲರು ಕಾಲಕಳೆಯುವ ಜಾಗ ಎಂದರೆ ಕಾಲೇಜು ಕ್ಯಾಂಟೀನ್ ಅಥವಾ ಕಾಲೇಜು ಕ್ಯಾಂಪಸ್. ಕ್ಲಾಸ್ ರೂಮ್‌ಗಿಂತ ಇÇÉೇ ಹರಟೆ, ತಮಾಷೆ, ಕೋಪ, ಜಗಳಗಳನ್ನು ಕಾಣಬಹುದು.
ನಮ್ಮ ಕಾಲೇಜು ಲೈಫ್ನಲ್ಲಿ ನಾವು ಕೂಡ ಹೆಚ್ಚಾಗಿ ಕಾಲ ಕಳೆದದ್ದು ಕ್ಯಾಂಪಸ್‌ನಲ್ಲೇ. ಕ್ಯಾಂಪಸ್‌ನಲ್ಲಿ ನಿಂತುಕೊಂಡು ಜೂನಿಯರ್ಸ್ ಹಾಗೂ ಸೀನಿಯರ್ಸ್‌ಗಳನ್ನು ನೋಡಿ ತಮಾಷೆ ಮಾಡುತ್ತಿದ್ದೆವು. ನಮಗೆ ಕ್ಲಾಸ್ ಇಲ್ಲದಿದ್ದಾಗ ಪಕ್ಕದ ಕ್ಲಾಸ್‌ನಲ್ಲಿದ್ದ ನಮ್ಮ ಸ್ನೇಹಿತರಿಗೆ ತಮಾಷೆ ಮಾಡುತ್ತಾ ಅವರನ್ನು ಉರಿಸುತ್ತಿದ್ದೆವು. ಅದೇನೋ ಆಗ ಮನಸಿಗೆ ತುಂಬ ಖುಷಿ ಆಗುತ್ತಿತ್ತು. ಒಂದು ಐದು ನಿಮಿಷ ಟೀಚರ್ಸ್ ಕ್ಲಾಸ್‌ಗೆ ಬರುವುದು ತಡವಾದರೆ ಎಲ್ಲ ಕಾಲೇಜು ಕ್ಯಾಂಪಸ್‌ನಲ್ಲಿ ಹರಟೆ ಹೊಡಿಯುತ್ತಾ ಇದ್ದೆವು. ಟೀಚರ್ಸ್ ಯಾಕೆ ಇಲ್ಲಿ ನಿಂತಿದ್ದಿರಾ, ಕ್ಲಾಸ್‌ಗೆ ಹೋಗಿ ಎಂದು ಎಷ್ಟು ಬಾರಿ ಬೈದರೂ ಅಷ್ಟೇ ನಾಯಿ ಬಾಲ ಡೊಂಕೆ.
ಇನ್ನು ಎಕ್ಸಾಂ ಟೈಮ್‌ನಲ್ಲಿ ಓದುವುದು ಕೂಡ ಕಾಲೇಜು ಕ್ಯಾಂಪಸ್‌ನÇÉೆ. ಎಲ್ಲ ಸ್ನೇಹಿತರು ಒಟ್ಟಾಗಿ ಕುಳಿತುಕೊಂಡು ಹರಟೆ ಹೊಡಿಯುತ್ತಾ, ಆ ಪ್ರಶ್ನೆ ಬರಬಹುದು ಈ ಪ್ರಶ್ನೆ ಬರಬಹುದು ಎಂದು ಊಹಿಸುತ್ತಿದ್ದ ದಿನಗಳನ್ನು ನೆನಪಿಸಿಕೊಂಡರೆ ಈಗಲೂ ಖುಷಿಯಾಗುತ್ತದೆ. ಕ್ಯಾಂಪಸ್‌ನಲ್ಲಿ ನಿಂತು ನೋಡಿದಾಗ ತಂಪಾಗಿ ಬೀಸುವ ಗಾಳಿ, ಭೂಮಿಯನ್ನು ಸ್ಪರ್ಶ ಮಾಡುವ ಮಳೆಯ ಹನಿಗಳು, ಆ ಮಳೆಯ ಹನಿಗಳು ಭೂಮಿಯನ್ನು ಸ್ಪರ್ಶಿಸಿದಾಗ ಆ ಭೂಮಿಯಿಂದ ಬರುವ ಮಣ್ಣಿನ ಪರಿಮಳ ಯಾವುದನ್ನೂ ಸುಲಭವಾಗಿ ಮರೆಯಲು ಸಾಧ್ಯವೇ ಇಲ್ಲ.
ನಾವು ಮೊದಲ ದಿನ ಬಂದ ಆ ಕಾಲೇಜು ದಿನಗಳು ಇನ್ನೂ ಕಣ್ಣಿಗೆ ಕಟ್ಟಿದ ಹಾಗೆ ಇದೆ. ಅದೆಷ್ಟು ಬೇಗ ನಮ್ಮ ಮೊದಲ ಮತ್ತು ಎರಡನೇ ವರ್ಷ ಮುಗಿಯಿತೋ ಗೊತ್ತೇ ಆಗಲಿಲ್ಲ. ಇನ್ನು ಸ್ವಲ್ಪ ದಿನಗಳಲ್ಲೇ ತೃತೀಯ ವರ್ಷದೊಂದಿಗೆ ನಮ್ಮ ಕಾಲೇಜು ಲೈಫ್ ಮುಗಿದೇ ಹೋಗುತ್ತದೆ. ನಾವು ಓಡಾಡಿದ ಜಾಗ, ಅಲ್ಲಿ ಸಿಕ್ಕಂತಹ ಪ್ರೀತಿ, ಏನೇ ಆದರೂ ನಾವಿದ್ದೀವಿ ಅನ್ನೋ ಸ್ನೇಹಿತರು ಎಲ್ಲ ಇನ್ನು ಒಂದಿಷ್ಟು ದಿನದಲ್ಲಿ ದೂರ ಆಗುವಂತ ಸಂದರ್ಭ ನೆನೆಸಿಕೊಂಡರೆ ಬೇಜಾರಿನ ಸಂಗತಿ.
ಅಲ್ಲದೇ ನಮ್ಮ ಜೀವನದಲ್ಲಿ ಮರೆಯಲಾಗದಂತಹ ನೆನಪುಗಳನ್ನು ಕಾಲೇಜು ಲೈಫ್ ನೀಡುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಅಷ್ಟೇ ಹೈಸ್ಕೂಲ್ ಮುಗಿದು ಪಿಯುಸಿ ಮುಗಿದು ಮುಂದೆ ಏನು ಎಂಬ ಪ್ರಶ್ನೆ ಇರುತ್ತದ್ದೆ. ಅನಂತರ ಡಿಗ್ರಿ ಮುಗಿಯೋ ಹೊತ್ತಿಗೆ ಎಲ್ಲರಲ್ಲೂ ಒಂದು ಛಲ ಹುಟ್ಟುತ್ತದೆ. ಮುಂದೆ ಅದೇ ಛಲ ನಾವು ಏನಾದರೂ ಸಾಧನೆ ಮಾಡಲು ಸ್ಫೂರ್ತಿ ಆಗುತ್ತದೆ. ನನಗು ನನ್ನ ಜೀವನದಲ್ಲಿ ಇಷ್ಟರ ವರೆಗೆ ಅದೆಷ್ಟೋ ಸ್ನೇಹಿತರೊಂದಿಗೆ ಸ್ನೇಹ ಇತ್ತು. ಆದರೆ ನಮ್ಮ ಓದು ಮುಗಿದ ಮೇಲೆ ಆ ಸ್ನೇಹ ಎಲ್ಲಿ ಕಣ್ಮರೆ ಆಗುತ್ತಿತ್ತು ಗೊತ್ತೇ ಅಗುತ್ತಿರಲಿಲ್ಲ. ಮತ್ತೆ ಮುಂದಿನ ವಿದ್ಯಾಭ್ಯಾಸದಲ್ಲಿ ಮತ್ತಷ್ಟು ಸ್ನೇಹಿತರೊಂದಿಗೆ ಸ್ನೇಹ, ಮತ್ತೆ ಅದು ಅಲ್ಲೇ ಉಳಿದು ಬಿಡುತ್ತಿತ್ತು. ಆದರೆ ನನಗೆ ನನ್ನ ಜೀವನದಲ್ಲಿ ಮರೆಯಲಾಗದ ಸ್ನೇಹಿತರು ಸಿಕ್ಕಿದ್ದು ನನ್ನ ಕಾಲೇಜು ದಿನಗಳÇÉೇ. ಆ ಸ್ನೇಹಿತನ ಸ್ನೇಹ, ಅಕ್ಕರೆ, ಪ್ರೀತಿ ಎಲ್ಲವೂ ನಿಷ್ಕಲ್ಮಶ.
ಕಾಲೇಜು ಎಲ್ಲರಿಗೂ ನಮ್ಮ ನಮ್ಮ ಜೀವನಕ್ಕೆ ದಾರಿ ಮಾಡಿಕೊಡುತ್ತದೆ. ನಮ್ಮ ಕಾಲೇಜು, ಕಾಲೇಜು
ಕ್ಯಾಂಪಸ್ ನೊಂದಿಗಿನ ಅನುಬಂಧ ಎಂದೆಂದಿಗೂ
ನಮ್ಮೊಂದಿಗೆ ಜೀವಂತ…
-ಚೈತನ್ಯ
ಎಂ.ಪಿ.ಎಂ. ಕಾಲೇಜು ಕಾರ್ಕಳ