Advertisement
ಈ ಅದ್ಭುತವಾದ ತಂಡವು ವ್ಯಕ್ತಿಗಳು ಎದುರಿಸುತ್ತಿರುವ ಸವಾಲುಗಳು ಗುರುತಿಸುತ್ತದೆ ಹಾಗೂ ಅಗತ್ಯ ಇರುವ ತಂತ್ರಜ್ಞಾನಗಳನ್ನು ರಿಲಯನ್ಸ್ ಡಿಜಿಟಲ್ ನಿಂದ ಒದಗಿಸಲಾಗುತ್ತದೆ. ಇನ್ನೂ ಮುಂದುವರಿದು ರಿಲಯನ್ಸ್ ಡಿಜಿಟಲ್ಸ್ ನ ನುರಿತ ಸಿಬ್ಬಂದಿ ಬೆಂಬಲ ನೀಡುತ್ತಾರೆ, ಅವರನ್ನು “ಟೆಕ್ ದೋಸ್ತ್” ಎನ್ನಲಾಗುತ್ತದೆ. ಇವರು ಭಾರತಾದ್ಯಂತ ನಾವೀನ್ಯತೆ ಹಾಗೂ ಕ್ರಿಯೇಟಿವಿಟಿಯನ್ನು ಉತ್ತೇಜಿಸುವುದಕ್ಕೆ ಬದ್ಧರಾಗಿದ್ದಾರೆ.
Related Articles
Advertisement
ಈ ಕಾರ್ಯಕ್ರಮದ ಬಗ್ಗೆ ಮಾತನಾಡಿದ ರಿಲಯನ್ಸ್ ಡಿಜಿಟಲ್‌ನ ವಕ್ತಾರರು, “ತಂತ್ರಜ್ಞಾನ ಎಂಬುದು ಇವತ್ತಿಗೆ ಜಗತ್ತಿನಲ್ಲಿ ಆಟವನ್ನೇ ಬದಲಿಸುವಂಥದ್ದಾಗಿದೆ. ರಿಲಯನ್ಸ್ ಡಿಜಿಟಲ್‌ನಲ್ಲಿ, ನಾವು ತಂತ್ರಜ್ಞಾನದ ಶಕ್ತಿಯನ್ನು ಗುರುತಿಸುತ್ತೇವೆ ಮತ್ತು ನಮ್ಮ ವಿಶಿಷ್ಟವಾಗಿ ವೈಯಕ್ತಿಕ ಸವಾಲುಗಳನ್ನು ಎದುರಿಸುವುದಕ್ಕೆ ಸೂಕ್ತವಾದ ಪರಿಹಾರಗಳನ್ನು ನೀಡುವ ಮೂಲಕ ಅದನ್ನು ವೈಯಕ್ತಿಕ ಮಟ್ಟದಲ್ಲಿ ನಂಬುತ್ತೇವೆ. ತಂತ್ರಜ್ಞಾನದ ಸಬಲೀಕರಣ ಧ್ಯೇಯದೊಂದಿಗೆ ಹ್ಯಾಪಿನೆಸ್ ಪ್ರಾಜೆಕ್ಟ್ ಬರುತ್ತಿದ್ದು, ಭಾರತವು ಹೊಸ ಮತ್ತು ಉಜ್ವಲವಾದ ನಾಳೆಗೆ ಜಿಗಿಯುತ್ತಿರುವಾಗ ನಮ್ಮ ಬ್ರ್ಯಾಂಡ್‌ಗೆ ಸಂಪೂರ್ಣವಾಗಿ ತಾಳೆಯಾಗುತ್ತದೆ,” ಎಂದು ಹೇಳಿದ್ದಾರೆ.
ಈ ಪ್ರಾಜೆಕ್ಟ್ ಕರ್ನಾಟಕದ ಮಣಿಪಾಲ್, ಉತ್ತರಪ್ರದೇಶದ ಲಖನೌ, ತಮಿಳುನಾಡಿನ ಚೆನ್ನೈ ಮತ್ತು ಮುಂಬೈಗೆ ವ್ಯಾಪಿಸುತ್ತಿದೆ. ತಂತ್ರಜ್ಞಾನ ಎಂಬ ಜಾದೂವಿನ ಮೂಲಕ ಹಲವು ಬದುಕುಗಳಿಗೆ ತಲುಪುತ್ತದೆ. ಈ ಹ್ಯಾಪಿನೆಸ್ ಪ್ರಾಜೆಕ್ಟ್ ಸಂಚಿಕೆಗಳು ರಿಲಯನ್ಸ್ ಡಿಜಿಟಲ್ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರತಿ ಮಧ್ಯಾಹ್ನ ಒಂದು ಗಂಟೆಗೆ ಪ್ರಸಾರ ಆಗಲಿದೆ.