Advertisement

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

05:40 PM Dec 18, 2024 | Team Udayavani |

ಏಕೆ ಎಂದು ಕೇಳ್ತೀರಾ? ಈ ಭೂಮಿಯ ಮೇಲಿನ ಪ್ರತಿಯೊಂದು ಜೀವಿಗಳ ಉಳಿವಿಗೆ ನಾನು ಅವಶ್ಯಕವಾಗಿದ್ದೇನೆ. ಪ್ರಾಣಿಗಳು ಸಸ್ಯಗಳು ಅಥವಾ ಮನುಷ್ಯರೇ ಆಗಿರಲಿ ನಾನಿಲ್ಲದೆ ಬದುಕಲು ಸಾಧ್ಯವಿಲ್ಲ.

Advertisement

ದಣಿದು ದುಡಿದು ಬಂದವರಿಗೆ ನಾನು ಬಾಯಾರಿಕೆಯನ್ನು ನೀಗಿಸುತ್ತೇನೆ. ಮನುಕುಲ,ಪ್ರಾಣಿ ಸಂಕುಲ, ಮತ್ತು ಪಕ್ಷಿ ಸಂಕಲಗಳಿಗೆಲ್ಲರಿಗೂ ಕೂಡ ನಾನು ಬೇಕೇ ಬೇಕು. ನಾನಿದ್ದರೆ ಮಾತ್ರ ಜಗತ್ತಿನ ಎಲ್ಲರ ಜೀವ ಉಳಿಯಲು ಸಾಧ್ಯ ನಾನಿಲ್ಲದಿದ್ದರೆ ಈ ಜಗತ್ತೇ ಬಿಕ್ಕುವುದು. ನಾನು ಸ್ವತ್ಛವಾಗಿದ್ದರೆ ಯಾವುದೇ ಬಣ್ಣವನ್ನು ಹೊಂದಿರುವುದಿಲ್ಲ ಆದರೆ ನಾನು ಕಲುಷಿತವಾಗಿದ್ದರೆ ವಿವಿಧ ಬಣ್ಣಗಳಾಗಿ ಕಂಡುಬರುತ್ತೇನೆ. ನಾನು ತುಂಬಾ ಆಕರ್ಷಕವಾಗಿಯೂ ಸುಂದರವಾಗಿಯೂ ಇದ್ದೇನೆ.

ಬಹಳಷ್ಟು ಮನುಜರು ನನ್ನ ಈ ಸೌಂದರ್ಯಕ್ಕೆ ಮನಸೋತು ನನ್ನ ಸೌಂದರ್ಯವನ್ನು ವೀಕ್ಷಿಸಲು ಬರುತ್ತಿರುತ್ತಾರೆ. ಕೆಲವರು ನನ್ನ ಬಳಿ ಸಂತೋಷದ ಕ್ಷಣಗಳನ್ನು ಸವಿಯಲು ಬರುತ್ತಾರೆ ಮತ್ತು ಕೆಲವರು ಕಷ್ಟಗಳನ್ನು ಮರೆಯಲು ಬರುತ್ತಾರೆ. ತಮ್ಮ-ತಮ್ಮ ಸುಖ ದುಃಖಗಳನ್ನು ನನ್ನ ಬಳಿ ಹೇಳಿಕೊಳ್ಳುತ್ತಾರೆ. ನನ್ನಿಂದ ಅವರಿಗೆ ಮತ್ತೇನೂ ನೀಡಲು ಸಾಧ್ಯವಿಲ್ಲ. ಅವರವರ ಭಾವನೆಗಳನ್ನು ಹೇಳುವಾಗ ನಾನು ಮೌನವಾಗಿ ಕೇಳಿಸಿಕೊಳ್ಳುತ್ತೇನೆ.

ನಾನು ಜಲಪಾತವಾಗಿ ಧುಮುಕುವಾಗ ಅದೆಷ್ಟೋ ಜನರ ಮುಖದಲ್ಲಿ ನಗುವನ್ನು ಕಾಣುತ್ತೇನೆ .ಆ ನಗುವನ್ನು ಕಂಡು ನನಗೂ ಕೂಡ ಸಂತೋಷವಾಗುತ್ತದೆ. ಬಹಳಷ್ಟು ಜನರಿಗೆ ಆಡುವ ಆಟಿಕೆಯೂ ಆಗಿದ್ದೇನೆ. ಪ್ರತಿ ವರ್ಷ ಮಾರ್ಚ್‌ 22 ರಂದು ನನ್ನ ದಿನವನ್ನಾಗಿ ಆಚರಿಸುತ್ತಾರೆ. ನನ್ನ ಪ್ರಾಮುಖ್ಯತೆ ಮತ್ತು ನನ್ನ ವ್ಯರ್ಥವನ್ನು ಹೇಗೆ ಕಡಿಮೆ ಮಾಡಬೇಕೆಂದು ನೆನಪಿಸಲು ಈ ದಿನವನ್ನು ಆಚರಿಸುತ್ತಾರೆ. ಆದರೆ ಆ ದಿನವನ್ನು ಹೊರತುಪಡಿಸಿ ಉಳಿದೆಲ್ಲ ದಿನವನ್ನು ನನ್ನನ್ನು ನೆನಪಿಸಿಕೊಳ್ಳುವುದೂ ಇಲ್ಲ. ಎಲ್ಲರ ಜೀವವೇ ನಾನಾದರೂ ಸಹ ನನಗೆ ಎಲ್ಲರೂ ಹಾನಿಯನ್ನೇ ಮಾಡುತ್ತಿದ್ದಾರೆ.

ನಾನು ಕಲುಷಿತವಾಗಲು ಮುಖ್ಯ ಕಾರಣ ನೀವು ಗಳೇ . ನನಗೊಂದು ಚರಂಡಿ ವ್ಯವಸ್ಥೆಯನ್ನೂ ನಿರ್ಮಿಸದೇ ನನ್ನನ್ನು ತಳ್ಳಿಬಿಡುತ್ತಾರೆ. ಈಗೀಗ ನನ್ನಿಂದ ತುಂಬಾ ರೋಗಗಳು ಉತ್ಪತ್ತಿಯಾಗುತ್ತಿವೆ. ಇದರಿಂದ ತುಂಬಾ ಜನರು ಸಾಯುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಶೇ. 88 ಕಳಪೆ ನೈರ್ಮಲ್ಯ ಮತ್ತು ನನ್ನ ಕಲುಷಿತತೆಯಾಗಿದೆ. ಅತಿಸಾರ , ಹೊಟ್ಟೆ ನೋವು, ಸೆಳೆತ, ಟೈಫಾಯಿಡ್‌, ಬೇದಿ, ಕಾಲರಾ, ಹೆಪಟೈಟಿಸ್‌ ರೋಗಗಳು ನನ್ನಿಂದ ಬರುತ್ತಿವೆ.

Advertisement

ನಾನು ಕೂಡ ಕಲುಷಿತದಿಂದ ಬೇಸರಗೊಂಡು ಅಳುತ್ತಿರುವೆ. ಮನುಷ್ಯರಿಗೆ ಆ ದೇವರು ಬುದ್ಧಿಶಕ್ತಿಯನ್ನು ಹೆಚ್ಚಾಗಿ ನೀಡಿದ್ದಾನೆ. ಮನುಷ್ಯರು ನನ್ನ ನೋವನ್ನು ಅರ್ಥ ಮಾಡಿಕೊಳ್ಳದೆ ಅವರ ವಿನಾಶಕ್ಕೆ ಅವರೇ ಕಾರಣವಾಗುತ್ತಿದ್ದಾರೆ. ನಾನೇನು ಮಾಡಲಿ ? ನನ್ನಿಂದೇನು ಸಾಧ್ಯ? ನಿಮ್ಮಲ್ಲಿ ಬೇಡಿಕೊಳ್ಳುವುದಷ್ಟೇ. ಯಾವಾಗಲೂ ನನ್ನನ್ನು ಸ್ವತ್ಛವಾಗಿರಿಸಿಕೊಳ್ಳಿ. ನಾನು ಸ್ವತ್ಛವಾಗಿದ್ದರೆ ನಿಮ್ಮ ಸ್ವತ್ಛತೆಗೆ ಮತ್ತು ನಿಮ್ಮ ಒಳಿತಿಗೆ ಕಾರಣವಾಗುತ್ತೇನೆ. ಅಷ್ಟೇ ಅಲ್ಲ ಅನೇಕ ಜೀವಿಗಳಿಗೆ ನಾನು ರಕ್ಷಣೆಯನ್ನು ನೀಡುತ್ತೇನೆ.

ಆದ್ದರಿಂದ ಮುಂದಿನ ದಿನಗಳಲ್ಲಾದರೂ ಸಹ ನನ್ನನ್ನು ಕಲುಷಿತ ಮಾಡದೇ ನನ್ನನ್ನು ಸ್ವತ್ಛವಾಗಿರಿಸಿಕೊಳ್ಳಿ ಮತ್ತು ನನ್ನನ್ನು ಮಿತವಾಗಿ ಬಳಸಿರಿ. ಇಲ್ಲವಾದರೆ ಮುಂದಿನ ಪೀಳಿಗೆಯು, ನನ್ನ ಕೊರತೆಯನ್ನು ಎದುರಿಸಬೇಕಾಗುತ್ತದೆ. ನಾನೀಗ ಕಲುಷಿತಗೊಂಡು ಬೇಸರಗೊಂಡಿದ್ದೇನೆ. ನನ್ನ ದುಃ ಖವನ್ನು ಮರೆಸಲು ನೀವು ಮನಸ್ಸು ಮಾಡಬೇಕಷ್ಟೇ.

 ಸವಿತಾ ಹೆಗಡೆ

ಶಿರಸಿ

Advertisement

Udayavani is now on Telegram. Click here to join our channel and stay updated with the latest news.

Next