ಮುಂಬಯಿ: ಒಂದಲ್ಲ ಒಂದು ಸಿನಿಮಾದಲ್ಲಿ ಬ್ಯುಸಿಯಾಗಿರುವ ಸೌತ್ ಬೆಡಗಿ ಶ್ರುತಿ ಹಾಸನ್ (Shruti Haasan) ಸಂದರ್ಶನವೊಂದರಲ್ಲಿ ಹಲವು ವಿಚಾರದ ಬಗ್ಗೆ ಮಾತನಾಡಿದ್ದಾರೆ.
ಸಿನಿಮಾಗಳ ಬಗ್ಗೆ ವಿಚಾರ ಹೊರತುಪಡಿಸಿದರೆ ವೈಯಕ್ತಿಕ ಜೀವನದ ಬಗ್ಗೆಯೂ ಶ್ರುತಿ ಹಾಸನ್ ಅನೇಕ ಬಾರಿ ಸುದ್ದಿಯಾಗಿದ್ದಾರೆ.
ʼಪಿಂಕ್ ವಿಲ್ಲಾʼ ಜತೆಗಿನ ಸಂದರ್ಶನದಲ್ಲಿ ಅಪ್ಪ- ಅಮ್ಮನ ವಿಚ್ಚೇದನ, ಬಾಲ್ಯದ ಜೀವನ, ಮುಂದಿನ ಸಿನಿಮಾ, ಮದುವೆ ಹೀಗೆ ಹಲವು ವಿಚಾರದ ಬಗ್ಗೆ ಮಾತನಾಡಿದ್ದಾರೆ.
ಈ ಹಿಂದೆ ನೀವು ಮದುವೆ ಆಗುವುದಿಲ್ಲ ಎಂದಿದ್ದೀರಿ. ಈಗಲೂ ನಿಮ್ಮ ಮಾತಿಗೆ ಬದ್ಧರಾಗಿರುತ್ತೀರಾ ಎನ್ನುವ ಪ್ರಶ್ನೆಯನ್ನು ಶ್ರುತಿ ಅವರಿಗೆ ಕೇಳಲಾಗಿದೆ.
ಹೌದು. ನನಗೆ ಗೊತ್ತಿಲ್ಲ. ನನಗೆ ರಿಲೇಷನ್ ಶಿಪ್ ಗಳಂದ್ರೆ ಇಷ್ಟ. ರೊಮ್ಯಾನ್ಸ್ ಇಷ್ಟ. ನನಗೆ ಸಂಬಂಧದಲ್ಲಿರುವುದು ಇಷ್ಟ. ಆದರೆ ಯಾರೊಂದಿಗೂ ಜೀವನ ಪೂರ್ತಿ ಇರುವುದಕ್ಕೆ ನನಗೆ ಸ್ವಲ್ಪ ಭಯ ಆಗುತ್ತದೆ. ಗೊತ್ತಿಲ್ಲ ಯಾರಾದ್ರೂ ಅಮೂಲ್ಯ ರತ್ನ ಬಂದ್ರೂ ಬರಬಹುದು. ಇದುವರೆಗೆ ಮದುವೆ ವಿಚಾರ ನನ್ನ ಮನಸ್ಸಿಗೆ ಬಂದಿಲ್ಲವೆಂದಿದ್ದಾರೆ.
ನನ್ನ ಫ್ರೆಂಡ್ ಸರ್ಕಲ್‌ನಲ್ಲಿ ನಾನು ತುಂಬಾ ಮದುವೆಗಳನ್ನು ನೋಡಿದ್ದೇನೆ. ತುಂಬಾ ಸುಂದರವಾದ ದಾಂಪತ್ಯ ಜೀವನವನ್ನು ನನ್ನದೇ ಫ್ರೆಂಡ್ಸ್ ಗ್ರೂಪ್ ನಲ್ಲಿ ನೋಡಿದ್ದೇನೆ. ಈ ಹಿಂದೆ ನನ್ನ ಜತೆ ಸಂಬಂಧದ ವಿಚಾರದಲ್ಲಾದ ಅನುಭವದಿಂದ ನಾನು ಮದುವೆಗೆ ಹಿಂಜರಿಯುತ್ತಿಲ್ಲ. ಇದು ನನ್ನದೇ ನಿರ್ಧಾರವೆಂದು ʼಸಲಾರ್ʼ ಬೆಡಗಿ ಹೇಳಿದ್ದಾರೆ.
ನಾನು ಸಿನಿಮಾಗಳಲ್ಲಿ ಅನೇಕ ಮದುವೆಗಳನ್ನು ಆಗಿದ್ದೇನೆ. ವಿಭಿನ್ನ ಸಂಪ್ರದಾಯದ ಮದುವೆಗಳನ್ನು ಆಗಿದ್ದೇನೆ. ನಾನು ಮದುವೆ ಪಾತ್ರದಲ್ಲಿ ತೆಲುಗು, ಪಂಜಾಬಿ, ಮುಸ್ಲಿಂ ವಧುವಾಗಿ ನಟಿಸಿದ್ದೇನೆ. ಮದುವೆಯೆಂಬ ಕಲ್ಪನೆ ನನಗೆ ಹೊಂದಿಕೆ ಆಗುವುದಿಲ್ಲ. ನಾನೀಗ ಮದುವೆಯಾದರೆ ಅದು ನನಗೆ ಶೂಟಿಂಗ್ ತರ ಅನ್ನಿಸುತ್ತದೆ ಎಂದು ಶ್ರುತಿ ಹೇಳಿದ್ದಾರೆ.
ಶ್ರುತಿ ಸಂತಾನು ಹಜಾರಿಕಾ ಎನ್ನುವವರ ಜತೆ ಈ ಹಿಂದೆ ಶ್ರುತಿ ಪ್ರೀತಿಯಲ್ಲಿದ್ದರು. ಇತ್ತೀಚೆಗೆ ಇಬ್ಬರು ದೂರವಾಗಿದ್ದಾರೆ.
ಸಿನಿಮಾಗಳ ವಿಚಾರಕ್ಕೆ ಬಂದರೆ ಶ್ರುತಿ ಮುಂದೆ ರಜಿನಿಕಾಂತ್ ಅವರ ʼಕೂಲಿʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಾದ ಬಳಿಕ ಪ್ರಭಾಸ್ ಅವರ ʼಸಲಾರ್ -2ʼ ಸಿನಿಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ.