Advertisement
ಈ ರೀತಿಯ ಮ್ಯೂಸಿಯಂ ಸ್ಥಾಪನೆ ಜಗತ್ತಿನಲ್ಲೇ ಇದೇ ಮೊದಲಾದ್ದರಿಂದ, ಅಲ್ಲಿ ಏನೇನಿರಲಿದೆ ಎನ್ನುವ ಕುತೂ ಹಲ ಎಲ್ಲರಿಗೂ ಇತ್ತು. ಈ ಮ್ಯೂಸಿಯಂ ಸ್ಥಾಪಿಸಿರುವ ಹ್ಯಾಪಿನೆಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಪ್ರಕಾರ, ಇದರಲ್ಲಿ 8 ಕೊಠಡಿಗಳು ಇರಲಿದ್ದು, ಭೇಟಿ ನೀಡುವವರ ಮಾನಸಿಕ ಸ್ವಾಸ್ಥ್ಯವನ್ನು ಉತ್ತಮಗೊಳಿಸುವಂಥ ಧ್ವನಿಮುದ್ರಿಕೆಗಳು, ವೀಡಿಯೋಗಳು ಪ್ಲೇ ಆಗುತ್ತಿರುತ್ತವೆ. ಅಲ್ಲದೇ, ಜನರ ಬುದ್ಧಿಮತ್ತೆಗೆ ಸವಾಲು ಒಡ್ಡುವಂಥ ಆಟಗಳೂ ಈ ಕೊಠಡಿ ಗಳಲ್ಲಿ ಇವೆಯಂತೆ. ಒಂದು ಕೊಠಡಿಯಲ್ಲಿ ಮೊನಾಲಿಸಾಳ ಚಿತ್ರವಿದ್ದು, ಆಕೆಯ ಮುಖದ ಯಾವ ಭಾಗದಲ್ಲಿ ಮಂದ ಹಾಸವಿದೆ ಎನ್ನುವುದನ್ನು ಕನ್ನಡಿ ಮೂಲಕ ಪತ್ತೆಹಚ್ಚಬೇಕು. ಮತ್ತೂಂದು ಕೊಠಡಿಯನ್ನು ಸಂತೋಷದ ಇತಿಹಾಸ, ವಿಜ್ಞಾನವನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ ಯಂತೆ. ಇದರೊಟ್ಟಿಗೆ ಹಲವು ರಸಪ್ರಶ್ನೆಗಳನ್ನು ಕೇಳುವ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಸಹಿತ ತರಹೇವಾರಿ ಪರಿಕರ ಗಳಿವೆ ಎನ್ನುತ್ತಾರೆ ಮ್ಯೂಸಿಯಂನ ಸ್ಥಾಪಕರು. Advertisement
ಡೆನ್ಮಾರ್ಕ್ ನಲ್ಲಿದೆ ಜಗತ್ತಿನ ಮೊದಲ “ಹ್ಯಾಪಿನೆಸ್ ಮ್ಯೂಸಿಯಂ’ :ಇಲ್ಲಿ ಏನೇನಿದೆ ಗೊತ್ತಾ?
11:45 AM Sep 14, 2020 | sudhir |
Advertisement
Udayavani is now on Telegram. Click here to join our channel and stay updated with the latest news.