Advertisement
ಶುಕ್ರವಾರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಹೊಸ ಗೋಶಾಲೆ ನಿರ್ಮಾಣ ಮಾಡುವುದಿಲ್ಲ ಎಂಬ ಸರಕಾರದ ತೀರ್ಮಾನಕ್ಕೆ ಕುರಿತಾದ ಪ್ರಶ್ನೆಗೆ ಪ್ರತಿಕ್ರಿ ಯಿಸಿ, ನಾನು ರಾಜಕೀಯ ಮಾತನಾಡುವುದಿಲ್ಲ. ಹಿಂದಿನ ಸರ ಕಾರದ ಸಂದರ್ಭ ಈ ಯೋಜನೆ ಘೋಷಣೆಯಾಗಿದೆ. ಎಷ್ಟು ಗೋಶಾಲೆ ಮಾಡಿದ್ದಾರೆ, ಜಿಲ್ಲೆಯಲ್ಲಿ ಎಲ್ಲಿ ಗೋಶಾಲೆ ಆಗಿದೆ ಎಂದು ಪ್ರಶ್ನಿಸಿದರು.
ಇದೇ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ ಅವರ ಗೋವುಗಳ ಬದುಕುವ ಹಕ್ಕಿನ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಗೋಹತ್ಯೆ ನಿಷೇಧ ಕಾನೂನು ದೇಶದಲ್ಲಿ ಇಂದಿರಾ ಗಾಂಧಿ ಪ್ರಧಾನಿ ಆಗಿದ್ದಾಗಲೇ ಜಾರಿಗೆ ಬಂದಿದೆ. ಇಡೀ ದೇಶಕ್ಕೆ ಸಂಬಂಧಪಟ್ಟ ಕಾನೂನು ಅದಾಗಿತ್ತು. ಚುನಾವಣೆ ಉದ್ದೇಶಕ್ಕಾಗಿ ಒಂದೊಂದು ರಾಜ್ಯಗಳಿಗೆ ಒಂದೊಂದು ಕಾನೂನು ಅದಲ್ಲ ಎಂದರು. ಪೂಂಜ ಅವರ ಆನೆಗಳ ಕುರಿತ ಸದನದಲ್ಲಿನ ಹೇಳಿಕೆ ಬೇಸರ ತಂದಿತ್ತು. ಅದಕ್ಕಾಗಿ “ಆನೆಗಳಿಗೂ ಬದುಕುವ ಹಕ್ಕು ಇದೆ’ ಎಂದಿದ್ದೆ. ಈಗ ಅದಕ್ಕೆ ಪ್ರತಿಯಾಗಿ ಅವರು ಗೋವುಗಳ ಬಗ್ಗೆ ಪ್ರಶ್ನಿಸಿದ್ದಾರೆ. ಪೂಂಜರಂತಹವರಿಗೆ ಗೋವಿಗೂ ಕೂಡ ಬದು ಕುವ ಹಕ್ಕಿದೆ ಎನ್ನುವುದು ಇಲ್ಲಿಯವರೆಗೆ ತಿಳಿದಿಲ್ಲ ಎಂಬುದು ಖೇದಕರ ಸಂಗತಿ. ಹಾಗಾಗಿ ಯಾರಿಗೆಲ್ಲ ಬದುಕುವ ಹಕ್ಕಿದೆ ಎನ್ನುವುದನ್ನು ಅವರಿಗೆ ಪ್ರತ್ಯೇಕವಾಗಿ ಬರೆದು ಕಳುಹಿಸುವೆ ಎಂದು ಕುಟುಕಿದ್ದಾರೆ.
Related Articles
ಪಡೀಲ್‌ನಲ್ಲಿ ದ.ಕ. ಜಿಲ್ಲಾಧಿಕಾರಿಗಳ ನೂತನ ಕಚೇರಿ ಸಂಕೀರ್ಣದ ಕಾಮಗಾರಿ ಬಹುತೇಕ ಪೂರ್ಣವಾಗಿದ್ದು, ಜ.17 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರವಾಸ ಸಂದರ್ಭ ಉದ್ಘಾಟಿಸಲು ಉದ್ದೇಶಿಸಲಾಗಿದೆ ಎಂದು ಯು.ಟಿ.ಖಾದರ್ ಹೇಳಿದರು.
Advertisement
ಕಚೇರಿ ಸಂಕೀರ್ಣಕ್ಕೆ ಶುಕ್ರವಾರ ಭೇಟಿ ನೀಡಿ ಅಂತಿಮ ಹಂತದ ಕಾಮಗಾರಿಗಳನ್ನು ಪರಿಶೀಲಿಸಿದ ಅವರು, ಉದ್ಘಾಟನೆಗೆ ಮೊದಲು ಬಾಕಿ ಇರುವ ವಿವಿಧ ಕಾಮಗಾರಿಗಳನ್ನು ಪೂರ್ಣಗೊಳಿಸುವ ಕುರಿತು ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ಹಾಗೂ ಎಂಜಿನಿಯರ್‌ಗಳ ಜತೆ ಚರ್ಚಿಸಲಾಗಿದೆ. ಈ ಕಚೇರಿ ರಾಷ್ಟ್ರದಲ್ಲೇ ಮಾದರಿಯಾಗಲಿದ್ದು, ರಾಜ್ಯದಲ್ಲೇ ಅತ್ಯಂ ತ ವಿಶಾಲವಾದ ಡಿಸಿ ಕಚೇರಿ ಆಗಲಿದೆ ಎಂದರು.
ಗ್ರಾಮೀಣಾಭಿವೃದ್ಧಿ ಹೊರತುಪಡಿಸಿ ಉಳಿದ ಎಲ್ಲ ಇಲಾಖೆಗಳನ್ನು ಒಂದೇ ಸೂರಿನಡಿ ತರಲಾಗುತ್ತಿದೆ. ಜನಸಾಮಾನ್ಯರಿಗೆ ತಮ್ಮ ಕೆಲಸಗಳಿಗೆ ಬೇರೆ ಬೇರೆ ಕಡೆ ತೆರಳಬೇಕಾದ ಸಮಸ್ಯೆ ತಪ್ಪುತ್ತದೆ. ಅಧಿಕಾರಿಗಳಿಗೂ ವಿವಿಧ ಸಭೆಗಳಲ್ಲಿ ಒಂದೇ ಕಡೆ ಇದ್ದು, ಭಾಗವಹಿಸಲು ಸಾಧ್ಯ. ಸಮಯದ ಉಳಿತಾಯ ಆಗಲಿದೆ. ಉದ್ಘಾಟನೆ ಯಾದ ತತ್‌ಕ್ಷಣ ಎಲ್ಲ ಕಚೇರಿಗಳ ಸ್ಥಳಾಂತರ ಪ್ರಕ್ರಿಯೆ ನಡೆಯಲಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿನ್, ಅಪರ ಜಿಲ್ಲಾಧಿಕಾರಿ ಡಾ| ಸಂತೋಷ್ ಕುಮಾರ್, ಸಹಾಯಕ ಆಯುಕ್ತ ಹರ್ಷವರ್ಧನ್ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳು ಉಪಸ್ಥಿತರಿದ್ದರು.