Advertisement

BJPಯಲ್ಲಿ ನನಗೆ ಅನ್ಯಾಯವಾದಾಗ ರಘುಪತಿ ಭಟ್ ಸ್ಪರ್ಧೆ ಬೇಡ ಅಂದಿದ್ದರು: ಆಯನೂರು

11:02 AM May 15, 2024 | Team Udayavani |

ಶಿವಮೊಗ್ಗ: ಮಾಜಿ ಶಾಸಕ ರಘುಪತಿ ಭಟ್ ಬಿಜೆಪಿಯಲ್ಲಿ ನನಗೆ ಅನ್ಯಾಯ ಆದಾಗ ಸ್ಪರ್ಧೆ ಮಾಡುವುದು ಬೇಡ ಎಂದಿದ್ದರು, ಈಗ ಅವರಿಗೆ ಆ ಪರಿಸ್ಥಿತಿ ಬಂದಿದೆ. ಆ ಬಗ್ಗೆ ನಾನು ಹೆಚ್ಚೇನೂ ಹೇಳುವುದಿಲ್ಲ” ಎಂದು ನೈಋತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಬುಧವಾರ ಹೇಳಿಕೆ ನೀಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಮಂಜುನಾಥ್,’ ನನ್ನ ಪ್ರತಿ ಸ್ಪರ್ಧಿಗಳ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ.ಈಶ್ವರಪ್ಪ ಸಹ ಪದವೀಧರರು ಅವರ ಬಳಿ ಸಹ ಮತ ಕೇಳುತ್ತೇನೆ. ನನಗೆ ಬಿಜೆಪಿಯ ಮತಗಳೂ ಸಹ ಹೆಚ್ಚು ಬರುತ್ತವೆ’ ಎಂದರು.

‘ನಾನು ಈಗಾಗಲೇ ಮತದಾರನ್ನ ಮುಟ್ಟುವ ಕಾರ್ಯ ಮಾಡಿದ್ದೇನೆ. ನೌಕರರು ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ. ಕಳೆದ ಐದು ವರ್ಷ ಅವರ ಪರ ಹೋರಾಟ ಮಾಡಿದ್ದನ್ನು ನೆನಪಿಸಿಕೊಳ್ಳುತ್ತಿದ್ದಾರೆ. ನಿವೃತ್ತಿ ವೇತನದ ಬಗ್ಗೆ ನನ್ನ ಹೋರಾಟದ ಬಗ್ಗೆ ಅವರೇ ಹೇಳುತ್ತಾರೆ. ಔರಾದ್ಕರ್ ವರದಿಯಿಂದ ವೇತನ ತಾರತಮ್ಯ ಆಗಿದೆ. ವರ್ಗಾವಣೆ ಸಮಸ್ಯೆ ಪರ ನಾನು ಗಟ್ಟಿಧ್ವನಿಯಾಗಿ ಕೆಲಸ ಮಾಡಿದ್ದೇನೆ, ಹೋರಾಟ ಮಾಡಿದ್ದು ಖಚಿತವಾಗಿ ಗೆಲ್ಲುವ ಭರವಸೆ ನನಗಿದೆ’ ಎಂದರು.

‘ನಾನು ನೌಕರರ ಭರವಸೆಯ ವ್ಯಕ್ತಿಯಾಗಿದ್ದೇನೆ. ಕೆಲವರು ಬದುಕಿನಲ್ಲಿ ಒಮ್ಮೆ ಶಾಸಕನಾಗಬೇಕು ಅಂದುಕೊಂಡು ಚುನಾವಣೆ ನಿಂತಿದ್ದಾರೆ.ನೌಕರರಿಗಾಗಿ ರಕ್ತವನ್ನು ಬೇವರಾಗಿ ಸುರಿಸಿದ್ದೇನೆ. ಎನ್ ಪಿಎಸ್ ,ಒಪಿಎಸ್ ಆಗುವರೆಗೆ ನನ್ನ ಹೋರಾಟ ಇರುತ್ತದೆ. ಏಳನೇ ವೇತನ ಆಯೋಗದ ವರದಿ ಜಾರಿಗೆ ಬರಬೇಕಿದೆ. ಆರೋಗ್ಯ, ಪೊಲೀಸ್ ಇಲಾಖೆಯ ಸಮಸ್ಯೆ ಬಗೆಹರಿಸುತ್ತೇನೆ. ಹೋರಾಟದ ಹೆಜ್ಜೆಯ ಮೇಲೆ ಮತ ಕೇಳುತ್ತೇನೆ ಹೊರತು ಜಾತಿ,ಧರ್ಮದ ಆಧಾರದ ಮೇಲೆ ಕೇಳುವುದಿಲ್ಲ’ ಎಂದರು.

‘ಕಳೆದ ಬಾರಿ 26 ಸಾವಿರ ಮತಗಳ ಅಂತರದಲ್ಲಿ ಗೆದ್ದಿದ್ದೆ, ಯಾವುದೇ ಗೊಂದಲಗಳಿಗೆ,ಅಪಪ್ರಚಾರಗಳಿಗೆ ಒಳಗಾಗದೆ ಮತ ನೀಡಿ. ಸ್ಪರ್ಧೆಯಲ್ಲಿ ಇರುವ ಅಭ್ಯರ್ಥಿಗಳೊಂದಿಗೆ ನನ್ನ ಹೋಲಿಕೆ ಮಾಡಿ ಮತ ನೀಡಿ. ನಾನು ಈಗಾಗಲೇ ಎಸ್.ಪಿ‌ ದಿನೇಶ್(ಕಾಂಗ್ರೆಸ್ ಬಂಡಾಯ) ಜತೆ ಮಾತಾಡಿದ್ದೇನೆ. ಅವರ ಬಗ್ಗೆ ಉತ್ತರಿಸುವ ಸಮಯ ಇದಲ್ಲ. ಅವರು ಸ್ಪರ್ಧೆಯಿಂದ ಹಿಂದೆ ಸರಿಯುತ್ತಾರೆ ಎನ್ನುವ ನಂಬಿಕೆ ಇದೆ’ ಎಂದರು.

Advertisement

‘ಮೈಸೂರಿನಲ್ಲಿ ನಾಳೆ ನಾಮಪತ್ರ ಸಲ್ಲಿಸುತ್ತೇನೆ. ಜನ ಸೇರಿಸಿ ಶಕ್ತಿ ಪ್ರದರ್ಶನ ಮಾಡುವುದಿಲ್ಲ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next