Advertisement
ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಪಕ್ಷದ ವಿಪ್ ಉಲ್ಲಂ ಸಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಇದು ರಾಜಕೀಯ ಚರ್ಚೆಯನ್ನು ಹುಟ್ಟು ಹಾಕಿದೆ.
Related Articles
– ಕೆ.ವಿ. ಧನಂಜಯ, ಸುಪ್ರೀಂಕೋರ್ಟ್ ವಕೀಲ
Advertisement
ಸಾಧ್ಯಾಸಾಧ್ಯತೆ?ಬಿಜೆಪಿ
ಪಕ್ಷದ ವಿಪ್ ಉಲ್ಲಂ ಸುವ ಮೂಲಕ ಪಕ್ಷದ ವಿರೋಧಿ ನಡೆ ಅನುಸರಿಸಿದ್ದಾರೆ. ಪಕ್ಷದ ಶಿಸ್ತನ್ನು ಉಲ್ಲಂ ಸುವ ಮೂಲಕ ಸ್ವ ಇಚ್ಛೇಯಿಂದ ಪಕ್ಷವನ್ನು ತ್ಯಜಿಸಿದ್ದಾರೆ. ಆದ್ದರಿಂದ ಸಂವಿಧಾನದ ಅನುಚ್ಛೇದ 10ರಡಿ ಕ್ರಮ ಕೈಗೊಳ್ಳಬೇಕು ಎಂದು ಸ್ಪೀಕರ್‌ಗೆ ದೂರು ಕೊಡಬಹುದು. ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಎಸ್.ಟಿ. ಸೋಮಶೇಖರ್ ಅವರಿಗೆ ಶೋಕಾಸ್ ನೋಟಿಸ್ ಕೊಟ್ಟು, ಅವರಿಂದ ಸ್ಪಷ್ಟನೆ ಪಡೆದುಕೊಂಡ ಬಳಿಕ ಮುಂದಿನ ಕ್ರಮ ಕೈಗೊಳ್ಳಬಹುದು. ಬಹುತೇಕ ಪಕ್ಷದಿಂದ ಉಚ್ಚಾಟಿಸುವ ಹಾದಿಯಲ್ಲಿ ಬಿಜೆಪಿ ಸಾಗುವ ಸಾಧ್ಯತೆಯೇ ಹೆಚ್ಚು. ಸ್ಪೀಕರ್
ರಾಜ್ಯಸಭೆ ಚುನಾವಣೆ ಸದನದ ಒಳಗಿನ ನಡಾವಳಿ ಅಲ್ಲ. ವಿಪ್ ಉಲ್ಲಂಘನೆ ಸಂವಿಧಾನದ ಅನುಚ್ಛೇದ 10ರ ವ್ಯಾಪ್ತಿಗೆ ಬರುವುದಿಲ್ಲ ಎಂದು ನೇರವಾಗಿ ಬಿಜೆಪಿ ದೂರನ್ನು ತಿರಸ್ಕರಿಸಬಹುದು. ಒಂದೊಮ್ಮೆ ಪ್ರಕರಣ ಸಂವಿಧಾನದ ಅನುಚ್ಛೇದ 10ರ ವ್ಯಾಪ್ತಿಗೆ ಬರಲಿದೆ ಎಂದು ಕಾನೂನಾತ್ಮಕವಾಗಿ ಮನದಟ್ಟಾದರೆ ಸ್ಪೀಕರ್ ಅವರು ಎಸ್.ಟಿ. ಸೋಮಶೇಖರ್ ಅವರಿಗೆ ನೋಟಿಸ್ ಕೊಟ್ಟು ವಿಚಾರಣೆಗೆ ಕರೆಯಬಹುದು. ಸೋಮಶೇಖರ್ ಕೊಟ್ಟ ಉತ್ತರ ಸಮಂಜಸವಾಗಿದ್ದರೆ ಬಿಜೆಪಿ ಕೊಟ್ಟ ದೂರು ತಿರಸ್ಕರಿಸಬಹುದು. ಅದೇ ರೀತಿ ವಿಚಾರಣೆಯನ್ನು ಸುದೀರ್ಘ ಕಾಲ ಮುಂದುವರಿಸಬಹುದು. ಸ್ಪೀಕರ್ ತೀರ್ಮಾನದ ಬಳಿಕವಷ್ಟೇ ನ್ಯಾಯಾಲಯದ ಮೊರೆ ಹೋಗಲು ಅವಕಾಶವಿದೆ. ದೂರನ್ನು ತ್ವರಿತ ವಿಚಾರಣೆ ಮಾಡುವಂತೆ ಸ್ಪೀಕರ್‌ಗೆ ನಿರ್ದೇಶನ ನೀಡುವಂತೆ ದೂರು ಕೊಟ್ಟವರು ನ್ಯಾಯಾಲಯಕ್ಕೆ ಅರಿಕೆ ಮಾಡಿಕೊಳ್ಳಲೂಬಹುದು. ಎಸ್.ಟಿ. ಸೋಮಶೇಖರ್
ರಾಜ್ಯಸಭೆ ಚುನಾವಣೆ ಸದನದ ಒಳಗಿನ ನಡಾವಳಿ ಅಲ್ಲ. ರಾಜ್ಯಸಭೆ ಚುನಾವಣೆಗೆ ವಿಪ್ ಜಾರಿಗೇ ಅವಕಾಶ ಇಲ್ಲದಿರುವಾಗ ಅದರ ಉಲ್ಲಂಘನೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅಡ್ಡ ಮತದಾನ ಮಾಡಿದ್ದಕ್ಕೆ ವಿಪ್ ಉಲ್ಲಂಘನೆ ಆರೋಪದಲ್ಲಿ ಅನರ್ಹಗೊಳಿಸಲು ಅವಕಾಶವಿಲ್ಲ. ನಾನು ಪಕ್ಷ ಬಿಟ್ಟಿಲ್ಲ, ಶಾಸಕ ಸ್ಥಾನವನ್ನೂ ತ್ಯಜಿಸಿಲ್ಲ. ಪಕ್ಷ ಸೂಚಿಸಿದ ಅಭ್ಯರ್ಥಿ ಸೂಕ್ತ’ವಲ್ಲದ ಕಾರಣಕ್ಕೆ ನನ್ನ ಆತ್ಮಸಾಕ್ಷಿಗೆ ತಕ್ಕಂತೆ ಇನ್ನೊಂದು ಪಕ್ಷದ ಅಭ್ಯರ್ಥಿಗೆ ಮತ ಹಾಕಿದ್ದೇನೆ. ಈ ಸ್ವಾತಂತ್ರ್ಯವನ್ನು ಅನುಚ್ಛೇದ 10 ನನ್ನಿಂದ ಕಸಿದುಕೊಂಡಿಲ್ಲ ಎಂದು ಎಸ್.ಟಿ. ಸೋಮಶೇಖರ್ ಪ್ರತಿಪಾದಿಸಬಹುದು. ಚುನಾವಣೆಗೆ ನಿಲ್ಲುವ ಎಲ್ಲರೂ ಗೆಲ್ಲುತ್ತೇವೆ ಎಂದೇ ಹೇಳುವುದು, ಯಾರೂ ಸೋಲುತ್ತೇವೆ ಎಂದು ಹೇಳುವುದಿಲ್ಲ. ಆದರೆ, ಜೆಡಿಎಸ್ ಅಭ್ಯರ್ಥಿಗೆ ಎಷ್ಟು ಬೇಕೋ ಅಷ್ಟು ಮತಗಳಿಲ್ಲ. ಆದರೂ ಅಭ್ಯರ್ಥಿಯನ್ನು ನಿಲ್ಲಿಸಿದ್ದರು. ಜೆಡಿಎಸ್‌ಗೆ ಆತ್ಮ ಎಲ್ಲಿದೆ? ಆತ್ಮಸಾಕ್ಷಿ ಎಲ್ಲಿದೆ? ಸಾಲದ್ದಕ್ಕೆ ನಮ್ಮ ಶಾಸಕರಿಗೆ ಬೆದರಿಕೆ ಹಾಕಿದ್ದವರ ವಿರುದ್ಧ ಎಫ್ಐಆರ್ ಕೂಡ ಆಗಿದೆ. ಅಡ್ಡಮತದಾನ ಏನಿದ್ದರೂ ಬಿಜೆಪಿಯಲ್ಲಿ ಮಾತ್ರ ಸಾಧ್ಯ. ತಮ್ಮ ಶಾಸಕರನ್ನು ಭದ್ರವಾಗಿ ಇಟ್ಟುಕೊಳ್ಳಬೇಕಿತ್ತು.
– ಸಿದ್ದರಾಮಯ್ಯ, ಮುಖ್ಯಮಂತ್ರಿ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿರುವುದು ಅಕ್ಷಮ್ಯ ಅಪರಾಧ. ಅಡ್ಡ ಮತದಾನ ಮಾಡಿರುವವರ ವಿರುದ್ಧ ಬಿಜೆಪಿ ಕ್ರಮ ಕೈಗೊಳ್ಳಲಿದೆ. ಅವರು ಬೇರೆ ಪಕ್ಷಕ್ಕೆ ಸೇರುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡೋಣ. ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ನಾವೆಲ್ಲ ಕೂಡಿ ಚರ್ಚಿಸಿ ತೀರ್ಮಾನ ಮಾಡಿ ಕ್ರಮ ವಹಿಸುತ್ತೇವೆ.
-ಪ್ರಹ್ಲಾದ ಜೋಶಿ, ಕೇಂದ್ರ ಸಚಿವ 1969ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ತಮ್ಮ ಕೈಗೊಂಬೆಯನ್ನು ರಾಷ್ಟ್ರಪತಿ ಮಾಡಲು ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾಗಿದ್ದ ನೀಲಂ ಸಂಜೀವರೆಡ್ಡಿ ವಿರುದ್ಧ ವಿ.ವಿ. ಗಿರಿ ಅವರನ್ನು ಕಣಕ್ಕಿಳಿಸಿ ಆತ್ಮಸಾಕ್ಷಿ ಮತ ಹಾಕುವಂತೆ ಕರೆ ನೀಡಿದ್ದರು. ಅಂದು ನೀಲಂ ಸಂಜೀವರೆಡ್ಡಿ ಸೋತಿದ್ದರು. ಅಡ್ಡಮತದಾನಗಳ ಜನಕ ಕಾಂಗ್ರೆಸ್. ಆತ್ಮಸಾಕ್ಷಿಯ ಮತವೆಂದರೆ ಅಡ್ಡಮತದಾನವೇ? ಇಂದು ಕಾಂಗ್ರೆಸ್ ಗೆದ್ದಿರುವುದು ಆತ್ಮಸಾಕ್ಷಿಯ ಮತದಿಂದಲ್ಲ, ಅಡ್ಡಮತದಾನದಿಂದ.
– ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಹೆಬ್ಬಾರ್ ಮತದಾನ ಮಾಡಿಲ್ಲ ಎಂಬುದು ನನಗೆ ಗೊತ್ತಿಲ್ಲ. ತಪ್ಪುಗಳು ಕಂಡು ಬಂದಲ್ಲಿ ಪಕ್ಷದ ಹಿರಿಯ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ. ಸೋಮಶೇಖರ್ ಅವರಿಗೆ ಸಮಾಧಾನ ಪಡಿಸುವ ಪ್ರಯತ್ನ ನಡೆಸಲಾಗಿತ್ತು. ಆದರೂ ಅವರು ಸಮಾಧಾನಗೊಂಡಿಲ್ಲ. ಅವರ ಹೇಳಿಕೆ ಅನುದಾನ ಯಾರು ಕೊಡುತ್ತಾರೆ ಅವರ ಪರ ಎನ್ನುವ ರೀತಿ ಇದೆ.
-ಬಿ.ವೈ.ರಾಘವೇಂದ್ರ ಸಂಸದ ಕಳೆದ ಐದಾರು ಬಾರಿ ಪಕ್ಷ ಹೇಳಿದಂತೆ ಕೇಳಿದ್ದೇನೆ. ರಾಜ್ಯಸಭಾ ಚುನಾವಣೆಗೆ ನಿಂತಾಗ, ಗೆದ್ದರೆ ಅನುದಾನ ಕೊಡುವುದಾಗಿ ಭರವಸೆ ಕೊಡುತ್ತಾರೆ. ಆದರೆ ಚುನಾವಣೆ ಅನಂತರ ನಮ್ಮ ಕೈಗೇ ಸಿಗುವುದಿಲ್ಲ. ಹೀಗಾಗಿ ನನ್ನ ಬೇಡಿಕೆ ಈಡೇರಿಸುವ ಗಟ್ಟಿ ಭರವಸೆ ಕೊಟ್ಟವರಿಗೆ ಆತ್ಮಸಾಕ್ಷಿಗೆ ಅನುಗುಣವಾಗಿ ನನ್ನ ಮತವನ್ನು ಹಾಕಿದ್ದೇನೆ.
-ಎಸ್.ಟಿ.ಸೋಮಶೇಖರ್, ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಪಕ್ಷದಿಂದ ಗೆದ್ದು, ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದು ರಾಜಕೀಯ ವ್ಯಭಿಚಾರ. ಪಕ್ಷ ಇದನ್ನು ಸಹಿಸಲು ಸಾಧ್ಯವಿಲ್ಲ. ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು.
-ಸಿ.ಟಿ.ರವಿ ಮಾಜಿ ಸಚಿವ