Advertisement

ಮಂಗಳನಲ್ಲಿ ನೀರಿನ ಕೊಳ!

06:20 AM Dec 23, 2018 | |

ಹೊಸದಿಲ್ಲಿ: ಮಂಗಳನಲ್ಲಿ ನೀರಿನ ಕುರುಹು ಇದೆಯೇ ಎಂದು ದಶಕಗಳಿಂದಲೂ ಸಂಶೋಧನೆ ನಡೆಯುತ್ತಿದೆ. ಈವರೆಗೂ ಹಲವು ಬಾರಿ ನೀರಿನ ಕುರುಹು ಕಂಡುಬಂದಿದೆಯಾದರೂ ಅದನ್ನು ಸಾಬೀತುಪಡಿಸುವ ಅಥವಾ ಸಾಕ್ಷೀಕರಿಸುವ ಯಾವುದೇ ಪುರಾವೆ ಲಭ್ಯವಾಗಿರಲಿಲ್ಲ. ಆದರೆ ಈ ಬಾರಿ ಮಂಗಳನಲ್ಲಿ ಸುಮಾರು 82 ಕಿ.ಮೀ ಅಗಲದ ಹಾಗೂ 2 ಕಿ.ಮೀ ಆಳದ ಕೆರೆಯೊಂದು ಇರುವುದು ತಿಳಿದುಬಂದಿದೆ.

Advertisement

ಯುರೋಪಿಯನ್‌ ಸ್ಪೇಸ್‌ ಏಜೆನ್ಸಿಯು ಈ ಚಿತ್ರವನ್ನು ಬಿಡುಗಡೆ ಮಾಡಿದ್ದು, ಮಾರ್ಸ್‌ ಎಕ್ಸ್‌ಪ್ರೆಸ್‌ ನೌಕೆ ಈ ಚಿತ್ರವನ್ನು ಸೆರೆಹಿಡಿದಿದೆ. ಈ ಕೆರೆಯನ್ನು ಕೊರೊಲೆವ್‌ ಎಂದು ಕರೆಯಲಾಗಿದೆ. ಇದರಲ್ಲಿ ಹಿಮಗಡ್ಡೆಯಿದ್ದು, ಇದರ ಮೇಲಿನ ಪದರವನ್ನು ಕೋಲ್ಡ್‌ ಟ್ರಾಪ್‌ ಎಂದು ಗುರುತಿಸಲಾಗಿದೆ. 

ಅಂದರೆ ಇದು ಕೆಳಭಾಗದಲ್ಲಿನ ಮಂಜುಗಡ್ಡೆಯ ವಾತಾವರಣದ ಉಷ್ಣತೆಯಿಂದ ಕರಗದಂತೆ ತಡೆಯುತ್ತದೆ. ಹೀಗಾಗಿ ಈ ಕೆರೆಯು ಎಂದಿಗೂ ಹಿಮದ ರೂಪದಲ್ಲಿಯೇ ಇರುತ್ತದೆ. 2003 ರಲ್ಲಿ ಉಡಾವಣೆ ಮಾಡಲಾಗಿರುವ ಮಾರ್ಸ್‌ ಎಕ್ಸ್‌ಪ್ರೆಸ್‌ನ ಮಹತ್ವದ ಸಂಶೋಧನೆ ಇದಾಗಿದ್ದು, ಇದರಿಂದ ನೀರಿನ ಮೂಲ ಹುಡುಕುವ ವಿಜ್ಞಾನಿಗಳಿಗೆ ಇನ್ನಷ್ಟು ಸಾಧ್ಯತೆಗಳನ್ನು ತೆರೆದಿಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next