ದಾವಣಗೆರೆ: ಮದುವೆಯಾಗುವ ಮತ್ತು ಉದ್ಯೋಗ ಕೊಡಿಸುವುದಾಗಿ ದಾವಣಗೆರೆ ಸೇರಿದಂತೆ ಬೆಂಗಳೂರು, ಮೈಸೂರು, ಹರಿಹರ, ಮಂಡ್ಯ, ಚಿಕ್ಕಮಗಳೂರು ಸೇರಿದಂತೆ
8 ಕಡೆಯಲ್ಲಿ ಯುವತಿಯರಿಗೆ 50 ಲಕ್ಷ ರೂ.ಗೂ ಹೆಚ್ಚು ಹಣಕ್ಕೆ ವಂಚಿಸಿದ್ದವನನ್ನು ದಾವಣಗೆರೆ ಸಿಇಎನ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಡ್ಯ ತಾಲೂಕಿನ ಮಾಚಹಳ್ಳಿ ಗ್ರಾಮದ ಮಾಧು ಅಲಿಯಾಸ್ ಮಧು(
31) ಆರೋಪಿ ಒಟ್ಟು 8 ಕಡೆಯಲ್ಲಿನ ಯುವತಿಯರಿಗೆ ಮದುವೆ, ನೌಕರಿ ಕೊಡಿಸುವುದಾಗಿ 62.83 ಲಕ್ಷ ಹಣ ಪೀಕಿ, ವಂಚನೆ ಮಾಡುತ್ತಿರುವುದು ಪತ್ತೆಯಾಗಿದೆ.
ದಾವಣಗೆರೆಯ ಯುವತಿ ಕಳೆದ ಮೇ.5 ರಂದು ಮೊಬೈಲ್ ನಲ್ಲಿ ಕನ್ನಡ ಮ್ಯಾಟ್ರಿಮೋನಿಯಲ್ ಆಪ್ ನೋಡುತ್ತಿ ರುವಾಗ ಪರಿಚಯವಾಗಿದ್ದ ಮಧು ಕೆಲ ದಿನಗಳ ನಂತರ ವಾಟ್ಸಪ್ ಮೂಲಕ ನಿಮ್ಮ ಪ್ರೊಫೈಲ್ಇಷ್ಟವಾಗಿದ್ದು ನಾನು ನಿಮ್ಮನ್ನು ಮದುವೆ ಆಗಲು ಒಪ್ಪಿರುತ್ತೇನೆ.. ಎಂದು ಮೆಸೇಜ್ ಮಾಡಿದ್ದನು.
ಪ್ರತಿ ದಿನ ವಿವಿಧ ಮೊಬೈಲ್ ನಂಬರ್ ಗಳಿಂದ ವಾಟ್ಸಪ್ ಮಾಡುತ್ತಾ ಹಾಗೂ ಕಾಲ್ ಮಾಡಿ ಮಾತನಾಡುತ್ತಿದ್ದನು. ಯುವತಿ ಮಧು ಬಗ್ಗೆ ಕೇಳಿದಾಗ ಮೈಸೂರಿನಲ್ಲಿ ರೈಲ್ವೆ ಇಲಾಖೆಯ ವರ್ಕ್ ಇಂಜಿನಿಯರ್ ಆಗಿದ್ದು, ನಮ್ಮದೇ ಇಲಾಖೆಯಲ್ಲಿ ಖಾಲಿಯಿರುವ ಕೆಲಸ ಕೊಡಿಸುವುದಾಗಿ ನಂಬಿಸಿ ಆನ್ಲೈನ್ ಮೂಲಕ ಹಂತ ಹಂತವಾಗಿ ಒಟ್ಟು 21.3 ಹಣ ಪಡೆದು ಹಾಕಿಸಿಕೊಂಡು ವಂಚನೆ ಮಾಡಿದ್ದನು. ಈ ಬಗ್ಗೆ ಯುವತಿ ದಾವಣಗೆರೆ ಸಿಇಎನ್ ಠಾಣೆ ಯಲ್ಲಿ ದೂರು ಸಲ್ಲಿಸಿದ್ದರು.
ಆರೋಪಿ ಪತ್ತೆಗಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ. ಸಂತೋಷ್, ಜಿ ಮಂಜುನಾಥ್, ಸೆನ್ ಉಪಾಧಿಕ್ಷಕಿ ಪದ್ಮಶ್ರೀ ಗುಂಜೀಕರ್ ಮಾರ್ಗದರ್ಶನ, ವೃತ್ತ ನಿರೀಕ್ಷಕ ಲಕ್ಷ್ಮಣ್ ನಾಯ್ಕ್ ನೇತೃತ್ವದಲ್ಲಿನ ಸಿಬ್ಬಂದಿ ಗಳ ತಂಡ ಆರೋಪಿಯನ್ನ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಯುವತಿಗೆ 4.1 ಲಕ್ಷ ರೂಪಾಯಿ ವಾಪಸ್ ಕೊಡಿಸಲಾಗಿದೆ.
ವಿಚಾರಣೆಯಲ್ಲಿ ಆರೋಪಿ ಮಧು ಹೆಣ್ಣು ಮಕ್ಕಳಿಗೆ ನಂಬಿಸಿ ಮೋಸ ಮಾಡಿದ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ. ಚಿಕ್ಕ ಮಗಳೂರು ಪೊಲೀಸ್ ಠಾಣೆಯಲ್ಲಿ 3.80 ಲಕ್ಷ, ಮಂಡ್ಯ ಸಿಇಎನ್ ಪೊಲೀಸ್ ಠಾಣೆಯಲ್ಲಿ 26 ಲಕ್ಷ, ದಾವಣಗೆರೆ ಸಿಇಎನ್ ಪೊಲೀಸ್ ಠಾಣೆ ಯಲ್ಲಿ 21.3 ಲಕ್ಷ ರೂಪಾಯಿ ವಂಚನೆ ಮಾಡಿದ್ದಾನೆ.
ಅಲ್ಲದೆ ನೌಕರಿ ಕೊಡಿಸುವುದಾಗಿ ನಂಬಿಸಿ ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯಲ್ಲಿ1.5 ಲಕ್ಷ, ಹರಿಹರ ನಗರ ಠಾಣೆಯಲ್ಲಿ 1.30 ಲಕ್ಷ, ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ 2. 80 ಲಕ್ಷ, ಮೈಸೂರು ಸಿಇಎನ್ ಠಾಣೆಯಲ್ಲಿ90 ಸಾವಿರ, ಕೆ ಆರ್ ನಗರ ಪೊಲೀಸ್ ಠಾಣೆಯಲ್ಲಿ 5. 50 ಲಕ್ಷ ಸೇರಿದಂತೆ ವಿವಿಧೆಡೆ 8 ಪ್ರಕರಣಗಳಲ್ಲಿ ಒಟ್ಟು 62. 83 ಲಕ್ಷ ರೂಪಾಯಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.
ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾದ ಅಧಿಕಾರಿ, ಸಿಬ್ಬಂದಿಗಳ ತಂಡಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಪ್ರಶಂಸಿದ್ದಾರೆ.