Advertisement

Mangaluru; ಖ್ಯಾತ ನೃತ್ಯ ಗುರು ಕರ್ನಾಟಕ ಕಲಾಶ್ರೀ ಪುರಸ್ಕೃತ ಕಮಲಾ ಭಟ್ ವಿಧಿವಶ

08:18 AM Dec 18, 2024 | Team Udayavani |

ಮಂಗಳೂರು: ಖ್ಯಾತ ನೃತ್ಯ ಗುರು ಕರ್ನಾಟಕ ಕಲಾಶ್ರೀ ಪುರಸ್ಕೃತ ಕಮಲಾ ಭಟ್(70) ಅವರು ಮಂಗಳವಾರ ರಾತ್ರಿ (ಡಿ17) ಇಹಲೋಕ ತ್ಯಜಿಸಿದ್ದಾರೆ.

Advertisement

ಕಮಲಾಭಟ್ ರವರು ನಾಟ್ಯಾಲಯ ಊರ್ವ ಸಂಸ್ಥೆಯ ನಿರ್ದೇಶಕರಾಗಿದ್ದರು. ಸುಮಾರು 45 ವರ್ಷಗಳಿಂದ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದರು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾ ಶ್ರೀ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಉಡುಪಿ ಪೇಜಾವರ ಮಠದ ಪ್ರಶಸ್ತಿ, ಇನ್ನು ಅನೇಕ ಪ್ರಶಸ್ತಿಗಳು ಲಭಿಸಿವೆ.

ರಾಜ್ಯ, ದೇಶ ಹಾಗೂ ಹೊರದೇಶಗಳಲ್ಲೂ ನೃತ್ಯ ಶಿಕ್ಷಕರಾಗಿ ಕಲಾವಿದರಾಗಿ ಮಿಂಚಿ ಅನೇಕ ಶಿಷ್ಯರನ್ನು ರಂಗಕ್ಕೆ ನೀಡಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅವರ ಹಿರಿಯ ಶಿಷ್ಯರಾಗಿ ಪ್ರತಿಮಾ ಶ್ರೀಧರ್, ಸೌಮ್ಯ ಸುಧೀಂದ್ರ,ಬೆಂಗಳೂರಿನಲ್ಲಿ ಸರಿತಾ ಕೊಟ್ಟಾರಿ ಇನ್ನು ಅನೇಕ ಶಿಷ್ಯರು ಭರತನಾಟ್ಯವನ್ನು ಕಲಿಸುತ್ತಿದ್ದಾರೆ. ಕಮಲಾ ಭಟ್ ರವರು ಗುರು ಉಳ್ಳಾಲ ಮೋಹನ್ ಕುಮಾರರ ಶಿಷ್ಯರಾಗಿ ಗಮನ ಸೆಳೆದವರು. ತಮ್ಮ ಸಂಸ್ಥೆಯಿಂದ ರಾಜ್ಯದ ಪ್ರತಿಷ್ಠಿತ ವೇದಿಕೆಗಳಲ್ಲಿ ಸಾವಿರಾರು ನೃತ್ಯ ಕಾರ್ಯಕ್ರಮಗಳನ್ನು ನೀಡಿ ಪ್ರಶಂಸೆಗೆ ಪಾತ್ರರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next