Advertisement

Manjunath Bhandary: ಟೋಲ್‌ ಕೇಂದ್ರಗಳಲ್ಲಿ ಪ್ರಯಾಣಿಕರಿಗೆ ಬೇಕಾದ ಅಗತ್ಯ ಸೌಲಭ್ಯಗಳಿಲ್ಲ

01:04 AM Dec 19, 2024 | Team Udayavani |

ಬೆಳಗಾವಿ: ರಾಜ್ಯದಲ್ಲಿ ಶುಲ್ಕ ವಸೂಲಿ ಟೋಲ್‌ ಕೇಂದ್ರಗಳಲ್ಲಿ ಪ್ರಯಾಣಿಕರಿಗೆ ಬೇಕಾದ ಅಗತ್ಯ ಸೌಲಭ್ಯಗಳ ಬಗ್ಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಸತೀಶ ಜಾರಕಿಹೊಳಿ ಹೇಳಿದರು.

Advertisement

ವಿಧಾನ ಪರಿಷತ್‌ದಲ್ಲಿ ಕಾಂಗ್ರೆಸ್‌ ಸದಸ್ಯ ಮಂಜುನಾಥ ಭಂಡಾರಿ ಅವರ ಪ್ರಶ್ನೆಗೆ ಉತ್ತರಿಸಿದರು.ಉಡುಪಿ-ಕುಂದಾಪುರ ಮಾರ್ಗದ ಮಧ್ಯೆ ಸೂಚನ ಫಲಕಗಳಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ 100 ಕಿ.ಮೀ. ಅಂತರದಲ್ಲಿ 3 ಟೋಲ್‌ಗ‌ಳಿದ್ದು, ಅದರಲ್ಲಿ ಉಡುಪಿ ಜಿಲ್ಲೆಯೊಂದರಲ್ಲೇ 2 ಶುಲ್ಕ ವಸೂಲಿ ಟೋಲ್‌ಗ‌ಳಿವೆ. ವ್ಯವಸ್ಥೆ ಸರಿಯಾಗಿಲ್ಲ ಎಂದು ಭಂಡಾರಿ ಅವರು ಸಚಿವರ ಗಮನಕ್ಕೆ ತಂದರು.

ಹಕ್ಕುಪತ್ರ ಒದಗಿಸಿ: ಭಂಡಾರಿ ಆಗ್ರಹ
ಬೆಳಗಾವಿ: ಪಡುಬಿದ್ರಿಯಲ್ಲಿ 23 ಬಡ ಕುಟುಂಬಗಳಿಗೆ 94ಸಿ ಅಡಿ ಹಕ್ಕುಪತ್ರ ಸಿಗದೆ ತೊಂದರೆಯಲ್ಲಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ತಿಳಿಸಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾವಿಸಿದ ಅವರು ಪಡುಬಿದ್ರಿಯ ಕಾಡಿಪಟ್ಣ ಮತ್ತು ನಡಿಪಟ್ಣ ಎಂಬಲ್ಲಿ ಒಟ್ಟು 23 ಮನೆಗಳಿಗೆ ಪರಂಬೋಕು ಮೀನು ಒಣಗಿಸುವ ಜಾಗ ಎಂದು ಹೇಳಿ ಹಕ್ಕುಪತ್ರ ನೀಡಿಲ್ಲ. ಈ ಗೊಂದಲ ನಿವಾರಿಸಿ ಹಕ್ಕುಪತ್ರ ನೀಡಬೇಕು ಎಂದವರು ಆಗ್ರಹಿಸಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next