Advertisement

Delhi; 38 ಅಭ್ಯರ್ಥಿಗಳ ಫೈನಲ್ ಪಟ್ಟಿ ಪ್ರಕಟಿಸಿದ ಆಪ್

06:02 PM Dec 15, 2024 | Team Udayavani |

ಹೊಸದಿಲ್ಲಿ: ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ಆಮ್ ಆದ್ಮಿ ಪಕ್ಷ ರವಿವಾರ(ಡಿ15) 38 ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದೆ.

Advertisement

ಪಕ್ಷದ ವರಿಷ್ಠ, ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ನಾಲ್ಕನೇ ಬಾರಿ ನವದೆಹಲಿ ಕ್ಷೇತ್ರದಿಂದ, ಮುಖ್ಯಮಂತ್ರಿ ಅತಿಶಿ ಮತ್ತೆ ಕಲ್ಕಾಜಿಯಿಂದ ಕಣಕ್ಕಿಳಿಯಲಿದ್ದಾರೆ.

ಸಚಿವರಾದ ಸೌರಭ್ ಭಾರದ್ವಾಜ್, ಗೋಪಾಲ್ ರಾಯ್, ಇಮ್ರಾನ್ ಹುಸೇನ್, ರಘುವಿಂದರ್ ಶೋಕೀನ್ ಮತ್ತು ಮುಖೇಶ್ ಕುಮಾರ್ ಅಹ್ಲಾವತ್ ಕ್ರಮವಾಗಿ ಗ್ರೇಟರ್ ಕೈಲಾಶ್, ಬಾಬರ್‌ಪುರ್, ಬಲ್ಲಿಮಾರನ್, ನಂಗ್ಲೋಯ್ ಜಾಟ್ ಮತ್ತು ಸುಲ್ತಾನ್‌ಪುರ್ ಮಜ್ರಾದಿಂದ ಸ್ಪರ್ಧಿಸಲಿದ್ದಾರೆ.

2020 ರ ಚುನಾವಣೆಯಲ್ಲಿ, ಆಮ್ ಆದ್ಮಿ ಪಕ್ಷವು ದೆಹಲಿಯ 70 ಸ್ಥಾನಗಳ ಪೈಕಿ 62 ಸ್ಥಾನಗಳನ್ನು ಗೆದ್ದು ರಾಷ್ಟ್ರ ರಾಜಧಾನಿಯ ರಾಜಕೀಯದಲ್ಲಿ ತನ್ನ ಪ್ರಾಬಲ್ಯವನ್ನು ಗಟ್ಟಿಗೊಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next