Advertisement

Delhi; ನಿರಾಶ್ರಿತರಿಂದ ನಾಗರಿಕರು: ಮೊದಲ ಬಾರಿ ಮತ ಚಲಾಯಿಸಲಿರುವ ಪಾಕಿಸ್ಥಾನಿ ಹಿಂದೂಗಳು

07:39 PM Dec 30, 2024 | Team Udayavani |

ಹೊಸದಿಲ್ಲಿ: ಮಹತ್ವದ ವೈಯಕ್ತಿಕ ಮತ್ತು ಸಾಮುದಾಯಿಕ ಮೈಲಿಗಲ್ಲು ಎಂಬುದಕ್ಕೆ ಸಾಕ್ಷಿಯಾಗಿ, ನಾಲ್ಕನೇ ವಯಸ್ಸಿನಲ್ಲಿ ಕುಟುಂಬದೊಂದಿಗೆ ಆಶ್ರಯಕ್ಕಾಗಿ ಪಾಕಿಸ್ಥಾನದಿಂದ ಬಂದು ಭಾರತದಲ್ಲಿ ನೆಲೆಸಿದ್ದ ರಾಧಾ ಎಂಬಾಕೆಗೆ ಈಗ 18 ವರ್ಷ ವಯಸ್ಸಾಗಿದ್ದು, ಆಕೆ ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮತದಾನದ ಹಕ್ಕನ್ನು ಚಲಾಯಿಸಲು ಸಿದ್ಧರಾಗಿದ್ದಾರೆ.

Advertisement

ಇತ್ತೀಚೆಗೆ ಚುನಾವಣೆಗೆ ತಯಾರಿ ನಡೆಸುತ್ತಿರುವಾಗ ವೋಟರ್ ಐಡಿಗಾಗಿ ಅರ್ಜಿ ಸಲ್ಲಿಸಿದ 300 ಮಂದಿ ಪಾಕಿಸ್ಥಾನಿ ಹಿಂದೂಗಳಲ್ಲಿ ರಾಧಾ ಕೂಡ ಸೇರಿದ್ದಾರೆ. ಅವರೆಲ್ಲರಿಗೆ ಮೇ 2024 ರಂತೆ ಪೌರತ್ವ ತಿದ್ದುಪಡಿ ಕಾಯಿದೆ, 2019 ರ ಅಡಿಯಲ್ಲಿ ಭಾರತೀಯ ಪೌರತ್ವವನ್ನು ನೀಡಲಾಗಿದೆ.

ತನ್ನ ಚಿಕ್ಕಮ್ಮ ಮತ್ತು ತಾಯಿಯೊಂದಿಗೆ, ರಾಧಾ ಈ ವರ್ಷದ ಆರಂಭದಲ್ಲಿ ತನ್ನ ಪೌರತ್ವ ಪ್ರಮಾಣಪತ್ರವನ್ನು ಪಡೆದ ನಂತರ, ಅವಳು ಭಾರತೀಯ ಪ್ರಜೆಯಾಗಿ ತನ್ನ ಮೊದಲ ಮತ ಚಲಾಯಿಸುವ ಹಕ್ಕು ಪಡೆದಿದ್ದಾಳೆ.

”ನೂತನ ಸರಕಾರವು ನಮ್ಮನ್ನು ಬೆಂಬಲಿಸುತ್ತದೆ ಮತ್ತು ನಮಗೆ ಇಲ್ಲಿಯೇ ಉಳಿಯಲು ಅವಕಾಶ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ. ನಿರುದ್ಯೋಗ ಸ್ಥಳೀಯ ಸಮಸ್ಯೆಯಾಗಿದೆ” ಎಂದು ಗಮನ ಸೆಳೆದರು.

ಒಂದು ದಶಕದಿಂದ ಈ ಪ್ರದೇಶದಲ್ಲಿ ವಾಸಿಸುತ್ತಿದ್ದರೂ ರಾಧಾ ಸೇರಿದಂತೆ ಹಲವರು ಇತ್ತೀಚೆಗೆ ಪೌರತ್ವವನ್ನು ಪಡೆದಿದ್ದಾರೆ. ಸಮುದಾಯವು ಉದ್ಯೋಗಗಳು ಮತ್ತು ಕೃಷಿಭೂಮಿ ಪಡೆಯುವುದನ್ನು ನಿರೀಕ್ಷಿಸುತ್ತಿದೆ.

Advertisement

ಮತ್ತೊಂದು ಶಿಬಿರದ ನಿವಾಸಿ ಪುರಾಣ್ ಈ ಆಶಯಗಳನ್ನು ಪ್ರತಿಧ್ವನಿಸಿದ್ದು, ಪಾಕಿಸ್ಥಾನದಲ್ಲಿ ಕಿರುಕುಳದಿಂದ ಪಲಾಯನ ಮಾಡಿ ಬಂದ ನಾವು ಹಿಂದಿನಂತೆ ಕೃಷಿ ಮಾಡುವ ಕನಸು ಹೊಂದಿದ್ದು, ಸರಕಾರವು ನಮಗೆ ಭೂಮಿಯನ್ನು ಗುತ್ತಿಗೆಗೆ ನೀಡಿದರೆ, 217 ಕುಟುಂಬಗಳು ಮತ್ತು ಸರಿಸುಮಾರು 1,000 ಮಂದಿಗೆ ನೆರವಾಗಬಹುದು ಎಂದಿದ್ದಾರೆ.

ಶಿಬಿರದ ಪ್ರಧಾನರಾದ ಧರಂವೀರ್ ಸೋಲಂಕಿ ಅವರು ಆಧಾರ್ ಕಾರ್ಡ್‌ಗಳು ಮತ್ತು ಮತದಾರರ ಗುರುತಿನ ಚೀಟಿಗಳಂತಹ ದಾಖಲೆಗಳೊಂದಿಗೆ ಪ್ರಗತಿಯನ್ನು ಎತ್ತಿ ತೋರಿಸಿದರು. ಉಚಿತ ವಸತಿಗಿಂತ ಕೃಷಿಭೂಮಿಗಾಗಿ ಸಮುದಾಯದ ಆಶಯವನ್ನು ಒತ್ತಿಹೇಳಿದರು, ಭೂಮಿಯನ್ನು ಗುತ್ತಿಗೆಗೆ ನೀಡಿದರೆ ಸ್ವಾತಂತ್ರ್ಯ ಮತ್ತು ಸಮೃದ್ಧಿಯತ್ತ ಒಂದು ಹೆಜ್ಜೆ ಎಂದು ಹೇಳಿದರು.

ನಿರಾಶ್ರಿತರಿಗೆ, ಮುಂಬರುವ ಚುನಾವಣೆ ಸ್ಥಿರತೆ, ಘನತೆ ಮತ್ತು ಭಾರತದಲ್ಲಿ ತಮ್ಮ ಜೀವನವನ್ನು ಪುನರ್ನಿರ್ಮಿಸುವ ಅವಕಾಶದ ಭರವಸೆಯನ್ನು ಸಂಕೇತಿಸುತ್ತವೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next