Advertisement

“ದಿ ವಿಲನ್’​ನ ರಾವಣ ಯಾರು ಗೊತ್ತಾ?: Watch

11:37 AM Oct 02, 2018 | Team Udayavani |

ಕರುನಾಡ ಚಕ್ರವರ್ತಿ ಶಿವರಾಜಕುಮಾರ್‌ ಮತ್ತು ಅಭಿನಯ ಚಕ್ರವರ್ತಿ ಸುದೀಪ್‌ ಅಭಿನಯದ ಸ್ಯಾಂಡಲ್‍ವುಡ್‍ನ ಬಹುನಿರೀಕ್ಷಿತ ಚಿತ್ರ “ದಿ ವಿಲನ್’​ ಚಿತ್ರದ ನಾಲ್ಕು ರಿಲೀಸಿಂಗ್ ಟೀಸರ್​ಗಳನ್ನು ಸೋಮವಾರ ಸಂಜೆ 7 ಗಂಟೆಗೆ ಚಿತ್ರದ ನಿರ್ದೇಶಕ ಪ್ರೇಮ್ ಬಿಡುಗಡೆ ಮಾಡಿದರು. ರಿಲೀಸ್ ಆಗುತ್ತಲೇ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿರುವ ಟೀಸರ್​, ಬಿಡುಗಡೆಯಾದಗಿನಿಂದ ಇಲ್ಲಿಯವರೆಗೂ 11ಲಕ್ಷಕ್ಕೂ ಹೆಚ್ಚು ವೀಕ್ಷಣೆಯಾಗುವ ಮೂಲಕ ದಾಖಲೆ ಬರೆದಿದೆ.

Advertisement

ಸದ್ಯ ಯುಟ್ಯೂಬ್​ ಟ್ರೆಂಡಿಂಗ್​ನಲ್ಲಿ ನಂಬರ್ ಒನ್ ಪಟ್ಟ ಅಲಂಕರಿಸುವ ಮೂಲಕ, ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿವೆ. ಮುಖ್ಯವಾಗಿ ಟೀಸರ್ ನಲ್ಲಿ “ಮಚ್ಚ್ ಎಳೆಯೋದು, ಜಗತ್ತಿಗೆ ಒಬ್ಬನೆ ಅಧಿಪತಿ ಇರಬೇಕು, ಭ್ರಮೆ..’ ಇನ್ನು ಮುಂತಾದ ಡೈಲಾಗ್‍ಗಳು ಚಿತ್ರದಲ್ಲಿ ಏನು ಇರಬಹುದು ಎಂಬ ಕುತೂಹಲ ಮತ್ತಷ್ಟು ಹೆಚ್ಚು ಮಾಡಿದೆ. ವಿಲನ್ ಟೀಸರ್ ನೋಡಿಕೊಂಡು ಬನ್ನಿ.. ರಾವಣ ಯಾರು? ಎನ್ನುವುದರ ಬಗ್ಗೆ ಇಲ್ಲಿಯೂ ಒಂದೇ ಒಂದು ಸುಳಿವು ಸಿಗಲ್ಲ.

ಇನ್ನು ಚಿತ್ರವನ್ನು ಸಿ.ಆರ್‌. ಮನೋಹರ್‌ ತಮ್ಮ ತನ್ವಿ ಫಿಲಂಸ್‌ ಲಾಂಛನದಲ್ಲಿ ನಿರ್ಮಿಸುತ್ತಿದ್ದು, ಗಿರೀಶ್‌ ಗೌಡ ಅವರ ಛಾಯಾಗ್ರಹಣ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಚಿತ್ರದಲ್ಲಿ ಶಿವರಾಜಕುಮಾರ್‌, ಸುದೀಪ್‌, ಶ್ರುತಿ ಹರಿಹರನ್‌, ಆ್ಯಮಿ ಜಾಕ್ಸನ್‌, ಮಿಥುನ್‌ ಚಕ್ರವರ್ತಿ, ಶ್ರೀಕಾಂತ್‌, ತಿಲಕ್‌ ಮುಂತಾದವರು ನಟಿಸುತ್ತಿದ್ದಾರೆ. ಚಿತ್ರವು ಕನ್ನಡ, ತಮಿಳು ಮತ್ತು ತೆಲುಗಿನಲ್ಲಿ ಅದ್ಧೂರಿಯಾಗಿ ತೆರೆಗೆ ಬರಲಿದ್ದು, ಅಕ್ಟೋಬರ್ 18ರಂದು ಆಯುಧ ಪೂಜೆ ದಿನದಂದು ಬಿಡುಗಡೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next