Advertisement

Reliance Digital ಹ್ಯಾಪಿನೆಸ್‌ ಪ್ರಾಜೆಕ್ಟ್: ಪರ್ಕಳದ ಅಜ್ಜ-ಅಜ್ಜಿ ಮೆಸ್‌ಗೆ ಕೊಡುಗೆ

12:10 AM Dec 31, 2024 | Team Udayavani |

ಮಣಿಪಾಲ: ಉಡುಪಿ ಜಿಲ್ಲೆಯ ಮಣಿಪಾಲ ಸಮೀಪದ ಪರ್ಕಳದಲ್ಲಿ ಗೋಪಾಲಕೃಷ್ಣ ಪ್ರಭು ಹಾಗೂ ವಸಂತಿ ಪ್ರಭು ದಂಪತಿ ನಡೆಸುತ್ತಿರುವ “ಅಜ್ಜ-ಅಜ್ಜಿ ಊಟ’ ಎಂಬ ಹೆಸರಿನ ಮೆಸ್‌ಗೆ ರಿಲಯನ್ಸ್‌ ಡಿಜಿಟಲ್‌ ತನ್ನ “ಹ್ಯಾಪಿನೆಸ್‌ ಪ್ರಾಜೆಕ್ಟ್’ ಅನ್ವಯ ನೆರವು ನೀಡಿದೆ.

Advertisement

ಕಾರ್ಯಕ್ರಮದ ಮುಖ್ಯ ನಿರೂಪಕಿ ಫರಾಹ್‌ ಖಾನ್‌ ಹಾಗೂ ಸಹ ನಿರೂಪಕರಾದ ಸಂಜೋತ್‌ ಕೀರ್‌ ಅವರು ಅಜ್ಜ-ಅಜ್ಜಿ ಊಟದ ಮೆಸ್‌ಗೆ ಅಗತ್ಯ ಪರಿಕರಗಳಾದ 4 ಬರ್ನರ್‌ಗಳ ಗ್ಯಾಸ್‌ ಸ್ಟೌ, ರೆಫ್ರಿಜರೇಟರ್‌, ಅನ್ನದ ಕುಕ್ಕರ್‌, ಮಿಕ್ಸರ್‌, ಮೈಕ್ರೋವೇವ್‌ ಮತ್ತು ಸ್ಮಾರ್ಟ್‌ ಫೋನ್‌ಗಳನ್ನು ತಲುಪಿಸಿದ್ದಾರೆ.

ವೃದ್ಧ ದಂಪತಿ ಪ್ರತೀದಿನ ಅಡುಗೆ ತಯಾರಿಗಾಗಿ ರಿಕ್ಷಾದಲ್ಲಿ ಸಾಗಿ ತರಕಾರಿ ತರಬೇಕಿತ್ತು. ಕಟ್ಟಿಗೆಯ ಒಲೆಯಲ್ಲೇ ಅಡುಗೆ ತಯಾರಿಸುತ್ತಿದ್ದರು. ಅದರ ಹೊಗೆಯಿಂದಲೂ ಕಣ್ಣಿನ ಉರಿ ಮೊದಲಾದ ಸಮಸ್ಯೆಗಳನ್ನು ಎದುರಿಸುತ್ತಿದ್ದರು. “ಇನ್ನು ಮುಂದೆ ತರಕಾರಿಯನ್ನು ಒಮ್ಮೆಲೇ ತಂದುಕೊಂಡು ಫ್ರಿಜ್‌ನಲ್ಲಿ ದಾಸ್ತಾನು ಇಡಬಹುದು. ರಿಲ¿ನ್ಸ್‌ ಡಿಜಿಟಲ್‌ನವರು ನೀಡಿರುವ ಕೊಡುಗೆಗಳಿಂದ ನಮಗೆ ಬಹಳ ಅನುಕೂಲವಾಯಿತು’ ಎಂದು ದಂಪತಿ ಖುಶಿ ಹಂಚಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗೆ www.reliancedigital.in ನೋಡಬಹುದು.

ಎಲ್ಲರ ಬದಕಿನಲ್ಲೂ ಕನಸುಗಳು ಇರುತ್ತವೆ. ಆದರೆ ಅದನ್ನು ನಿಜ ಮಾಡಿಕೊಳ್ಳಲು ನಾನಾ ಸವಾಲು-ಅಡೆತಡೆಗಳು ಹೆಜ್ಜೆಹೆಜ್ಜೆಗೂ ಸಿಗುತ್ತವೆ. ಅಂತಹವರಿಗೆ ತಂತ್ರಜ್ಞಾನವನ್ನು ಬಳಸಿಕೊಂಡು ದೊಡ್ಡ ಮಟ್ಟದಲ್ಲಿ ನೆರವು ನೀಡಿ ಕನಸುಗಳಿಗೆ ರೆಕ್ಕೆ ಕಟ್ಟುವ ಉದ್ದೇಶದಿಂದ ರಿಲಯನ್ಸ್‌ ಡಿಜಿಟಲ್‌ “ಹ್ಯಾಪಿನೆಸ್‌ ಪ್ರಾಜೆಕ್ಟ್’ ಆರಂಭಿಸಿದೆ ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next