Advertisement

Rahul Gandhi: ನಾನು ಉದ್ಯಮ ವಿರೋಧಿಯಲ್ಲ, ಏಕಸ್ವಾಮ್ಯದ ವಿರೋಧಿ

07:34 PM Nov 07, 2024 | Team Udayavani |

ನವದೆಹಲಿ: ಬಿಜೆಪಿ ಬಿಂಬಿಸುತ್ತಿರುವಂತೆ ನಾನು ಉದ್ಯಮ ವಿರೋಧಿಯಲ್ಲ. ನಾನು ಏಕಸ್ವಾಮ್ಯ ಮತ್ತು ಕೆಲವೇ ಕೆಲವರ ಒಡೆತನದ ವಿರೋಧಿ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

Advertisement

ಈ ಕುರಿತು ಟ್ವೀಟ್‌ ಮಾಡಿರುವ ಅವರು, ನಾನು ಅಲ್ಪವೂ ಉದ್ಯಮ ವಿರೋಧಿಯಲ್ಲ. ಆದರೆ, ಏಕಸ್ವಾಮ್ಯ, ಬೆರಳೆಣಿಕೆಯ ಮಂದಿ  ವ್ಯವಹಾರದ ಮೇಲೆ ಹಿಡಿತ ಸಾಧಿಸುವುದರ ವಿರೋಧಿ. ನಾನು ನನ್ನ ಉದ್ಯೋಗವನ್ನು ಆರಂಭಿಸಿದ್ದೇ ಮ್ಯಾನೇಜ್ಮೆಂಟ್ ಕನ್ಸಲ್ಟಂಟ್‌ ಆಗಿ. ನಾನು ಉದ್ಯೋಗ, ಉದ್ಯಮ, ಅನ್ವೇಷಣೆ, ಸ್ಮರ್ಧಾತ್ಮಕತೆ ಪರವಾಗಿದ್ದು ಎಲ್ಲ ಉದ್ಯಮಗಳಿಗೆ ನಮ್ಮ ಆರ್ಥಿಕತೆಯಲ್ಲಿ ಮುಕ್ತ, ನ್ಯಾಯಯುತ ಜಾಗ ಸಿಗಬೇಕು ಎಂದು ಬಯಸುತ್ತೇನೆ ಎಂದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next