ಹೊಸದಿಲ್ಲಿ: ತನ್ನ ಹೆಂಡತಿಗೆ ಟಿವಿ ನೋಡಲು, ದೇವಸ್ಥಾನಕ್ಕೆ ಹೋಗಲು, ನೆರೆಹೊರೆಯವರನ್ನು ಭೇಟಿಯಾಗಲು ಅವಕಾಶ ನೀಡಲಿಲ್ಲ, ಕಾಪೆìಟ್ ಮೇಲೆ ಮಲಗಿಸಲಾಗುತ್ತಿತ್ತು ಎಂಬ ಆರೋಪದ ಮೇಲೆ ಪತಿ ಮತ್ತು ಆತನ ಕುಟುಂಬದವರಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠ ರದ್ದುಗೊಳಿಸಿದೆ. ಟಿವಿ ವೀಕ್ಷಣೆಗೆ ಅವಕಾಶ ಕೊಡದ್ದನ್ನು ಕ್ರೌರ್ಯ ಎಂದು ಪರಿಗಣಿಸಲಾಗದು ಎಂದೂ ಹೇಳಿದೆ. ಗೃಹಿಣಿ ಆತ್ಮಹತ್ಯೆ ಪ್ರಕರಣ ಸಂಬಂಧ ನೀಡಲಾಗಿದ್ದ ತೀರ್ಪಿನ ವಿರುದ್ಧದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾ| ಅಭಯ್ ವಾಘಾÌಸೆ ಅವರ ಏಕಸದಸ್ಯ ಪೀಠವು, ಆರೋಪಗಳು ಆರೋಪಿಗಳ ಕೌಟುಂಬಿಕ ವ್ಯವಹಾರಗಳಿಗೆ ಸಂಬಂಧಿಸಿರುವುದರಿಂದ ದೈಹಿಕ, ಮಾನಸಿಕ ಕ್ರೌರ್ಯವನ್ನು ಒಳಗೊಂಡಿರುವುದಿಲ್ಲ ಎಂದಿದೆ.