Advertisement

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

05:29 PM Jan 05, 2025 | Team Udayavani |

ಸಿಡ್ನಿ: ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ವೃತ್ತಿಜೀವನವನ್ನು ಪುನರುಜ್ಜೀವನಗೊಳಿಸಲು ಸಾಧ್ಯವೇ ಎಂಬ ಪ್ರಶ್ನೆ ಬಾರ್ಡರ್ -ಗವಾಸ್ಕರ್ ಟೆಸ್ಟ್ ಸರಣಿಯ ಸೋಲಿನ ಬಳಿಕ ಉದ್ಭವಿಸಿದೆ.

Advertisement

ಸಚಿನ್ ತೆಂಡೂಲ್ಕರ್ ಅವರ ನಿವೃತ್ತಿಯ ನಂತರ ಭಾರತೀಯ ಬ್ಯಾಟಿಂಗ್‌ನ ಅಗ್ರ ಆಟಗಾರ ಕೊಹ್ಲಿ, ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಬೆನ್ನಲ್ಲೇ ತಂಡದಲ್ಲಿ ಅವರ ಸ್ಥಾನದ ಕುರಿತು ಪ್ರಶ್ನೆ ಮೂಡಿದೆ.

ಆಸ್ಟ್ರೇಲಿಯ ವಿರುದ್ಧದ ಐದನೇ ಮತ್ತು ಅಂತಿಮ ಟೆಸ್ಟ್‌ನ ಎರಡನೇ ದಿನ ಆರನೇ ಸ್ಟಂಪ್ ಲೈನ್‌ನಲ್ಲಿ ಬ್ಯಾಕ್-ಆಫ್-ಲೆಂತ್ ಎಸೆತಕ್ಕೆ ಮತ್ತೊಮ್ಮೆ ಬಲಿಯಾದ ನಂತರ 36 ವರ್ಷದ ದಿಗ್ಗಜ ಆಟಗಾರನ ವೃತ್ತಿಜೀವನದ ಮೇಲೆ ಪ್ರಶ್ನೆ ಉದ್ಭವಿಸಿದೆ. ತಾಂತ್ರಿಕತೆಗಿಂತ ಮಾನಸಿಕವಾಗಿ ಕೊಹ್ಲಿ ಅವರ ಸಮಸ್ಯೆಗಳು ಸದ್ಯಕ್ಕೆ ಬಗೆಹರಿಯಲಾರದಂತಿವೆ.

ಕೊಹ್ಲಿ ಐದು ಟೆಸ್ಟ್‌ಗಳಲ್ಲಿ ಒಂಬತ್ತು ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿದ್ದು, ಆರಂಭಿಕ ಟೆಸ್ಟ್‌ನಲ್ಲಿ ಪರ್ತ್‌ನಲ್ಲಿ ಎರಡನೇ ಇನ್ನಿಂಗ್ಸ್ ಶತಕ ಹೊರತುಪಡಿಸಿ ಮತ್ತು ಮೆಲ್ಬೋರ್ನ್‌ನಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 36 ರನ್ ಗಳಿಸಿದ್ದರು. ಆ ಬಳಿಕ ಉತ್ತಮ ಆಟವಾಡಲು ವಿಫಲರಾಗಿದ್ದಾರೆ.

ಪರ್ತ್ ಮತ್ತು ಮೆಲ್ಬೋರ್ನ್‌ನಲ್ಲಿ ಅವರ ಎರಡು ಇನ್ನಿಂಗ್ಸ್‌ಗಳಲ್ಲಿ ಒಟ್ಟು 136 ರನ್‌ಗಳನ್ನು ಕಳೆದರೆ ಉಳಿದ ಏಳು ಇನ್ನಿಂಗ್ಸ್ ಗಳಲ್ಲಿ ಕೇವಲ 54 ರನ್‌ಗಳು ಬಂದಿವೆ.

Advertisement

ಭಾರತ ಫೆಬ್ರವರಿ 6 ರಿಂದ ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ. ನಂತರ ಚಾಂಪಿಯನ್ಸ್ ಟ್ರೋಫಿ (ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ) ಆಡಲಿದ್ದು, ನಂತರ ಮಾರ್ಚ್ 14 ರಂದು IPL ಪ್ರಾರಂಭವಾಗುತ್ತದೆ.

ಸೂಪರ್‌ಸ್ಟಾರ್ ಸಂಸ್ಕೃತಿ ಬೇಡ
”ನಾವು ಸೂಪರ್‌ಸ್ಟಾರ್ ಸಂಸ್ಕೃತಿಯನ್ನು ಕೊನೆಗೊಳಿಸಬೇಕು, ನಮಗೆ ತಂಡದ ಸಂಸ್ಕೃತಿ ಬೇಕು. ನೀವು ನಿಮ್ಮನ್ನು ಸುಧಾರಿಸಿಕೊಳ್ಳಬೇಕು ಮತ್ತು ಭಾರತ ತಂಡವನ್ನು ಸುಧಾರಿಸಬೇಕು. ಈ ಸರಣಿಯ ಮೊದಲು ಪಂದ್ಯಗಳು ಸಹ ಇದ್ದವು ಮತ್ತು ಅವರಿಗೆ ದೇಶೀಯ ಕ್ರಿಕೆಟ್ ಆಡಲು ಅವಕಾಶವಿತ್ತು, ಆದರೆ ಅವರು ಮಾಡಲಿಲ್ಲ. ನಾವು ಆ ಸಂಸ್ಕೃತಿಯನ್ನು ಬದಲಾಯಿಸಬೇಕಾಗಿದೆ” ಎಂದು ಮಾಜಿ ವೇಗಿ ಇರ್ಫಾನ್ ಪಠಾಣ್ ಸ್ಟಾರ್ ಸ್ಪೋರ್ಟ್ಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

“ಭಾರತ ತಂಡವು ತನ್ನ ಹಿರಿಯ ಆಟಗಾರನನ್ನ ಉಳಿಸಿಕೊಳ್ಳಲು ಅರ್ಹವಾಗಿದೆಯೇ? ಬದಲಾಗಿ, ಯುವ ಆಟಗಾರನಿಗೆ ಅವಕಾಶ ನೀಡಬೇಕು. ಇದು ತಂಡದ ಬಗ್ಗೆ ಹೇಳಿದ್ದು ಹೊರತು ವ್ಯಕ್ತಿಗಲ್ಲ. ಕೊಹ್ಲಿ ಸುಧಾರಿಸಲು ಗಂಭೀರವಾಗಿ ಪರಿಗಣಿಸಿದ್ದಾರೆ” ಎಂದು ಪಠಾಣ್ ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next