-ಸೌಮ್ಯಾ, ಮಂಗಳೂರು
ಮಿಲನಕ್ರಿಯೆಯ ನಂತರ ಜನನಾಂಗದಿಂದ ಸ್ವಲ್ಪ ಮಟ್ಟಿಗೆ ವೀರ್ಯ ಹೊರಗೆ ಸುರಿಯುತ್ತದೆ. ಗರ್ಭಕೋಶ ಎಲ್ಲ ವೀರ್ಯವನ್ನು ಹೀರಿಕೊಳ್ಳುವುದಿಲ್ಲ. ನಿಮ್ಮ ಪತಿಯ ವೀರ್ಯದಲ್ಲಿ ವೀರ್ಯಾಣುಗಳ ಸಂಖ್ಯೆ, ಚಲನೆ ಸರಿ ಇದ್ದರೆ ವೀರ್ಯಾಣುಗಳ ಚಲನೆಯಿಂದ ಗರ್ಭಕೋಶ ದೊಳಗೆ ಸೇರಿ ನಿಮಗೆ ಮಗು ಆಗುತ್ತಿಲ್ಲ ಎಂದಾದರೆ, ನೀವು ಹಾಗೂ ನಿಮ್ಮ ಪತಿ, ಎಲ್ಲ ಬಗೆಯ ಪರೀಕ್ಷೆಗಳನ್ನು ಮಾಡಿಸುವುದು ಒಳಿತು. ಯಾವುದಕ್ಕೂ ತಜ್ಞವೈದ್ಯರ ಸಲಹೆ ಪಡೆಯಿರಿ.
Advertisement
ನನಗೆ 21 ವರ್ಷ. ಸುಮಾರು ಒಂದು ವರ್ಷದಿಂದ ಒಬ್ಬಳೇ ಇದ್ದಾಗ ಲೈಂಗಿಕ ಆಸಕ್ತಿ ಬರುತ್ತದೆ. ಲೈಂಗಿಕ ಕಥೆಗಳನ್ನು ಓದಬೇಕು ಮತ್ತು ಲೈಂಗಿಕ ವೀಡಿಯೊಗಳನ್ನು ನೋಡಬೇಕೆನಿಸುತ್ತದೆ, ಮನಸ್ಸನ್ನು ಎಷ್ಟೇ ನಿಯಂತ್ರಿಸಲು ಪ್ರಯತ್ನಿಸುತ್ತಿದ್ದರೂ ಸಾಧ್ಯವಾಗುತ್ತಿಲ್ಲ. ವೀಡಿಯೋಗಳನ್ನು ನೋಡಿದಾಗ ನಾನೂ ಲೈಂಗಿಕ ಕ್ರಿಯೆಯಲ್ಲಿ ತೊಡಗಬೇಕೆನಿಸುತ್ತದೆ. ಇದರಿಂದಾಗಿ ನಾನು ತುಂಬಾ ಸಲ ಹಸ್ತಮೈಥುನ ಮಾಡಿಕೊಂಡು ತೃಪ್ತಿಪಟ್ಟಿದ್ದೇನೆ. ಆದರೆ, ಹಸ್ತಮೈಥುನದ ನಂತರ ನನ್ನಲ್ಲಿ ತಪ್ಪಿತಸ್ಥ ಭಾವ ಕಾಡುತ್ತದೆ. ಹೆಣ್ಣು ಮಕ್ಕಳಿಗೆ ಮನಸ್ಸನ್ನು ಹತೋಟಿಯಲ್ಲಿ ಇಡುವುದು ಸುಲಭ ಎಂದು ಒಮ್ಮೆ ನೀವೇ ಹೇಳಿದ್ದಿರಿ. ಆದರದು ನನಗೆ ಸಾಧ್ಯವಾಗುತ್ತಿಲ್ಲ. ಹೆಣ್ಣಾಗಿ ನಾನು ಮಾಡುತ್ತಿರುವುದು ತಪ್ಪೇನೋ ಅನ್ನೋ ಭಾವನೆ ಅತಿಯಾಗಿ ಕಾಡುತ್ತಿದೆ. ಇದರಿಂದ ನನಗೆ ಕೆಲಸದಲ್ಲಿ ಮತ್ತು ಬೇರೆಲ್ಲೂ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನನ್ನ ಬಗ್ಗೆ ನನಗೇ ಅಸಹ್ಯವಾಗುತ್ತಿದೆ. ಆದರೆ ಲೈಂಗಿಕ ಬಯಕೆಯನ್ನು ನಿಯಂತ್ರಿಸಲು ಆಗುತ್ತಿಲ್ಲ, ದಯವಿಟ್ಟು ನನ್ನ ಸಮಸ್ಯೆಗೆ ಪರಿಹಾರ ತಿಳಿಸಿ ಮತ್ತು ಹೆಣ್ಣು, ಹಸ್ತಮೈಥುನ ಮಾಡಿಕೊಳ್ಳುವುದರಿಂದ ಏನಾದರೂ ತೊಂದರೆ ಇದೆಯೇ ಎಂದು ತಿಳಿಸಿ.-ಸೀಮಾ, ಬೆಂಗಳೂರು
ಸ್ತ್ರೀಯರಲ್ಲೂ ಬಹಳಷ್ಟು ಜನ ಹಸ್ತಮೈಥುನ ಮಾಡಿಕೊಳ್ಳುತ್ತಾರೆ. ಅದು ಅಪರಾಧವಲ್ಲ. ಅದು ಲೈಂಗಿಕ ಉದ್ರೇಕವನ್ನು ಹೊರಹಾಕುವ ಒಂದು ಮಾರ್ಗವಷ್ಟೆ. ಅದರಿಂದ ತೊಂದರೆಯಿಲ್ಲ. ಅಷ್ಟೊಂದು ಆತಂಕ, ಭಯ ಬೇಡ. ನಿಮ್ಮ ಮನಸ್ಸನ್ನು ಬೇರೆಡೆಗೆ ತಿರುಗಿಸಿ. ಒಬ್ಬರೇ ಇರುವ ಸಮಯವನ್ನು ಬಾರದ ಹಾಗೆ ಮಾಡಬೇಕು. ಹೆಣ್ಣು ಹಸ್ತಮೈಥುನ ಮಾಡಬಾರವೆಂದೇನೂ ಇಲ್ಲ, ಮನಸ್ಸನ್ನು ಆದಷ್ಟು ಹಿಡಿತದಲ್ಲಿಟ್ಟುಕೊಳ್ಳಲು ಪ್ರಯತ್ನಿಸಿ.
-ಹರೀಶ್, ಕುಂದಾಪುರ
ಹಸ್ತಮೈಥುನದ ಸಮಯದಲ್ಲಿ, ಮದುವೆಯಾದ ಹೊಸತರಲ್ಲಿ ಶೀಘ್ರಸ್ಖಲನವಾಗುವುದು ಬಹಳ ಸಾಮಾನ್ಯ. ಬಹಳ ಕಡಿಮೆ ಅಂತರದಲ್ಲಿ ಸ್ಖಲನವಾದಾಗ ವೀರ್ಯದ ಪ್ರಮಾಣ ಕಡಿಮೆ ಇರುತ್ತದೆ. ಅದರಿಂದ ತೊಂದರೆ ಇಲ್ಲ. ನೀವು ಮದುವೆ ಮಾಡಿಕೊಳ್ಳಲು ಕೂಡಾ ತೊಂದರೆ ಏನೂ ಇಲ್ಲ. ಮದುವೆಯ ನಂತರ ಸಮಸ್ಯೆ ಇದ್ದರೆ ಲೈಂಗಿಕ ತಜ್ಞರನ್ನು ಭೇಟಿಯಾಗಿ. ನನ್ನ ವಯಸ್ಸು 24. ಕಳೆದ 10- 14 ವರ್ಷಗಳಿಂದ ಮೊಡವೆಯ ನೋವು ತಿಂದು ಸುಸ್ತಾಗಿದ್ದೇನೆ. ತುಂಬಾ ದೊಡ್ಡ ಗಾತ್ರದ ಮೊಡವೆಗಳು ಮುಖ, ತಲೆ ಹಾಗೂ ಬೆನ್ನಿನ ಮೇಲೆ ಕೂಡ ಇವೆ. ನನ್ನ ಮುಖ ನೋಡಿದವರೆಲ್ಲ ಏನಾದರೊಂದು ಔಷಧಿ ಹೇಳುತ್ತಿದ್ದರು. ಆದರೆ, ಈಗ ಎರಡು ವರ್ಷಗಳಿಂದ ಯಾರೂ ಏನೂ ಹೇಳುತ್ತಿಲ್ಲ. ಕಾರಣ ಈಗ ನನ್ನ ಮುಖದಲ್ಲಿ ಮೊಡವೆಗಳಿಲ್ಲ. ವೈದ್ಯರು Doxy 1 ಮಾತ್ರೆ ಹಾಗೂ ಯಾವುದೋ ಕ್ರೀಮ್ ಕೊಟ್ಟಿದ್ದರು. ಕ್ರೀಮ್ ಮುಗಿದ ನಂತರ ಮಾತ್ರೆಯನ್ನು ದಿನಾಲೂ ತೆಗೆದುಕೊಳ್ಳುತ್ತಿದ್ದೇನೆ. ಒಂದು ವಾರ ನಿಲ್ಲಿಸಿದರೂ ಮತ್ತೆ ಶುರುವಾಗುತ್ತದೆ. ನನ್ನ ಸಮಸ್ಯೆ ಎಂದರೆ, Doxy 1 ಮಾತ್ರೆ ತಿನ್ನುವುದರಿಂದ ಬೇರೇನಾದರೂ ಸಮಸ್ಯೆ ಉಂಟಾಗುತ್ತದೆಯೇ. ಇದರಿಂದ ನನಗೆ ಲೈಂಗಿಕತೆಯಲ್ಲಿ ಆಸಕ್ತಿ ಕಡಿಮೆಯಾಗಿದೆ. ಏಕೆಂದರೆ ನನ್ನ ಜನನಾಂಗ ಮೊದಲಿನಂತೆ ನಿಮಿರುವುದಿಲ್ಲ. ದಯವಿಟ್ಟು ಪರಿಹಾರ ತಿಳಿಸಿ.
-ದಿನೇಶ್, ಮುಂಬಯಿ
ಒಂದು ವಯಸ್ಸಿನಲ್ಲಿ ಮೊಡವೆಗಳು ಬರುವುದು ಸಹಜ. ಮುಖವನ್ನು ಆಗಾಗ ಸೋಪು ನೀರಿನಲ್ಲಿ ತೊಳೆದುಕೊಳ್ಳುತ್ತಿರಿ. ಮೊಡವೆಗಳನ್ನು ಕೀಳಲು ಹೋಗಬೇಡಿ. ಹಾಗೆಯೇ Doxy ಮಾತ್ರೆಗಳನ್ನು ಪ್ರತಿನಿತ್ಯ ತೆಗೆದುಕೊಳ್ಳುತ್ತ ಇರಬಾರದು. ಅದರಿಂದ ನಿಮ್ಮ ರಕ್ತದ ಮೇಲೆ ಪರಿಣಾಮ ಬೀರಿ ತೊಂದರೆಯುಂಟಾಗಬಹುದು. ನಿಮ್ಮ ದಿನನಿತ್ಯದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ನಿಮಿರು ದೌರ್ಬಲ್ಯ ತಾತ್ಕಾಲಿಕವಾಗಿ ಆಗಿರಬಹುದು. ಅದು ಹಾಗೆಯೇ ಉಳಿದರೆ ನುರಿತ ಲೈಂಗಿಕ ತಜ್ಞರಿಂದ ಚಿಕಿತ್ಸೆ ಪಡೆದುಕೊಳ್ಳಿ.
Related Articles
Advertisement