Advertisement

ಬೂದಿಬಸವೇಶ್ವರ ಮಠದ ಕಾರ್ಯ ಮಾದರಿ

04:40 PM Jan 26, 2018 | |

ದೇವದುರ್ಗ: ತಾಲೂಕಿನ ಗಬ್ಬೂರು ಗ್ರಾಮದ ಶ್ರೀ ಬೂದಿಬಸವೇಶ್ವರ ಸಂಸ್ಥಾನಮಠ ಆವರಣದಲ್ಲಿ ಗುರುವಾರ ಶ್ರೀಮಠದಿಂದ 151 ಜೋಡಿಗಳ ಸಾಮೂಹಿಕ ವಿವಾಹ, ಅಯ್ನಾಚಾರ ದೀಕ್ಷೆ ಹಾಗೂ ಶ್ರೀ ಬೂದಿಬಸವೇಶ್ವರ ಶಿವಾಚಾರ್ಯರ ತುಲಾಭಾರ, ಧಾರ್ಮಿಕ ಸಭೆ ಸಮಾರಂಭ ಅದ್ಧೂರಿಯಾಗಿ ನಡೆಯಿತು.

Advertisement

ಸಮಾರಂಭ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌. ಬೋಸರಾಜು, ಯಾವುದೇ ಸರ್ಕಾರಗಳು ಮಾಡದ ಸಾಮಾಜಿಕ ಕಾರ್ಯಗಳನ್ನು ಮಠ, ಮಾನ್ಯಗಳು ಮಾಡುತ್ತಿವೆ. ಮಠಗಳು ನಡೆಸುವ ಇಂತಹ ಕಾರ್ಯಗಳಿಂದ ಸಮಾಜ ಬದಲಾವಣೆಗೆ ಹಾಗೂ ದುಂದು ವೆಚ್ಚಗಳಿಗೆ ಕಡಿವಾಣ, ಬಡ ಕುಟುಂಬಗಳಿಗೆ ಅನುಕೂಲವಾಗಿದೆ ಎಂದು ಹೇಳಿದರು. 

ಪ್ರತಿ ವರ್ಷ ಬೂದಿ ಬಸವೇಶ್ವರ ಸಂಸ್ಥಾನ ಮಠದಿಂದ 151 ಜೋಡಿಗಳ ಸಮೂಹಿಕ ವಿವಾಹ ಆಯೋಜಿಸುವ ಮೂಲಕ ಶ್ರೀ ಬೂದಿ ಬಸವೇಶ್ವರ ಶಿವಾಚಾರ್ಯರು ಬಡವರು, ಹಿಂದುಳಿದವರು ಹಾಗೂ ಆರ್ಥಿಕವಾಗಿ ಸಂಕಷ್ಟದಲ್ಲಿರುವರಿಗೆ ನೆರವಾಗಿದ್ದಾರೆ ಎಂದರು. 

ನೀಲಗಲ್‌ ಬೃಹನ್ಮಠದ ಶ್ರೀ ಡಾ| ಪಂಚಾಕ್ಷರಿ ಶಿವಾಚಾರ್ಯರು ಮಾತನಾಡಿ, ಬೂದಿಯಿಂದ ಬಹುರೋಗ ಕಳೆದ ಬೂದಿ ಬಸವೇಶ್ವರ ಶಿವಾಚಾರ್ಯರು ಭಕ್ತರ ಮನ ಮನೆಯ ದೇವರಾಗಿದ್ದಾರೆ. ಇಂದು ಗೃಹಸ್ಥಾಶ್ರಮಕ್ಕೆ ಕಾಲಿಡುತ್ತಿರುವ ನವದಂಪತಿಗಳು ಹೊಂದಾಣಿಕೆ ಜೀವನ ಸಾಗಿಸಬೇಕು. ದುಶ್ಚಟಗಳಿಂದ ದೂರವಿದ್ದು ಒಳ್ಳೆಯ ಸಂಸ್ಕಾರವಂತರಾಗಬೇಕು ಎಂದು ಕಿವಿಮಾತು ಹೇಳಿದರು.

ಸಂಸದ ಸದಸ್ಯರಾದ ಭಂಗವಂತ್ರಾಯ ಮಾತನಾಡಿ ಶ್ರೀಮಠದ ಸಾಮಾಜಿಕ, ಧಾರ್ಮಿಕ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಹನುಮಾಪುರದ ಚಂದ್ರಮ್ಮ ಮಲ್ಲನಗೌಡ ಮಾಲಿಪಾಟೀಲ್‌, ಬುದ್ದಿನ್ನಿಯ ಅಯ್ಯಮ್ಮ ಸೂಗಪ್ಪ ಸಾಹುಕಾರ, ಶಾವಂತಗೇರಾದ ಶಿವಬಸಮ್ಮ ಶಂಕ್ರಪ್ಪ ಸಾಹುಕಾರ ಕುಟುಂಬದಿಂದ ಶ್ರೀ ಬೂದಿಬಸವೇಶ್ವರ ಶಿವಾಚಾರ್ಯರ ತುಲಾಭಾರ ನೆರವೇರಿಸಲಾಯಿತು.

Advertisement

ಶ್ರೀ ಬೂದಿ ಬಸವೇಶ್ವರ ಶಿವಾಚಾರ್ಯರು, ಗೆಜ್ಜೆಬಾವಿ-ನಿಡಶೇಷಿ ಸಂಸ್ಥಾನ ಮಠದ ಚನ್ನಬಸವ ಶಿವಾಚಾರ್ಯರು, ನಂದವಾಡಗಿ ಹಿರೇಮಠದ ಶ್ರೀ ಮಹಾಂತ ಶಿವಾಚಾರ್ಯರು, ನೀಲಗಲ್‌, ಎನ್‌.ಗಣೇಕಲ್‌ ಬೃಹನ್ಮಠದ ಡಾ| ಪಂಚಾಕ್ಷರಿ ಶಿವಾಚಾರ್ಯರು, ರಾಯಚೂರು ಅತ್ತನೂರು ಹಿರೇಮಠದ ಅಭಿನವ ರಾಚೋಟಿವೀರ ಶಿವಾಚಾರ್ಯರು, ಕೆಂಬಾವಿ ಚನ್ನಬಸವ ಶಿವಾಚಾರ್ಯರು, ನವಲಕಲ್‌ ಬೃಹನ್ಮಠದ ಅಭಿನವ ಶ್ರೀ ಸೋಮನಾಥ ಶಿವಾಚಾರ್ಯರು, ಸುಯಲ್ತಾನಪುರ ಬೃಹನ್ಮಠದ ಶ್ರೀ ಶಂಭು ಸೋಮನಾಥ ಶಿವಾಚಾರ್ಯರು, ಆರ್‌ಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ ರಾಜಶೇಖರ ನಾಯಕ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next