Advertisement

ಹೆಚ್ಚಿನ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಸಾಮಾನ್ಯ

04:35 AM Feb 20, 2019 | |

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾ.ಪಂ. ವ್ಯಾಪ್ತಿಯ ತಾಳಿಪಾಡಿ ಗುತ್ತು ಹತ್ತಿರ ಹಿಲ್‌ಟಾಪ್‌, ಗುತ್ತಕಾಡು, ಅಪ್ಪನ್‌ ಕೋಡಿ ಹೊಸಕಾವೇರಿಯ ಸಹಿತ ಕೆಲವು ಭಾಗದಲ್ಲಿ ಈಗಾಗಲೇ ನೀರಿನ ಸಮಸ್ಯೆ ಆರಂಭವಾಗಿದೆ. ವಾರದಲ್ಲಿ ಎರಡು, ಮೂರು ಸಲ ನೀರು ಸರಬರಾಜು ಆಗುತ್ತಿದೆ. ಇಲ್ಲಿನ ಕಿನ್ನಿಗೋಳಿಯಲ್ಲಿ ಕೊಳೆವೆ ಬಾವಿ ಮೂಲಕ ನೀರು ಸರಬರಾಜು ಆಗುತ್ತಿದ್ದು, ತೆರೆದ ಬಾವಿಗಳು ಕಡಿಮೆ. ಈ ವರ್ಷ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಕಿನ್ನಿಗೋಳಿ ವ್ಯಾಪ್ತಿಯ ಸುಮಾರು 4 ಒವರ್‌ ಟ್ಯಾಂಕ್‌ಗಳಿಗೆ ನೀರು ತುಂಬಿಸಲಾಗಿದೆ. ಆದರೆ ಪದೇ ಪದೇ ಪೈಪ್‌ಲೈನ್‌ ಹಾಳಾಗುವುದರಿಂದ ನೀರಿನ ಸಮಸ್ಯೆ ಉಲ್ಬಣಿಸುತ್ತದೆ.

Advertisement

ಎತ್ತರದ ಪ್ರದೇಶವಾದ ತಾಳಿಪಾಡಿಗುತ್ತು ಹಿಲ್‌ಟಾಪ್‌ ಅಪ್ಪನ್‌ಕೋಡಿಗೆ ಡಿಸೆಂಬರ್‌
ಅಂತ್ಯದವರೆಗೆ ಕೊಳವೆಬಾವಿ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ, ಜನವರಿ
ಅನಂತರ ಕೊಳವೆ ಬಾವಿಯಲ್ಲಿಯೂ ನೀರು ಇಲ್ಲವಾದರಿಂದ ಟ್ಯಾಂಕರ್‌ ಮೂಲಕ ಸರಬರಾಜುಮಾಡಬೇಕಾಗುತ್ತೆ ಎಂದು ಗ್ರಾ. ಪಂ. ಮೂಲಗಳು ತಿಳಿಸಿವೆ. ಪ್ರಮುಖ 4 ಓವರ್‌ ಟ್ಯಾಂಕ್‌ಗಳನ್ನು ಹೊರತುಪಡಿಸಿ, ಉಳಿದ ಟ್ಯಾಂಕ್‌ಗಳಿಗೆ ಪಂಚಾಯತ್‌ ಕೊಳವೆ ಬಾವಿ ಹಾಗೂ 2 ತೆರೆದ ಬಾವಿ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

ಮೂರು ಹೊಸ ಕಿಂಡಿ ಅಣೆಕಟ್ಟು ನಿರ್ಮಾಣ
ಕಿನ್ನಿಗೋಳಿ ಗ್ರಾಮಪಂಚಾಯತ್‌ ವ್ಯಾಪ್ತಿಯ ಕೊಳವೆಬಾವಿಗೆ ಕಟ್ಟಡದ ನೀರನ್ನು ಮರುಪೂರಣದ ನೀರು ಇಂಗಿಸುವ ಅನುಷ್ಠಾನಿಸಲಾಗಿದೆ. ಗ್ರಾಮಪಂಚಾಯತ್‌ನಲ್ಲಿ ಕೊಳವೆಬಾವಿಗಳಿಗೆ ಮಳೆಕೊಲ್ಲು ಯೋಜನೆ ಮಾಡಲಾಗಿದ್ದು ಹಾಗೂ ಮೂರು ಹೊಸಕಿಂಡಿ ಅಣೆಕಟ್ಟು ನಿರ್ಮಾಣ ಮಾಡಿರುವುದರಿಂದ ಅಂರ್ತಜಲ ಹೆಚ್ಚಿದೆ
– ಅರುಣ್‌ ಪ್ರದೀಪ್‌ ಡಿ’ಸೋಜಾ,
ಪಿಡಿಒ ಕಿನ್ನಿಗೋಳಿ ಗ್ರಾ.ಪಂ.

ಹೊಸ ಕೊಳವೆಬಾವಿ
ಯೋಜನೆಗೆ ಸಿದ್ಧತೆ ಕಿನ್ನಿಗೋಳಿ ಗಾಮಪಂಚಾಯತ್‌ ವ್ಯಾಪ್ತಿಯ ಕೆಲವು ಕಡೆ ನೀರಿನ ಸಮಸ್ಯೆ ಈಗಾಗಲೇ ಕಾಣಿಸಿಕೊಂಡಿದ್ದು, ಹೊಸ ಕೊಳವೆ ಬಾವಿ ಯೋಜನೆಗೆ ಸಿದ್ಧಪಡಿಸಲಾಗುವುದು. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಸರಿಯಾಗಿ ಸರಬರಾಜ ಆದರೆ ಹೆಚ್ಚಿನ ನೀರಿನ ಸಮಸ್ಯೆ ಉದ್ಭವಿಸುವುದಿಲ್ಲ.
 - ಫಿಲೋಮಿನಾ ಸಿಕ್ವೇರಾ,
ಅಧ್ಯಕ್ಷರು ಕಿನ್ನಿಗೋಳಿ ಗ್ರಾ.ಪಂ

Advertisement

‡ ರಘುನಾಥ ಕಾಮತ್‌ ಕೆಂಚನಕೆರೆ 

Advertisement

Udayavani is now on Telegram. Click here to join our channel and stay updated with the latest news.

Next