Advertisement

Nehru letters ಹಿಂತಿರುಗಿಸುವಂತೆ ಸೋನಿಯಾ ಗಾಂಧಿಗೆ ಬಿಜೆಪಿ ಒತ್ತಾಯ

08:02 PM Dec 16, 2024 | Team Udayavani |

ನವದೆಹಲಿ: ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಪತ್ರವ್ಯವಹಾರಗಳನ್ನು ಪ್ರಧಾನ ಮಂತ್ರಿಗಳ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯಕ್ಕೆ ಹಿಂದಿರುಗಿಸುವಂತೆ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬಿಜೆಪಿ ಸೋಮವಾರ(ಡಿ16) ಒತ್ತಾಯಿಸಿ, ”ಐತಿಹಾಸಿಕ ದಾಖಲೆಗಳು ದೇಶಕ್ಕೆ ಸೇರಿದ್ದು, ಅವು ಯಾರ ವೈಯಕ್ತಿಕ ಆಸ್ತಿ ಅಲ್ಲ”ಎಂದು ಹೇಳಿದೆ.

Advertisement

ಬಿಜೆಪಿ ಸಂಸದ ಮತ್ತು ವಕ್ತಾರ ಸಂಬಿತ್ ಪಾತ್ರ ಅವರು ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯದ (PMML) ಚರ್ಚೆಯ ವರದಿಗಳನ್ನು ಉಲ್ಲೇಖಿಸಿ, ನೆಹರೂ ಅವರು ಭಾರತಕ್ಕೆ ಕೊನೆಯ ಬ್ರಿಟಿಷ್ ವೈಸ್‌ರಾಯ್ ಅವರ ಪತ್ನಿ ಎಡ್ವಿನಾ ಮೌಂಟ್‌ ಬ್ಯಾಟನ್ ,  ಖ್ಯಾತ ನಾಯಕರಾದ ಜಯಪ್ರಕಾಶ್ ನಾರಾಯಣ್ ಮತ್ತು ಜಗಜೀವನ್ ರಾಮ್‌ ಅವರೊಂದಿಗೆ ಪತ್ರವ್ಯವಹಾರಗಳನ್ನು ಮಾಡಿದ್ದಾರೆ. ಅವುಗಳನ್ನು ಹಿಂದಿನ ನೆಹರೂ ಮ್ಯೂಸಿಯಂ ಮತ್ತು ಲೈಬ್ರರಿ ಸೊಸೈಟಿ 2008 ರಲ್ಲಿ ಸೋನಿಯಾ ಗಾಂಧಿಗೆ ಹಿಂದಿರುಗಿಸಿತು’ ಎಂದು ಹೇಳಿದ್ದಾರೆ.

ಕಾದ್ರಿ ಆರೋಪ
ನೆಹರೂ ಅವರಿಗೆ ಸಂಬಂಧಿಸಿದ ಕೆಲವು ಪ್ರಮುಖ ದಾಖಲೆಗಳನ್ನು ಮರಳಿ ಪಡೆಯಲು ಪ್ರಧಾನ ಮಂತ್ರಿಗಳ ಮ್ಯೂಸಿಯಂ ಮತ್ತು ಲೈಬ್ರರಿ ಸೊಸೈಟಿಗೆ ಸಹಾಯ ಮಾಡುವಂತೆ ಇತಿಹಾಸಕಾರ ರಿಜ್ವಾನ್ ಕಾದ್ರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಲ್ಲಿ ವಿನಂತಿ ಮಾಡಿದ್ದಾರೆ.

2008ರಲ್ಲಿ ಯುಪಿಎ ಆಡಳಿತಾವಧಿಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಸೂಚನೆ ಮೇರೆಗೆ ಆ ದಾಖಲೆಗಳನ್ನು ಗ್ರಂಥಾಲಯದಿಂದ ತೆಗೆಯಲಾಗಿತ್ತು ಎಂದು ಕಾದ್ರಿ ಆರೋಪಿಸಿದ್ದಾರೆ.

‘2008ರಲ್ಲಿ ಸೋನಿಯಾ ಗಾಂಧಿಯವರ ಆದೇಶದ ಮೇರೆಗೆ ಲೈಬ್ರರಿಯಲ್ಲಿದ್ದ 51 ಬಾಕ್ಸ್ ಗಳನ್ನು ತೆಗೆಯಲಾಗಿತ್ತು. ಈ ದಾಖಲೆಗಳು ಮೂಲತಃ ನಮ್ಮ ಮಾಜಿ ಪ್ರಧಾನಿ ನೆಹರೂ ರವರ ಅಧಿಕೃತ ಮತ್ತು ವೈಯಕ್ತಿಕ ಪತ್ರವ್ಯವಹಾರಗಳನ್ನು ಒಳಗೊಂಡಿರುವ ಪತ್ರಿಕೆಗಳ ಸಂಗ್ರಹದ ಭಾಗವಾಗಿತ್ತು. ಈ ದಾಖಲೆಗಳು ಈಗ ಆ ಸಂಗ್ರಹದಿಂದ ಕಾಣೆಯಾಗಿವೆ’ ಎಂದು ಹೇಳಿದ್ದಾರೆ.

Advertisement

ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ನೆಹರೂ ವಸ್ತುಸಂಗ್ರಹಾಲಯವನ್ನು ಎಲ್ಲಾ ಪ್ರಧಾನ ಮಂತ್ರಿಗಳ ಸ್ಮರಣಿಕೆಗಳನ್ನು ಇಡಲು ವಿಸ್ತರಿಸಿ ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ ಎಂದು ಮರುನಾಮಕರಣ ಮಾಡಲಾಯಿತು.

ಇದನ್ನೂ ಓದಿ : PMML: ನೆಹರು ಅವರ ಪತ್ರ ಸಂಗ್ರಹವನ್ನು ಮರಳಿಸಿ: ರಾಹುಲ್‌ ಗೆ ಕೇಂದ್ರದ ಪತ್ರ

Advertisement

Udayavani is now on Telegram. Click here to join our channel and stay updated with the latest news.

Next