Advertisement

ಯುವಕರೇ, ನಿಮ್ಮೂರಲ್ಲೇ ಉದ್ಯಮ ತೆರೆಯಿರಿ, ವಲಸೆ ಬೇಡ

02:39 PM Jan 14, 2017 | Team Udayavani |

ದೊಡ್ಡಬಳ್ಳಾಪುರ: ಗ್ರಾಮೀಣ ಯುವಕರು ನವೀನ ಉದ್ಯಮಗಳನ್ನು ಸ್ವಂತ ಊರುಗಳಲ್ಲಿ ಸಂಘಟನೆಗಳ ಮೂಲಕ ಪ್ರಾರಂಭಿಸಿ, ಪಟ್ಟಣಗಳ ಕಡೆ ವಲಸೆ ಹೋಗದೆ ಸ್ವಾವಲಂಬನೆ ಸಾಧಿಸುವತ್ತ ಹೊಸ ಹೆಜ್ಜೆ ಇಡಬೇಕೆಂದು ಕೃಷಿ  ವಿಶ್ವ ವಿದ್ಯಾನಿಲಯದ ಮಾಜಿ ಕುಲಪತಿ ಕೆ.ನಾರಾಯಣಗೌಡ ಸಲಹೆ ನೀಡಿದರು. 

Advertisement

ತಾಲೂಕಿನ  ಹಾಡೋನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ನವೀನ ಉದ್ಯಮಗಳ ಮೂಲಕ ಗ್ರಾಮೀಣ ಯುವಜನತೆಗೆ ಸ್ವಉದ್ಯೋಗ ಹಾಗೂ ಜೀವನೋಪಾಯ ಭದ್ರತೆ ಕುರಿತ  ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಯುವಕರು ಸರ್ಕಾರಿ ಕೆಲಸಗಳಿಗೆ ಕಾಯುತ್ತಾ ಸಮಯ ಕಳೆಯದೆ ಸ್ವಉದ್ಯೋಗ ಕಂಡುಕೊಳ್ಳುವಲ್ಲಿ ಪ್ರಯತ್ನಿಸಬೇಕು.

ಕೇಂದ್ರ ಸರ್ಕಾರದ ಈ ಯೋಜನೆಯು ಒಂದು ಒಳ್ಳೆಯ ಕಾರ್ಯಕ್ರಮವಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು  ಕರೆ ನೀಡಿದರು. ಕೃಷಿ ತಂತ್ರಜ್ಞಾನ ಅಳವಡಿಕೆ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ಸಾಯಿರಾಮ್‌ ಮಾತನಾಡಿ, ಗ್ರಾಮೀಣ ಯುವಕರು ಹೊಸ ತಂತ್ರಜ್ಞಾನ  ಅಳವಡಿಸಿಕೊಂಡು ಯೋಜನೆಯ ಉಪಯೋಗ ಪಡೆದು ಸ್ವಂತ ಉದ್ಯೋಗದಿಂದ ತಮ್ಮ ಆದಾಯದ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. 

ಕಾರ್ಯಾಗಾರವನ್ನು ಕೃಷಿ ವಿಜ್ಞಾನ ಕೇಂದ್ರ, ಹಾಡೋನಹಳ್ಳಿಯಲ್ಲಿ ನಡೆಯುತ್ತಿರುವ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಅನ್ನಪೂರ್ಣೇಶ್ವರಿ  ರಾಗಿ ಬೆಳೆಗಾರರ ಸಂಸ್ಕರಣಾ ಸಂಘ, ಪೆರಮಗೊಂಡನಹಳ್ಳಿ ಯುವ ರೈತರ ಸಂಘದ ಅಧ್ಯಕ್ಷರಿಗೆ ನೋಂದಣಿ ಪ್ರಮಾಣ ಪತ್ರ ವಿತರಿಸಲಾಯಿತು.

ಕೃಷಿ ವಿಶ್ವ ವಿದ್ಯಾನಿಲಯ  ವಿಸ್ತರಣಾ ನಿರ್ದೇಶಕ ಡಾ. ಕೆ.ಜಗದೀಶ್ವರ, ಯೋಜನೆಯ ಉದ್ದೇಶಗಳು ಹಾಗೂ ಇದರ ಅನುಷ್ಠಾನ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ  ಮುಖ್ಯಸ್ಥ ಡಾ. ಕೆ.ಎನ್‌. ಶ್ರೀನಿವಾಸಪ್ಪ ಮತ್ತು ಪ್ರಾಧ್ಯಾಪಕರು, ಡಾ. ಜಿ.ಎಸ್‌ .ನಾಗರಾಜು, ಕೃಷಿ ವಿಜ್ಞಾನ ಕೇಂದ್ರದ ಎಲ್ಲಾ ವಿಜ್ಞಾನಿಗಳು ಹಾಗೂ ಸಿಬ್ಬಂದಿ ವರ್ಗದವರು  ,ಕಾಚಹಳ್ಳಿ, ಲಕ್ಷ್ಮೀದೇವಿಪುರ, ಗಂಗಸಂದ್ರ, ಬಚ್ಚಹಳ್ಳಿ ಮತ್ತು ಪೆರಮಗೊಂಡನಹಳ್ಳಿಗಳ ಯುವ ರೈತರು ಹಾಗೂ ರೈತ ಮಹಿಳೆಯರು ಹಾಜರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next