Advertisement
ಜಾಂಡಿಸ್ ಅಥವಾ ಅರಶಿನ ಕಾಮಾಲೆಯಲ್ಲಿ ಕಣ್ಣು ಮತ್ತು ಚರ್ಮ ಹಳದಿಯಾಗುತ್ತವೆ. ಬಹುತೇಕ ಬಾರಿ ಮೂತ್ರವೂ ಹಳದಿಯಾಗುತ್ತದೆ, ಆದರೆ ಯಾವಾಗಲೂ ಅಲ್ಲ. ಕೆಲವು ಪ್ರಕರಣಗಳಲ್ಲಿ ಕಣ್ಣುಗಳು ಹಳದಿ ಬಣ್ಣ ತಾಳುತ್ತವೆ, ಆದರೆ ಮೂತ್ರದ ಬಣ್ಣ ಸಹಜವಾಗಿರುತ್ತದೆ. ಇದರ ಬಗ್ಗೆ ಮುಂದೆ ವಿವರಿಸುತ್ತೇನೆ.ಈಗ ಕಣ್ಣುಗಳು ಏಕೆ ಹಳದಿಯಾಗುತ್ತವೆ ಎಂಬುದನ್ನು ನೋಡೋಣ. ಇದಕ್ಕೆ ಕಾರಣ ರಕ್ತದಲ್ಲಿ ಬಿಲಿರುಬಿನ್ ಪ್ರಮಾಣ ಹೆಚ್ಚಳವಾಗುವುದು. ಸಾಮಾನ್ಯವಾಗಿ ಇದು ರಕ್ತದಲ್ಲಿ ಡೆಸಿಲೀಟರ್‌ಗೆ ಒಂದು ಮಿ. ಗ್ರಾಂಗಿಂತ ಕಡಿಮೆ ಇರುತ್ತದೆ, ಇದು 2 ಮಿಲಿಗ್ರಾಂಗಿಂತ ಹೆಚ್ಚಾದರೆ ಕಣ್ಣುಗಳು ಹಳದಿಯಾಗುವುದನ್ನು ಕಾಣಬಹುದು.
ಬರುವುದೆಲ್ಲಿಂದ?
ನಮ್ಮ ರಕ್ತದಲ್ಲಿ ಇರುವ ಕೆಂಪು ರಕ್ತಕಣಗಳ ಜೀವಿತಾವಧಿ ಸುಮಾರು 120 ದಿನಗಳು. ಈ ಕೆಂಪು ರಕ್ತಕಣಗಳು ಹಳೆಯದಾದಂತೆ ಅವುಗಳು ಪ್ಲೀಹ (ಸ್ಪ್ಲೀನ್) ನಲ್ಲಿ ನಾಶ ಹೊಂದುತ್ತವೆ. ರಕ್ತದಲ್ಲಿರುವ ಹಿಮೊಗ್ಲೊಬಿನ್ ವಿಭಜನೆಯಾಗಿ ಹೆಮೆ ಎಂಬ ಪ್ರೊಟೀನ್ ಉತ್ಪಾದನೆಯಾಗುತ್ತದೆ. ಈ ಹೆಮೆಗಳು ಬಿಲಿರುಬಿನ್ ಆಗಿ ವಿಭಜನೆಯಾಗುತ್ತವೆ. ಸಾಮಾನ್ಯವಾಗಿ ಈ ಬಿಲಿರುಬಿನ್‌ಗಳನ್ನು ಪಿತ್ತಕೋಶವು ಸ್ವೀಕರಿಸಿ ಅದು ಪಿತ್ತರಸದಲ್ಲಿ ಹೊರಹರಿಯುವಂತೆ ಪರಿವರ್ತಿಸುತ್ತದೆ. ಈ ಪಿತ್ತರಸವು ಬಳಿಕ ಕರುಳನ್ನು ಪ್ರವೇಶಿಸಿದಾಗ ಬಹುತೇಕ ಬಿಲಿರುಬಿನ್‌ಗಳು ಸ್ಟೆರ್ಕೊಬ್ಲಿನ್ ಆಗಿ ಪರಿವರ್ತನೆಗೊಂಡು ಮಲದ ಮೂಲಕ ದೇಹದಿಂದ ಹೊರಹಾಕಲ್ಪಡುತ್ತವೆ. – ಮುಂದಿನ ವಾರಕ್ಕೆ
Related Articles
ವಿಭಾಗ ಮುಖ್ಯಸ್ಥರು,
ಗ್ಯಾಸ್ಟ್ರೊಎಂಟರಾಲಜಿ ವಿಭಾಗ
ಕೆಎಂಸಿ ಆಸ್ಪತ್ರೆ, ಮಂಗಳೂರು.
Advertisement